Home latest ಮೈಲಾರಲಿಂಗೇಶ್ವರ ಕಾರ್ಣಿಕ : ಗೊರವಯ್ಯ ನುಡಿದದ್ದಾದರೂ ಏನು ? ಏನು ಈ ಸಲದ ಭವಿಷ್ಯ?

ಮೈಲಾರಲಿಂಗೇಶ್ವರ ಕಾರ್ಣಿಕ : ಗೊರವಯ್ಯ ನುಡಿದದ್ದಾದರೂ ಏನು ? ಏನು ಈ ಸಲದ ಭವಿಷ್ಯ?

Hindu neighbor gifts plot of land

Hindu neighbour gifts land to Muslim journalist

ಜನರ ನಂಬಿಕೆಯ ತಾಣವಾಗಿರುವ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರ ಗೊರವಯ್ಯ ಅವರ ಭವಿಷ್ಯವಾಣಿ ಕೇಳಲು ಸಾವಿರಾರು ಮಂದಿ ಕಾತುರದಿಂದ ಎದುರು ನೋಡೋದು ವಾಡಿಕೆ. ಇದೀಗ, ಜನರ ಕಾಯುವಿಕೆ ಅಂತ್ಯ ಕಂಡಿದ್ದು ಮೈಲಾರಲಿಂಗೇಶ್ವರ ಕಾರ್ಣಿಕವನ್ನು ನುಡಿದಿದ್ದಾರೆ.

ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಜನರು ಹೆಚ್ಚು ನಂಬುತ್ತಾರೆ ಎಂಬುದಕ್ಕೆ ಅಲ್ಲಿ ಸಾಗರೋಪಾತಿಯಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿ. ಇಡೀ ವರ್ಷದ ಕಾರ್ಣಿಕವನ್ನು ವರ್ಷಕ್ಕೊಮ್ಮೆ ಗೊರವಯ್ಯ ನುಡಿಯುತ್ತಾರೆ. ಈ ಸಂದರ್ಭದಲ್ಲಿ ಭವಿಷ್ಯದ ಆಗು ಹೋಗುಗಳ ಬಗ್ಗೆ ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಒಗಟಾಗಿ ಗೊರವಯ್ಯ ನುಡಿಯುತ್ತಾರೆ. ಈ ಬಿಲ್ಲೇರಿ ಕಾರ್ಣಿಕ ನುಡಿಯುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದಲ್ಲದೆ ಆ ಭಾಗದ ಜನ ಅದನ್ನು ಗಾಢವಾಗಿ ನಂಬುತ್ತಾರೆ. ಭವಿಷ್ಯದಲ್ಲಿ ರಾಜಕೀಯ ಮಳೆ ಬೆಳೆ ಏನಾಗಲಿದೆ ಎನ್ನುವುದರ ಕುರಿತು ಗೊರವಯ್ಯ ನುಡಿಯುವ ಮಾತುಗಳು ನಿಜವಾಗುತ್ತವೆ ಎಂಬ ನಂಬಿಕೆ ಇದೆ.

ಪ್ರತಿ ವರ್ಷದಂತೆ ಈ ವರ್ಷವು ಕಾರ್ಣಿಕವನ್ನು ನುಡಿದಿದ್ದಾರೆ. ಈ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳೋದೆ ವಿಸ್ಮಯ. ಏಕೆಂದರೆ, ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿದು ಬಿಲ್ಲನ್ನು ಕೈ ಬಿಡುತ್ತಾರೆ. ಆಗ ಕೆಳಗಿರುವ ಜನರು ಅವರನ್ನು ಹಿಡಿಯುತ್ತಾರೆ. ಈ ಭವಿಷ್ಯ ನುಡಿ ಕೇಳಲು ಜನರು ಕೌತುಕದಿಂದ ಎದುರು ನೋಡುತ್ತಾರೆ. ಇದೀಗ, ಗೊರವಯ್ಯ ಭವಿಷ್ಯ ನುಡಿ ಹೀಗಿದೆ. ಗೊರವಯ್ಯ ಬಿಲ್ಲನ್ನು ಏರಿ , ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿದಿದ್ದಾರೆ. ಈ ವಾಕ್ಯವನ್ನು ಕೇಳಿದ ಮೇಲೆ ಇದು ಶುಭ ಸೂಚಕ ಅಥವಾ ಶುಭನುಡಿ ಎನ್ನುತ್ತಿದ್ದಾರೆ. ಸಾಮಾನ್ಯವಾಗಿ ಕೃಷಿಯನ್ನು ನಂಬಿಕೊಂಡ ಜನ ಮಳೆ ಬೆಳೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಈ ಬಾರಿಯ ಭವಿಷ್ಯ ನುಡಿ ಅನುಸಾರ, ಈ ವರ್ಷ ಮಳೆ ಬೆಳೆ ಸಮೃದ್ದವಾಗಿರಲಿದೆ ಎಂದು ಗೊರವಯ್ಯ ನುಡಿದ ಒಗಟಿನ ತಾತ್ಪರ್ಯವನ್ನು ಅರ್ಚಕರು ಕಾರ್ಣಿಕದ ವಿವರಣೆಯನ್ನೂ ನೀಡಿದ್ದಾರೆ.

ಗೊರವಯ್ಯ ಕಾರ್ಣಿಕವನ್ನು ನುಡಿಯುವ ಶೈಲಿಯೇ ವಿಭಿನ್ನ. ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿದು ಬಿಲ್ಲನ್ನು ಕೈ ಬಿಟ್ಟರೆ ಇದನ್ನು ಕಣ್ಣಾರೆ ನೋಡುವುದೇ ಒಂದು ಕಣ್ಣಿಗೆ ಹಬ್ಬ ಎಂಬುದು ಅಲ್ಲಿನವರ ಅನಿಸಿಕೆ. ಈ ಬಾರಿಯ ಕಾರ್ಣಿಕದ ನುಡಿಯಲ್ಲಿ ಭಾಗ್ಯದ ನಿಧಿ ತುಂಬಿ ತುಳುಕಲಿದೆ. ಮಳೆ ಬೆಳೆ ಸಮೃದ್ದವಾಗಿರಲಿದ್ದು, ಅದೇ ರೀತಿ ರೋಗ ರುಜಿನಗಳು ಹೆಚ್ಚಾಗಿ ಕಾಣಿಸಿಕೊಳ್ಳದು.ರಾಜಕೀಯ ಸ್ಥಿತಿಗತಿಗಳು ಸುಧಾರಿಸುತ್ತವೆ ಎಂದು ಅಲ್ಲಿನ ಅರ್ಚಕರು ಗೊರವಯ್ಯನ ನುಡಿಯ ಸಾರಾಂಶದ ವಿವರಣೆ ನೀಡಿದ್ದಾರೆ.