ಅಂಚೆಕಚೇರಿಯ ಈ ಯೋಜನೆ ನಿಮಗೆ ನೆಮ್ಮದಿ ತರುತ್ತದೆ, ಈ ಯೋಜನೆಯಿಂದ ದೊರೆಯುತ್ತೆ ಕೈ ತುಂಬಾ ಹಣ ! ಯಾವುದೀ ಯೋಜನೆ ? ಹೆಚ್ಚಿನ ಮಾಹಿತಿ ಇಲ್ಲಿದೆ
ಅಂಚೆ ಕಚೇರಿಯ ಹಲವಾರು ಯೋಜನೆಗಳು ಜನರಿಗೆ ಉಪಯುಕ್ತವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡಿದೆ. ಹಲವು ವಸ್ತುಗಳ ಬೆಲೆಯಲ್ಲಿ ಅಗ್ಗವಾಗಿದೆ. ಹಾಗೇ ಈ ಸಂದರ್ಭದಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ.
ಬಜೆಟ್ ನಲ್ಲಿ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಹೂಡಿಕೆ ಮಿತಿಯನ್ನು ಹೆಚ್ಚಿಸಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಿತಿ ರೂ. 4.5 ಲಕ್ಷದಿಂದ ರೂ. 9 ಲಕ್ಷ ಹೆಚ್ಚಿಸಲಾಗಿದ್ದು, ಜಂಟಿ ಖಾತೆಯಲ್ಲಿ ಹೂಡಿಕೆ ಮಾಡುವ ಮಿತಿ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಸದ್ಯ ಈ ಯೋಜನೆಯ ಬಡ್ಡಿಯು ಶೇಕಡಾ 7.1 ರಷ್ಟಿದ್ದು, ಪ್ರತಿ ತಿಂಗಳು ಬಡ್ಡಿ ಪಾವತಿಸಲಾಗುತ್ತದೆ. ಹಾಗೇ ಈ ಬಡ್ಡಿ ಮೊತ್ತವನ್ನು ಪ್ರತಿ ತಿಂಗಳು ಹಿಂಪಡೆಯದಿದ್ದರೆ, ಆಗ ಆ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಇನ್ನು ನೀವು ಈ ಯೋಜನೆಯಲ್ಲಿ ಒಂದು ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ನಿಮಗೆ 592 ರೂಪಾಯಿ ಸಿಗಲಿದೆ. ನೀವು ಈ ಯೋಜನೆಯಲ್ಲಿ 2 ಲಕ್ಷ ರೂ. ಹೂಡಿಕೆ ಮಾಡಿದ್ರೆ 1183 ನಿಮ್ಮ ಖಾತೆಗೆ ಬರಲಿದೆ. 3 ಲಕ್ಷ ಹೂಡಿಕೆ ಮಾಡಿದ್ರೆ ನಿಮಗೆ 1,775 ರೂ ಸಿಗಲಿದೆ.
ಹೆಚ್ಚು ಹೂಡಿಕೆ ಮಾಡಿದ್ರೆ ಹೆಚ್ಚು ಬಡ್ಡಿ ದೊರೆಯುತ್ತದೆ. ಈ ಯೋಜನೆಗೆ ಹತ್ತು ವರ್ಷ ಮೇಲ್ಪಟ್ಟ ಸೇರಬಹುದು. ಹಾಗೇ ಈ ಯೋಜನೆಯ ಮುಕ್ತಾಯ ಅವಧಿ 5 ವರ್ಷಗಳಾಗಿರುತ್ತದೆ. ಅಂಚೆ ಕಚೇರಿಯ ಈ ಯೋಜನೆ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿದೆ. ಈ ಯೋಜನೆಯಲ್ಲಿ ಹೆಚ್ಚಾಗಿ ಹಿರಿಯರು ಹೂಡಿಕೆ ಮಾಡುತ್ತಾರೆ. ಆದರೆ ಹತ್ತು ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.