Dates Side Effects : ನಿಮಗೇನಾದರೂ ಈ ಖಾಯಿಲೆ ಇದೆಯೇ? ಹಾಗಾದರೆ ತಪ್ಪಿ ಕೂಡ ಖರ್ಜೂರ ತಿನ್ನಬೇಡಿ!

ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು. ಇದಕ್ಕಾಗಿ ಹಣ್ಣು ಹಂಪಲುಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಜೊತೆಗೆ ಡ್ರೈ ಫ್ರೂಟ್ಸ್ ಸೇವನೆಯು ಉತ್ತಮವೆನ್ನುತ್ತಾರೆ. ಡ್ರೈ ಫ್ರೂಟ್ಸ್ ಎಂದಾಕ್ಷಣ ನೆನಪಿಗೆ ಬರೋದು ಖರ್ಜೂರ. ಉತ್ತಮ ಪೋಷಕಾಂಶದಿಂದ ಕೂಡಿದ್ದು, ಅನೇಕ ಸಿಹಿ ಖಾದ್ಯಗಳಿಗೂ ಬಳಸುವ ಖರ್ಜೂರ, ಹಲವಾರು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ನಾರಿನಂಶ ಇತ್ಯಾದಿಗಳ ಉತ್ತಮ ಮೂಲವಾಗಿದೆ. ಅದರಲ್ಲೂ ಡಯಟ್ ಮಾಡುವವರು ಬೆಳಗ್ಗೆ ಎದ್ದಾಗ ಖರ್ಜೂರ ತಿನ್ನುವುದು ಹೆಚ್ಚು ಲಾಭವನ್ನು ನೀಡುತ್ತದೆ. ಇಷ್ಟೆಲ್ಲಾ ಪ್ರಯೋಜನಗಳ ಗಣಿಯಾಗಿರುವ ಖರ್ಜೂರದ ಸೇವನೆಯಿಂದಲು ಕೆಲವೊಂದು ಅಡ್ಡ ಪರಿಣಾಮಗಳನ್ನು ಹೊಂದಿದೆ ಎಂದರೆ ನಂಬುತ್ತೀರಾ? ಈ ಕಾಯಿಲೆಯಿರುವವರು ಖರ್ಜೂರ ತಿಂದರೆ ಎಷ್ಟೆಲ್ಲಾ ಅಪಾಯವಿದೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ.

ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಕಾರ್ಬೋಹೈಡ್ರೇಟ್ ದೊರೆಯುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಅನೇಕ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ನಮ್ಮ ದೇಹವನ್ನು ರಕ್ಷಿಸುತ್ತವೆ. ಇದು ಕ್ಯಾಲೋರಿಗಳು, ಫೈಬರ್, ವಿಟಮಿನ್ ಬಿ 6, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ತಾಮ್ರದಿಂದ ಸಮೃದ್ಧವಾಗಿದೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ, ಅತಿಯಾದ ಖರ್ಜೂರದ ಸೇವನೆಯಿಂದ ಅನೇಕ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಹೈಪೊಗ್ಲಿಸಿಮಿಯಾ:- ಟೈಪ್-2 ಮಧುಮೇಹ ಹೊಂದಿರುವ ರೋಗಿಗಳು ಖರ್ಜೂರವನ್ನು ತಿನ್ನುವುದರಿಂದ ಪ್ರಯೋಜನ ಪಡೆಯುತ್ತಾರೆ. ಆದರೆ ನೀವು ಅದನ್ನು ಅತಿಯಾಗಿ ಸೇವಿಸಿದರೆ, ಹೈಪೊಗ್ಲಿಸಿಮಿಯಾದಿಂದ ಬಳಲಬಹುದು. ಅಲ್ಲದೆ ನಿಮ್ಮ ದೇಹದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಇದು ನಿಮ್ಮ ದೇಹದಲ್ಲಿ ದೌರ್ಬಲ್ಯ ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು.

ತೂಕ ಹೆಚ್ಚುತ್ತದೆ :- ತೂಕ ಕಡಿಮೆ ಮಾಡಲು ನೀವು ಖರ್ಜೂರ ಸೇವಿಸುತ್ತೀರಾ ಎಂದಾದರೆ ಇದು ಖಂಡಿತ ಅಸಾಧ್ಯದ ಮಾತು. ಖರ್ಜೂರ ಫೈಬರ್‌ಗಳ ಉತ್ತಮ ಮೂಲವಾಗಿದ್ದು, ಇದು ಹೆಚ್ಚು ಸಮಯ ಹಸಿವಾಗದಂತೆ ತಡೆಯುತ್ತದೆ, ಪದೇ ಪದೇ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ, ಇದು ಒಂದು ರೀತಿ ತೂಕ ಇಳಿಸಲು ಕಾರಣವಾದರೂ, ಅವುಗಳಲ್ಲಿರುವ ಹೆಚ್ಚಿನ ಕ್ಯಾಲೊರಿಯು ತೂಕ ಕಡಿಮೆ ಮಾಡುವ ನಮ್ಮ ಪ್ರಯತ್ನವನ್ನು ತಡೆಯುತ್ತದೆ. ಆದರೆ ಅತಿಯಾಗಿ ಸೇವಿಸದೆ ಮಿತವಾಗಿ ಸೇವಿಸಿದರೆ ತೂಕ ಇಳಿಸಲು ಸಾಧ್ಯವಾಗಬಹುದು.

ಹಲ್ಲು ಮತ್ತು ಒಸಡಿನ ಸಮಸ್ಯೆ :- ಖರ್ಜೂರವು ಫ್ಲೋರಿನ್‌ನ ಉತ್ತಮ ಮೂಲವಾಗಿದ್ದು ಅದು ನಮ್ಮ ಹಲ್ಲುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ನಮ್ಮ ಹಲ್ಲಿನ ದಂತಕವಚವನ್ನು ಬಲಪಡಿಸುತ್ತದೆ ಮತ್ತು ಹಲ್ಲುಗಳು ಕೊಳೆಯದಂತೆ ತಡೆಯುತ್ತದೆ. ನಮ್ಮ ಬಾಯಿಯ ಆರೋಗ್ಯಕ್ಕೆ ಖರ್ಜೂರವು ಉತ್ತಮ. ಆದರೂ, ಖರ್ಜೂರ ನಮ್ಮ ಹಲ್ಲುಗಳಿಗೆ ಅಷ್ಟೊಂದು ಒಳ್ಳೆಯದಲ್ಲ ಎಂಬುದನ್ನು ಸಹ ಗಮನಿಸುವುದು ಮುಖ್ಯ. ಖರ್ಜೂರವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ, ಇದು ಹಲ್ಲುಗಳು ಕೊಳೆಯುವುದನ್ನೂ ಪ್ರಚೋದಿಸುತ್ತದೆ ಮತ್ತು ಕುಳಿಗಳಿಗೆ ಕಾರಣವಾಗುತ್ತದೆ.

ಅಲರ್ಜಿ :- ಹೆಚ್ಚು ಖರ್ಜೂರವನ್ನು ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ. ಈ ಹಣ್ಣಿನಲ್ಲಿ ಸಲ್ಫೈಡ್ ಇರುತ್ತದೆ. ಇದು ಅಲರ್ಜಿಯನ್ನು ಉಂಟುಮಾಡುತ್ತದೆ. ಇದು ನಿಮ್ಮ ಕಣ್ಣುಗಳಲ್ಲಿ ತುರಿಕೆ ಮತ್ತು ಕೆಂಪು ಕಣ್ಣುಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಕೆಮ್ಮು :- ನೀರು ಹಾಗೂ ಖರ್ಜೂರ ಒಟ್ಟಾಗಿ ಸೇವಿಸುವುದು ಆರೋಗ್ಯಕರವಲ್ಲ. ಅಧ್ಯಯನಗಳ ಪ್ರಕಾರ, ಅಧಿಕ ಸಕ್ಕರೆಯ ಮಟ್ಟಗಳು ಖರ್ಜೂರ ಮತ್ತು ನೀರಿನ ನಡುವಿನ ಪರಸ್ಪರ ಕ್ರಿಯೆಯಿಂದಾಗಿ ಅನಿಲ ರಚನೆಯಾಗಿರಬಹುದು. ಖರ್ಜೂರ ತಿಂದ ತಕ್ಷಣ ನೀರು ಕುಡಿಯುವುದು ಕೆಮ್ಮನ್ನು ಸಹ ಉಂಟುಮಾಡಬಹುದು.

Leave A Reply

Your email address will not be published.