Railways Subsidy : ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ !

ರೈಲ್ವೇ ಪ್ರಯಾಣಿಕರಿಗೆ ಭಾರೀ ಸಿಹಿಸುದ್ದಿಯೊಂದು ಇಲ್ಲಿದೆ. ಭಾರತೀಯ ರೈಲ್ವೆಯು ಕೆಲವು ವರ್ಗದ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳಲ್ಲಿ ಸಬ್ಸಿಡಿ ನೀಡಲಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದಾರೆ.

2019-20 ನೇ ಸಾಲಿನಲ್ಲಿ ರೈಲ್ವೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯು ರೂ.59,837 ಕೋಟಿ ಸಬ್ಸಿಡಿ ನೀಡಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಸರಾಸರಿ ಶೇ.53 ರಷ್ಟು ರಿಯಾಯಿತಿ ಸಿಗುತ್ತದೆ. ವಿಕಲಚೇತನರು, ವಿದ್ಯಾರ್ಥಿಗಳು, ರೋಗಿಗಳು ಹೀಗೇ ಹಲವು ವರ್ಗಗಳಿಗೆ ಇಂದಿಗೂ ರೈಲು ಟಿಕೆಟ್‌ನಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಇದರಿಂದ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ. ಈ ರಿಯಾಯಿತಿಯಿಂದ ಆರ್ಥಿಕವಾಗಿ ಸಹಾಯ ಆಗಲಿದೆ.

ಕೊರೋನಾ ಸಮಯದ ನಂತರ ವಯಸ್ಸಾದವರಿಗೆ ರೈಲು ಟಿಕೆಟ್ ಮೇಲಿನ ರಿಯಾಯಿತಿಯನ್ನು ನೀಡಿರಲಿಲ್ಲ. ಆ ನಂತರ ಪುನಃರಾರಂಭಿಸಿಲ್ಲ. 60 ವರ್ಷ ಮೇಲ್ಪಟ್ಟವರಿಗೆ ಈ ಹಿಂದೆ ನೀಡಲಾಗಿದ್ದ ರಿಯಾಯಿತಿಯನ್ನು ಮರುಸ್ಥಾಪಿಸುವ ಬಗ್ಗೆ ಸರ್ಕಾರ ಸದ್ಯ ಯಾವುದೇ ರೀತಿ ಸ್ಪಷ್ಟನೆ ನೀಡಿಲ್ಲ. ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರು ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ನಿಲುಗಡೆಯಾದ ರಿಯಾಯಿತಿಯನ್ನು ಮರುಸ್ಥಾಪಿಸುವ ಬಗ್ಗೆ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ರೈಲ್ವೇ ಸಚಿವರು, ಸ್ಥಾಯಿ ಸಮಿತಿಯು ಕನಿಷ್ಠ ಸ್ಲೀಪರ್, ಥರ್ಡ್ ಎಸಿಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಪರಿಶೀಲಿಸಲು ಸೂಚಿಸಿದೆ ಎಂದು ಹೇಳಿದರು.

ಸದ್ಯ ಅಂಗವಿಕಲರು, ರೋಗಿಗಳು ಮತ್ತು ವಿದ್ಯಾರ್ಥಿಗಳು ರೈಲು ದರದಲ್ಲಿ ರಿಯಾಯಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. 2019 ಮತ್ತು 2022 ರ ನಡುವೆ ಅಂಗವಿಕಲ ಪ್ರಯಾಣಿಕರಿಗೆ ರಿಯಾಯಿತಿ ರೂ. 209 ಕೋಟಿ ಲಭಿಸಿದ್ದು, ರೋಗಿಗಳಿಗೆ 221 ಕೋಟಿ ಹಾಗೂ ವಿದ್ಯಾರ್ಥಿಗಳಿಗೆ 60 ಕೋಟಿ ರೂಪಾಯಿ ರಿಯಾಯಿತಿ ಲಭ್ಯವಾಗಿದೆ.

ಭಾರತೀಯ ರೈಲ್ವೆ ಹಿರಿಯ ನಾಗರಿಕರಿಗೆ ರಿಯಾಯಿತಿಗಳನ್ನು ಮರುಸ್ಥಾಪಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸ್ಲೀಪರ್ ಮತ್ತು ಥರ್ಡ್ ಎಸಿ ತರಗತಿಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ರೈಲು ಟಿಕೆಟ್‌ಗಳಲ್ಲಿ ರಿಯಾಯಿತಿ ನೀಡಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿಲ್ಲ. ರಿಯಾಯಿತಿ ನೀಡಿದರೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

Leave A Reply

Your email address will not be published.