ನಟಿ ರಾಖಿ ಸಾವಂತ್ ದಾಂಪತ್ಯ ಕಲಹ | ಪತಿ ಅದಿಲ್ ಖಾನ್ ಬಂಧನ
ನಟಿ ರಾಖಿ ಸಾವಂತ್ ದಾಂಪತ್ಯ ವಿಚಾರ ಈಗಾಗಲೇ ಬೀದಿಗೆ ಬಿದ್ದಿದೆ, ಪತಿ ಅದಿಲ್ ಖಾನ್ ಮೋಸ ಮಾಡಿದ್ದಾನೆ ಎಂದು ರಾಖಿ ಮುಂಬೈನಲ್ಲಿ ದೂರು ನೀಡಿದ್ದು, ಇದೀಗ ಪೊಲೀಸರು ಆದಿಲ್ ಖಾನ್ನನ್ನು ಬಂಧಿಸಿದ್ದಾರೆ.
ಅದಿಲ್ ಬೇರೆ ಹೆಂಗಸಿನ ಜತೆ ಸಂಬಂಧ ಇಟ್ಟುಕೊಂಡು, ನನಗೆ ಮೋಸ ಮಾಡಿದ್ದಾರೆ. ಇದೇ ಕಾರಣಕ್ಕೆ ನಮ್ಮ ಮದುವೆ ವಿಷಯ ಹೊರಗೆ ಹೇಳಿಲ್ಲ ಎಂದು ರಾಖಿ ದೂರಿನಲ್ಲಿ ತಿಳಿಸಿದ್ದಾಳೆ.
ನನಗೆ ಮೋಸ ಆಗಿದೆ, ಆತ ಮಾಧ್ಯಮದ ಎದುರು ಡ್ರಾಮ ಮಾಡ್ತಾನೆ, ನನ್ನ ಹಣವನ್ನು ಕದ್ದಿದ್ದಾನೆ. ಕುರಾನ್ ಮೇಲೆ ಆಣೆ ಮಾಡಿಯೂ ಸುಳ್ಳು ಹೇಳಿದ್ದಾನೆ.
ಆತನನ್ನು ಸಾಯುವವರೆಗೂ ಕ್ಷಮಿಸೋದಿಲ್ಲ ಹಾಗೆ ಸಾಯುವವರೆಗೂ ಪ್ರೀತಿ ಮಾಡುತ್ತೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.