Supreme Court : ಮಹಿಳೆಯರಿಗೆ ಸಿಹಿ ಸುದ್ದಿ | ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ ಸುಪ್ರೀಂ !
ಆಸ್ತಿ ವಿಚಾರದಲ್ಲಿ ಕಿತ್ತಾಟಗಳು ಹಿಂದೆ ಹಾಗೂ ಇಂದು ನಡೆಯುತ್ತಲೇ ಇದೆ. ಸಮಾಜದಲ್ಲಿ ಈ ಬಗ್ಗೆ ಏನಾದರೂ ಒಂದು ಅವಘಡಗಳು ಸಂಭವಿಸುತ್ತಲೇ ಇವೆ. ಇದರಿಂದ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶಗಳು ಎದುರಾಗುತ್ತವೆ. ಇದೀಗ ಈ ಆಸ್ತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪಿತ್ರಾರ್ಜಿತ / ಪೂರ್ವಜರ ಆಸ್ತಿಯ ಪಾಲುದಾರಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ನ್ಯಾಯಾಲಯವು ಪೂರ್ವಜರ ಆಸ್ತಿಯಲ್ಲಿ ಸಹೋದರರಿಗಿಂತ ಮಗಳಿಗೆ ಹೆಚ್ಚಿನ ಆದ್ಯತೆ ಇರಬೇಕೆಂಬ ಸೂಚನೆಯನ್ನು ನೀಡಿದೆ. ಮನೆಯ ಹೆಣ್ಣು ಮಗಳಿಗೆ ಆಸ್ತಿ ವಿಚಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದಿದೆ.
ಅವಿಭಕ್ತ ಕುಟುಂಬದಲ್ಲಿರುವ ಹಿರಿಯ ವ್ಯಕ್ತಿಯು ಆಸ್ತಿಪತ್ರ /ಉಯಿಲು ಬರೆಯದೆ ತೀರಿ ಹೋದ ಸಂದರ್ಭದಲ್ಲಿ ಅವನ ಆಸ್ತಿಯಲ್ಲಿ ಅವನ ಮಗಳಿಗೂ ಹಕ್ಕಿರುತ್ತದೆ ಎಂದು ತಿಳಿಸಿದೆ. ತೀರಿಹೋದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ತೀರಿಹೋದ ವ್ಯಕ್ತಿಯ ಮಗಳಿಗೆ ಆತನ ಆಸ್ತಿಯಲ್ಲಿ ಮೊದಲ ಆದ್ಯತೆಯಿರುತ್ತದೆ ಎಂದು 51 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿಗಳಿದ್ದ ಎಸ್.ಅಬ್ದುಲ್ ನಜೀರ್ ಹಾಗೂ ಕೃಷ್ಣ ಮುರಾರಿ ಅವರ ಪೀಠವು ತಿಳಿಸಿದೆ. ಹಾಗೂ ಈ ಆಸ್ತಿ ವಿಭಜನೆಯು ಹಿಂದು ವಿಚ್ಛೇದನ ಕಾಯಿದೆ 1956 ಜಾರಿಗೆ ಬರುವ ಮುಂಚಿನ ಆಸ್ತಿ ವಿಭಜನೆಯ ಪ್ರಕ್ರಿಯೆಗೂ ಅಪ್ಲೈ ಆಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಿದೆ.
ಹಿಂದು ವಿಚ್ಛೇದನ ಕಾಯಿದೆಯು ಹೆಣ್ಣು ಮಕ್ಕಳಿಗೆ ತಂದೆಯ ಅಸ್ತಿಯಲ್ಲಿ ಸಮಾನ ಹಕ್ಕನ್ನು ನೀಡುತ್ತದೆ. ಅಲ್ಲದೆ, ಗಂಡು ಸಂತಾನವಿಲ್ಲದ ವ್ಯಕ್ತಿಯು ಸಾವನ್ನಪ್ಪಿದರೆ, ಆತನ ಸಾವಿನ ನಂತರ ಆತನಿಗೆ ಸಂಬಂಧಿಸಿದ ಆಸ್ತಿಯು ಸಾವನ್ನಪ್ಪಿದ ವ್ಯಕ್ತಿಯ ಮಗಳಿಗೆ ಸಲ್ಲುತ್ತದೆ. ಈ ವ್ಯವಸ್ಥೆಯು ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಹಾಗೂ ಪಿತ್ರಾರ್ಜಿತ ಆಸ್ತಿ ಇವೆರಡೂ ರೂಪಗಳಿಗೆ ಅನ್ವಯಿಸುತ್ತದೆ. ಇದೀಗ ಸುಪ್ರೀಂ ಕೋರ್ಟ್ ಈ ನಿಯಮವನ್ನು 1956 ರ ಮುಂಚೆಯೂ ಮಾಡಲಾಗಿರುವ ಆಸ್ತಿ ವಿಭಜನೆಗೂ ಅನ್ವಯಿಸುತ್ತದೆ ಎಂದು ಹೇಳಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಜೀವನಕ್ಕೆ ಸಹಕಾರಿಯಾಗಲಿದೆ.