ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಎಂಟ್ರಿ | ಇದರ ವೈಶಿಷ್ಟ್ಯತೆ ಅದ್ಭುತ !

ಸ್ಮಾರ್ಟ್ ವಾಚ್ ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಆದ್ರೆ ಈ ಸ್ಮಾರ್ಟ್ ವಾಚ್ ದೃಷ್ಠಿಹೀನರಿಗೂ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಸದ್ಯ ಫಿಟ್‌ಬಿಟ್‌, ನಾಯ್ಸ್, ಹಾನರ್, ಗಾರ್ಮಿನ್ ಹಾಗೂ ಸ್ಯಾಮ್‌ಸಂಗ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಸ್ಮಾರ್ಟ್‌ ವಾಚ್‌ಗಳನ್ನು ಅನಾವರಣ ಮಾಡಿದ್ದು, ಈ ಸ್ಮಾರ್ಟ್ ವಾಚ್‌ಗಳು ಬಳಕೆದಾರರಿಗೆ ಟೈಮ್ ನ ವರದಿ ನೀಡುವುದು ಮಾತ್ರವಲ್ಲದೆ ಅವರ ಆರೋಗ್ಯದ ಮೇಲೆ ಕಾಳಜಿವಹಿಸುತ್ತದೆ. ಐಐಟಿ ಮದ್ರಾಸ್‌ನಿಂದ ಹೊಸ ಹಾಗೂ ಹೆಚ್ಚು ಭದ್ರತಾ ಫೀಚರ್ಸ್ ಇರುವ ಸ್ಮಾರ್ಟ್‌ವಾಚ್ ಅನ್ನು ದೃಷ್ಟಿಹೀನರಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ಸ್ಮಾರ್ಟ್ ವಾಚ್ ನ ಹೆಸರು ಹ್ಯಾಪ್ಟಿಕ್ ಸ್ಮಾರ್ಟ್‌ ವಾಚ್ ಎಂದಾಗಿದ್ದು, ಇದನ್ನು ಐಐಟಿ ಕಾನ್ಪುರ್ ನಲ್ಲಿನ ನ್ಯಾಷನಲ್ ಸೆಂಟರ್ ಫಾರ್ ಫೆಕ್ಸಿಬಲ್ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರೊ. ಸಿದ್ಧಾರ್ಥ ಪಾಂಡಾ ಮತ್ತು ವಿಶ್ವರಾಜ್ ಶ್ರೀವಾಸ್ತವ ಅವರು ಅಭಿವೃದ್ಧಿಪಡಿಸಿದ್ದಾರೆ. ಅಂಬ್ರೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಈ ವಾಚ್ ತಯಾರಾಗಿದ್ದು, ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ್ ಈ ಹ್ಯಾಪ್ಟಿಕ್ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಸ್ಮಾರ್ಟ್‌ವಾಚ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದ್ದು, ಇದರಲ್ಲಿ ಡಯಲ್ ಫೇಸ್ ಮೇಲೆ 12 ಟಚ್-ಸೆನ್ಸಿಟಿವ್ ಸಂಖ್ಯೆಯ ಮಾರ್ಕರ್ ಆಯ್ಕೆಯನ್ನು ನೀಡಲಾಗಿದೆ.

ಹ್ಯಾಪ್ಟಿಕ್ ಸ್ಮಾರ್ಟ್‌ ವಾಚ್‌ ಅನ್ನು ದೃಷ್ಟಿಹೀನರಿಗೆ ಅನುಕೂಲವಾಗುವಂತೆ ರೂಪಿಸಿದ್ದು, ಟಚ್ ಮೂಲಕ ಕಂಟ್ರೋಲ್ ಆಯ್ಕೆ, ಮಾತನಾಡುವ ಮೂಲಕ ಕಂಟ್ರೋಲ್ ಮಾಡುವ ಆಯ್ಕೆ ಹಾಗೂ ಕಂಪನ ಮತ್ತು ಬ್ರೈಲ್ ಆಧಾರಿತ ತಂತ್ರಜ್ಞಾನವನ್ನು ಈ ವಾಚ್ ನಲ್ಲಿ ನೀಡಲಾಗಿದೆ. ಕಂಪಿಸುವ ವಾಚ್‌ಗಳು ಸಂಕೀರ್ಣವಾಗಿದ್ದು, ಬ್ರೈಲ್ ಆಯ್ಕೆಯ ವಾಚ್‌ಗಳು ದುಬಾರಿಯಾಗಿವೆ. ಈ ಸ್ಮಾರ್ಟ್ ವಾಚ್‌ನ ಇನ್ನೊಂದು ವೇರಿಯಂಟ್‌ನಲ್ಲಿ ಹೃದಯ ಬಡಿತ, ಜ್ಞಾಪನೆ ಮತ್ತು ಶಾರ್ಟ್ ಟೈಮರ್‌ಗಳನ್ನು ಹೊಂದಿಸುವ ಆಯ್ಕೆ ಹಾಗೂ ಆರೋಗ್ಯ ಮೇಲ್ವಿಚಾರಣೆಯನ್ನು ಸೂಚಿಸುವ ಆಯ್ಕೆ ನೀಡಲಾಗಿದೆ. ಒಟ್ಟಾರೆ ಈ ಸ್ಮಾರ್ಟ್ ವಾಚ್ ಎಲ್ಲಾ ರೀತಿಯಲ್ಲೂ ದೃಷ್ಟಿಹೀನರಿಗೆ ಅನುಕೂಲ ಆಗುವಂತೆ ರಚಿಸಲಾಗಿದೆ.

ಈ ಸ್ಮಾರ್ಟ್ ವಾಚ್ ನಿಂದ ಸಮಯ ಮತ್ತು ಆರೋಗ್ಯಗಳ ಬಗೆಗಿನ ಮಾಹಿತಿಯನ್ನು ಪಡೆಯಲು ಟಚ್ ಹ್ಯಾಪ್ಟಿಕ್ ಇಂಟರ್ಫೇಸ್ ಇದ್ದು, ಹೊಸ ರೀತಿಯ ಹ್ಯಾಪ್ಟಿಕ್ ಐಕಾನ್‌ಗಳ ಬಳಕೆಯು ಮೆನುಗಳನ್ನು ನ್ಯಾವಿಗೇಟ್ ಮಾಡಲು ಸಹಕಾರಿಯಾಗಿದೆ. ಹಾಗೂ ಡಬಲ್ ಟ್ಯಾಪ್‌ನಂತಹ ಸರಳ ಗೆಸ್ಟರ್ ವಿಶೇಷತೆ ಇದ್ದು, ಇದು ಆರೋಗ್ಯ ಮೇಲ್ವಿಚಾರಣಾ ಆಪ್‌ಗಳನ್ನು ಓಪನ್ ಮಾಡಲು ಅವಕಾಶ ಕಲ್ಪಿಸುತ್ತದೆ.

ಈ ಸ್ಮಾರ್ಟ್‌ವಾಚ್ ವಿಕಲಚೇತನರು ಮತ್ತು ದೃಷ್ಟಿಹೀನರು ಸುಲಭವಾಗಿ ಬಳಸುವ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಿ ನಿರ್ಮಾಣ ಮಾಡಲಾಗಿದ್ದು, ಪ್ರತಿದಿನ ಇದನ್ನು ಧರಿಸಬಹುದು. ಯಾವುದೇ ಸಮಸ್ಯೆ, ತೊಂದರೆ ಉಂಟಾಗುವುದಿಲ್ಲ. ಈ ಸ್ಮಾರ್ಟ್‌ ವಾಚ್ ಅನ್ನು ಶೀಘ್ರದಲ್ಲೇ ಆಂಬ್ರೇನ್ ಇಂಡಿಯಾ ಬಿಡುಗಡೆ ಮಾಡಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಭಾರೀ ಅಗ್ಗದ ಬೆಲೆಗೆ ಲಭ್ಯವಾಗಲಿದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಪ್ರೊ. ಅಭಯ್ ಕರಂಡಿಕ‌ರ್ ಹೇಳಿದ್ದಾರೆ.

Leave A Reply

Your email address will not be published.