Viral Video : ಅಬ್ಬಾ ! 10 ಅಡಿ ಉದ್ದದ ನಾಗರ ಹಾವಿನ ಜೊತೆ ಮೊಸಳೆಯ ಕಾದಾಟ | ಸೆಣಸಾಟದಲ್ಲಿ ಗೆದ್ದವರಾರು!

Share the Article

ಸಾಮಾನ್ಯವಾಗಿ ಹಾವು ಮುಂಗುಸಿ ಜಗಳ ಆಡಿರುವುದನ್ನು ನೋಡಿರಬಹುದು ಅಥವಾ ಕೇಳಿರಬಹುದು. ಇಂತಹ ಕೆಲವೊಂದು ಘಟನೆಗಳು ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಆಘಾತವನ್ನುಂಟು ಮಾಡುತ್ತವೆ. ಸದ್ಯ ಪ್ರಾಣಿಗಳ ಕಾದಾಟದ ಕುತೂಹಲಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಕಿಂಗ್ ಕೋಬ್ರಾ ಮತ್ತು ಮೊಸಳೆಯನ್ನು ಒಳಗೊಂಡ ವಿಡಿಯೋವೊಂದು ಇಲ್ಲಿ ವೈರಲ್ ಆಗಿದೆ . ಈ ವಿಡಿಯೋದಲ್ಲಿ 10 ಅಡಿ ಉದ್ದದ ನಾಗರ ಹಾವಿನ ಜತೆ ಬೃಹದಾಕಾರದ ಮೊಸಳೆಯ ನಡುವೆ ದೊಡ್ಡ ಕಾಳಗ ನಡೆದಿದೆ.

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ನಾಗರ ಹಾವು ಬಂದು ಮೊಸಳೆಯನ್ನು ನೋಡಿ ವೇಗವಾಗಿ ದಾಳಿ ಮಾಡಿರುವುದನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ, ನಾಗರಹಾವು ಮೊಸಳೆ ಮೇಲೆ ಹೇಗೆ ಸಂಚನ್ನು ರೂಪಿಸುತ್ತದೆ ಮತ್ತು ಅದನ್ನು ತನ್ನ ಹಿಡಿತದಲ್ಲಿ ಹಿಡಿಯುತ್ತದೆ ಎಂಬುದನ್ನು ನೋಡಬಹುದು.

ಸದ್ಯ ಈ ವಿಡಿಯೋವನ್ನು ಹಲವಾರು ಸಾವಿರ ಜನ ವೀಕ್ಷಣೆ ಮಾಡಿದ್ದು ಸಾವಿರಾರು ಲೈಕ್‌ಗಳನ್ನು ಪಡೆದಿದೆ. ಇದನ್ನು ಯೂ ಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಸದ್ಯ ನೀವು ಸಹ ಈ ವಿಡಿಯೋ ನೋಡಿದಲ್ಲಿ ಆತಂಕಗೊಳ್ಳುವುದು ಖಂಡಿತಾ.

Leave A Reply