Samsung Galaxy S22 price cut : ದಿಢೀರ್‌ ಇಳಿಕೆ ಕಂಡ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌22 ಸ್ಮಾರ್ಟ್‌ಫೋನ್!‌

ದಕ್ಷಿಣ ಕೊರಿಯಾದ ಟೆಕ್​ ದೈತ್ಯ ಕಂಪನಿಯಾಗಿರುವ ಸ್ಯಾಮ್​ಸಂಗ್​ ಸ್ಮಾರ್ಟ್​​ಫೋನ್ಸ್​ , ಸ್ಮಾರ್ಟ್​ಟಿವಿ, ಟ್ಯಾಬ್ಲೆಟ್​​ಗಳನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿತ್ತು. ಆದರೆ ಇದೀಗ ಸ್ಯಾಮ್​ಸಂಗ್ ಕಂಪನಿ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್​​ಫೋನ್​ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ. ಜನಪ್ರಿಯ ಮೊಬೈಲ್​ ಕಂಪೆನಿಗಳಲ್ಲಿ ಒಂದಾದ ಸ್ಯಾಮ್​ಸಂಗ್ ತನ್ನ ಬ್ರಾಂಡ್​​ನ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸೀರಿಸ್​ನ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಸ್ಯಾಮ್‌ಸಂಗ್ ಸಂಸ್ಥೆಯು ಈ ಹಿಂದಿನ ಜನಪ್ರಿಯ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಸದ್ಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 (Samsung Galaxy S22) ಸ್ಮಾರ್ಟ್‌ಫೋನ್‌ 8GB RAM + 128GB ವೇರಿಯಂಟ್‌ 72,999ರೂ. ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, ಇದೀಗ ಆಫರ್ ನಿಂದಾಗಿ 57,999ರೂ. ಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಫೋನ್‌ 61,999ರೂ. ಗಳ ಬೆಲೆಯಲ್ಲಿ ಸಿಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್ ಫೋನ್‌ ಗಳು ಸ್ಯಾಮ್‌ಸಂಗ್‌ನ ಆನ್‌ಲೈನ್‌ ಸ್ಟೋರ್‌ನಲ್ಲಿ, ಅಮೆಜಾನ್‌ ಇಂಡಿಯಾ ಪ್ಲಾಟ್‌ಫಾರ್ಮ್ ಗಳಲ್ಲಿ ಲಭ್ಯವಾಗುತ್ತದೆ. ಗ್ರಾಹಕರಿಗೆ ಗ್ರೀನ್, ಪರ್ಪಲ್, ಪಿಂಕ್ ಗೋಲ್ಡ್‌, ಫಾಂಟೋಮ್‌ ಬ್ಲ್ಯಾಕ್‌ ಹಾಗೂ ಫ್ಯಾಂಟೋಮ್‌ ವೈಟ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಫೀಚರ್ಸ್‌ :

ಈ ಸ್ಮಾರ್ಟ್‌ಫೋನ್‌ 6.1 ಇಂಚಿನ HD+ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ಕೂಡಿದೆ. ಜೊತೆಗೆ ಆಕ್ಟಾ ಕೋರ್ 4nm SoC ಪ್ರೊಸೆಸರ್‌ ಬೆಂಬಲ ಪಡೆದಿದೆ‌‌. ಈ ಸ್ಮಾರ್ಟ್ ಫೋನ್ 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದ್ದು, ಬೆಂಬಲವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಕ್ಯಾಮೆರಾ ಬಗ್ಗೆ ಹೇಳೋದಾದ್ರೆ, ಟ್ರಿಪಲ್ ಕ್ಯಾಮೆರಾ ರಚನೆ ಇದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S22 3,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಬೆಂಬಲಿಸುತ್ತದೆ. ಜೊತೆಗೆ 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್‌/ A ಜಿಪಿಎಸ್‌, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನೂ ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಪ್ಲಸ್ :

ಈ ಸ್ಮಾರ್ಟ್‌ಫೋನ್‌ 6.6 ಇಂಚಿನ HD+ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ಆವೃತ್ತವಾಗಿದೆ. ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದ್ದು, ಈ ಫೋನ್ ಆಕ್ಟಾ ಕೋರ್ 4nm SoC ಪ್ರೊಸೆಸರ್‌ ನಾ ಸಪೋರ್ಟ್ ಪಡೆದಿದೆ. 12 GB RAM ಮತ್ತು 256 GB ವೇರಿಯಂಟ್ ಇದ್ದು, ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಇದ್ದು, ಇದರ ರಚನೆ ಕ್ರಮವಾಗಿ 10 ಎಂಪಿ + 50 ಎಂಪಿ + 10 ಎಂಪಿ ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಫೊನ್ 4,500 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. 5G, 4G LTE, ವೈ ಫೈ 6E, ಬ್ಲೂಟೂತ್ v5.2, ಜಿಪಿಎಸ್‌/ A ಜಿಪಿಎಸ್‌, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಗಳನ್ನು ಒಳಗೊಂಡಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಬೆಂಬಲಿಸುತ್ತದೆ.

Leave A Reply

Your email address will not be published.