Home latest ಕ್ಯಾನ್ಸರ್‌ ಪೀಡಿತ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಅಮೆರಿಕ ಏರ್‌ಲೈನ್ಸ್‌! ಕೊಂಚವೂ ಕರಗಲಿಲ್ಲ ಗಗನ ಸಖಿಯರ ಮನಸ್ಸು!!

ಕ್ಯಾನ್ಸರ್‌ ಪೀಡಿತ ಮಹಿಳೆಯನ್ನು ವಿಮಾನದಿಂದ ಕೆಳಗಿಳಿಸಿದ ಅಮೆರಿಕ ಏರ್‌ಲೈನ್ಸ್‌! ಕೊಂಚವೂ ಕರಗಲಿಲ್ಲ ಗಗನ ಸಖಿಯರ ಮನಸ್ಸು!!

Hindu neighbor gifts plot of land

Hindu neighbour gifts land to Muslim journalist

ಈ ವಿಮಾನಗಳ ವಿವಾದಗಳ ಬಗ್ಗೆ ಕೇಳಿ ಕೇಳಿ ಸಾಕಾಯ್ತಪ್ಪ. ಪ್ರತೀ ದಿನ ಒಂದೊಂದು ಏರ್ಲೈನ್ಸ್ ಗಳು ಒಂದೊಂದು ಕಾರಣದಿಂದ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗ್ತಿವೆ. ಯಾಕೋ, ಹಾರೋ ಯಂತ್ರದ ಹಕ್ಕಿಗಳ ಸಮಸ್ಯೆಗಳು ಕೊನೆಗಾಣುವ ಲಕ್ಷಣಗಳೇ ಕಾಣುತ್ತಿಲ್ಲ. ಇದೀಗ ಅಮೇರಿಕಾ ಏರ್ಲೈನ್ಸ್ ಕೂಡ ಬೇಕಂತಲೇ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಂತಾಗಿದೆ.

ಹೌದು, ಕ್ಯಾನ್ಸರ್‌ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯನ್ನು ತನ್ನ ವಿಮಾನದಿಂದ ಕೆಳಗೆ ಇಳಿಸಿ, ಅಮಾನವೀಯ ಘಟನೆಯೊಂದಕ್ಕೆ ಅಮೇರಿಕಾ ಏರ್ಲೈನ್ಸ್ ಸಾಕ್ಷಿಯಾಗಿದೆ. ಪ್ರಕರಣ ಜನವರಿ 30ರಂದು ನವದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೀನಾಕ್ಷಿ ಸೇನ್‌ ಗುಪ್ತಾ ಎಂಬುವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಮಾನ ಏರುವಾಗ ತಮ್ಮ ಹ್ಯಾಂಡ್‌ಬ್ಯಾಗ್‌ ಅನ್ನು ಮೇಲಿಡಲು ಗಗನ ಸಖಿಯರ ಸಹಾಯ ಕೋರಿದ್ದಾರೆ. ಅದು ಭಾರ ಇದ್ದ ಕಾರಣ ಸ್ವಲ್ಪ ಮೇಲೆತ್ತಿ ಕೊಡಿ ಎಂದಿದ್ದಾರೆ. ಆದರೆ, ವಿಮಾನದ ಸಿಬ್ಬಂದಿ ಸಹಾಯ ಮಾಡುವುದರ ಬದಲಾಗಿ, ಇದು ತಮ್ಮ ಕೆಲಸವಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ಮೀನಾಕ್ಷಿ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ.

ಮೀನಾಕ್ಷಿ ಸೇನ್‌ಗುಪ್ತಾ ಈ ಘಟನೆ ವಿರುದ್ಧ ದೂರು ದಾಖಲಿಸಿದ ನಂತರ ಇದು ಬೆಳಕಿಗೆ ಬಂದಿದೆ. ಈ ಬಗ್ಗೆ ಮೀನಾಕ್ಷಿ ಗುಪ್ತಾ ದೆಹಲಿ ಪೊಲೀಸರಿಗೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ದೂರು ನೀಡಿದ್ದು, ದೂರಿನಲ್ಲಿ ‘ತನ್ನ ಕೈಗಳು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಯಿಂದ ದುರ್ಬಲವಾಗಿರುವುದರಿಂದ ಹ್ಯಾಂಡ್‌ಬ್ಯಾಗ್‌ ಮೇಲಿಡಲು ಸಾಧ್ಯವಿಲ್ಲ ಎಂದು ತಿಳಿಸಿದರೂ ಗಗನಸಖಿ ಸಹಾಯ ಮಾಡಲಿಲ್ಲ. ವಿಮಾನದ ನಿಗದಿತ ಸೀಟಿಗೆ ತೆರಳಲು ತಾನು ವೀಲ್‌ಚೇರ್‌ ಸಹಾಯವನ್ನು ಪಡೆದಿದ್ದೆ. ಅಲ್ಲದೆ ನಾನು ಹಲವು ಬಾರಿ ಆಕೆಯ ಸಹಾಯ ಯಾಚಿಸಿದೆ. ಆದರೆ ಗಗನಸಖಿ ತುಂಬಾ ನಿಷ್ಟುರವಾಗಿ ನಡೆಸಿಕೊಂಡರು. ನಿಮಗೆ ಈ ವಿಮಾನದದಲ್ಲಿ ಆರಾಮದಾಯಕವಾಗಿಲ್ಲದಿದ್ದರೆ ವಿಮಾನದಿಂದ ಇಳಿದುಹೋಗಬಹುದೆಂದು ಹೇಳಿದರು. ಅವರೆಲ್ಲರೂ ನನ್ನನ್ನು ಇಳಿಸುವ ನಿರ್ಧಾರಕ್ಕೆ ಬಂದರು’ ಎಂದು ಉಲ್ಲೇಖಿಸಿದ್ದಾರೆ.

ನಾನು ಬ್ರೇಸ್‌ ಧರಿಸಿದೆ. ಇದು ಎಲ್ಲರಿಗೂ ಕಾಣಿಸುವಂತಿತ್ತು. ಇದರಿಂದ ನಾನು ಅನಾರೋಗ್ಯ ಹೊಂದಿದ್ದೇನೆ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ನಾನು ಯಾವುದೇ ಭಾರವನ್ನು ಕೈಯಲ್ಲಿ ಎತ್ತಿಕೊಳ್ಳುವಂತೆ ಇಲ್ಲ. ಹೆಚ್ಚು ನಡೆಯುವುದರಿಂದ ಮತ್ತು ಭಾರ ಎತ್ತುವುದರಿಂದ ನಾನು ದೈಹಿಕವಾಗಿ ದುರ್ಬಲವಾಗುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಗ್ರೌಂಡ್‌ ಸ್ಟಾಫ್‌ಗಳು ನನಗೆ ತುಂಬಾ ಬೆಂಬಲ ನೀಡಿದ್ದಾರೆ. ವಿಮಾನದೊಳಗೆ ಹೋಗಲು ಮತ್ತು ಸೀಟಿನ ಬದಿಯಲ್ಲಿ ಬ್ಯಾಗ್ ಇರಿಸಲು ನನಗೆ ಸಹಾಯ ಮಾಡಿದರು. ಆದರೆ, ವಿಮಾನದೊಳಗೆ ನನಗೆ ಗಗನಸಖಿಯರು ಸಹಾಯ ಮಾಡಲಿಲ್ಲ. ನನ್ನ ಮನವಿಯನ್ನು ನಿರಾಕರಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸೇನ್‌ಗುಪ್ತಾ ಅವರು ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹೊರಹಾಕಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು, ವಿಷಯದ ಕುರಿತು ಮಧ್ಯಪ್ರವೇಶಿಸುವಂತೆ ನೆಟ್ಟಿಗರು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ದೆಹಲಿಯ ಮಹಿಳಾ ಆಯೋಗಕ್ಕೆ ಟ್ಯಾಗ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ವಿವರಣೆ ನೀಡುವಂತೆ ಭಾರತದ ವಿಮಾನಯಾನ ನಿರ್ದೇಶನಾಲಯವು ಅಮೆರಿಕ ಏರ್‌ಲೈನ್ಸ್‌ಗೆ ಸೂಚಿಸಿದೆ.