ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬೆಳೆಬಾಳುವ ಈ ಕೀಟಕ್ಕೆ ಭಾರೀ ಡಿಮ್ಯಾಂಡ್‌ ! ಏನು ವಿಶೇಷತೆ ಹೊಂದಿದೆ ಈ ಕೀಟ ಗೊತ್ತಾ?

ಸದ್ಯ ಜಗತ್ತಿನಲ್ಲಿ ದುಬಾರಿ ಸಾಕು ಪ್ರಾಣಿಗಳನ್ನು ಸಾಕುವ ಟ್ರೆಂಡ್ ಶುರುವಾಗಿ ಬಿಟ್ಟಿದೆ. ಪ್ರಾಣಿ ಪ್ರಿಯರು, ಮಾರುಕಟ್ಟೆಗಳಲ್ಲಿ ಲಕ್ಷಾಂತರ ಹಣ ಸುರಿದು ತಮ್ಮ ನೆಚ್ಚಿನ ಪ್ರಾಣಿಗಳನ್ನು ಖರೀದಿಸುತ್ತಾರೆ. ಆದರೆ ನಾವಿಂದು ಹೇಳುವ ಈ ಜೀವಿಯ ಬೆಲೆ ಕೇಳಿದರೆ ನೀವು ಒಮ್ಮೆ ದಂಗಾಗುವುದಂತು ಖಂಡಿತ. ಈ ಪ್ರಾಣಿಯನ್ನು ಖರೀದಿಸುವ ಬೆಲೆಯಲ್ಲಿ ಪ್ರತಿಷ್ಟಿತ ಬ್ರಾಂಡ್ ಕಾರುಗಳಾದ ಬಿಎಂಡಬ್ಲ್ಯು ಅಥವಾ ಆಡಿಯಂತಹ ಐಷಾರಾಮಿ ಕಾರು ಕೂಡಾ ನಿಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಹಾಗಾದ್ರೆ, ಆ ಜೀವಿಯಾದರೂ ಯಾವುದು ಗೊತ್ತಾ? ಅಷ್ಟಕ್ಕೂ ಅದರ ಬೆಲೆ ದುಬಾರಿ ಯಾಕೆ ಗೊತ್ತಾ? ಈ ಎಲ್ಲಾ ಪ್ರಶ್ನೆಗೂ ಇಲ್ಲಿದೆ ನೋಡಿ ಉತ್ತರ.

ಈ ಜೀವಿ ದೇಹದಲ್ಲಿ ಸಣ್ಣದಾದರು, ಇದರ ಬೆಲೆ ಮಾತ್ರ ದುಬಾರಿ. ಇದು ದೊಡ್ಡ ಪ್ರಾಣಿಯಲ್ಲ, ಮಾರುಕಟ್ಟೆಗಳಲ್ಲಿ ಲಕ್ಷ ಮತ್ತು ಕೋಟಿಗೆ ಮಾರಾಟವಾಗುವ ಸಣ್ಣ ಕೀಟ!! ಅರೇ, ಇವ್ರೇನು ಹೇಳ್ತಿದಾರೆ ಅಂತ ಕನ್ಫ್ಯೂಸ್ ಆಗ್ಬೇಡಿ. ನಾವು ಹೇಳ್ತಿರೋದು ನಿಜಾನೆ ಕಂಡ್ರಿ. ಇದು ಅಂತಿಂತ ಸಾಮಾನ್ಯವಾದ ಕೀಟವಲ್ಲ
ವಿಶೇಷ ಜಾತಿಯ ಕೀಟವಾಗಿದ್ದು ಅದರ ಗಾತ್ರವು ಕೇವಲ 2 ರಿಂದ 3 ಇಂಚುಗಳು. ಇದನ್ನು ಖರೀದಿಸಲು ಹಲವರು ಲಕ್ಷ ಕೋಟಿ ಸುರಿದು ಖರ್ಚು ಮಾಡುತ್ತಾರೆ. ಇದರ ಹೆಸರು ಕಡವೆ ಜೀರುಂಡೆ ಅಥವಾ ಸ್ಟ್ಯಾಗ್‌ ಬೀಟಲ್ ಎಂದು ಕರೆಯುತ್ತಾರೆ.

ಅಬ್ಬಾ!! ನೋಡಲು ಎಷ್ಟು ಭಯಾನಕವಾಗಿದೆ. ಜಿಂಕೆಗಳಿಗಿರುವ ಹಾಗೆ ಕವಲೊಡೆದ ಕೋಡುಗಳಿವೆಯೆಲ್ಲಾ. ಆಕಸ್ಮಾತ್ ಆಗಿ ನಾವೆನಾದರೂ ಇದನ್ನು ಕೈಗೆತ್ತುಕೊಂಡರೆ ನಮ್ಮ ಬೆರಳನ್ನೇ ಕತ್ತರಿಸಬಹುದೇನೋ? ಎಂದೆಲ್ಲಾ ನಮ್ಮ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡಿಸುತ್ತದೆ ಈ ಜೀರುಂಡೆ. ಆದರೆ, ಇದು ಸಾಧು ಜೀವಿ. ಇಂತಹ ಬಲಿಷ್ಠ ಭಯಾನಕ ದವಡೆಗಳಿದ್ದರೂ ಇವು ಮನುಷ್ಯರಿಗಾಗಲೀ ಅಥವ ಇತರೇ ಕೀಟಗಳಿಗಾಗಲೀ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ಇದು ಪರಭಕ್ಷಕ ಕೀಟವೂ ಅಲ್ಲ. ಈ ಪ್ರೌಢ ಜೀರುಂಡೆಗಳು ತಿನ್ನುವುದು ಕೊಳೆತ ಹಣ್ಣು ಹಂಪಲುಗಳು ಮತ್ತು ಮರದಿಂದ ಸೋರುವ ಅಂಟಿನ ರಸವನ್ನು ಮಾತ್ರ. ಸ್ಟಾಗ್ ಬೀಟಲ್‌ನ ಖರೀದಿದಾರರು ಇದಕ್ಕಾಗಿ ₹50 ಲಕ್ಷದಿಂದ ₹1.5 ಕೋಟಿ ವರೆಗೆ ಹಣ ನೀಡಲು ಸಿದ್ಧರಾಗಿದ್ದಾರೆ. ಈ ಕೀಟದಿಂದ ಅನೇಕ ದುಬಾರಿ ಔಷಧಿಗಳನ್ನು ತಯಾರಿಸಲಾಗುತ್ತದೆ. ಇದರಿಂದಾಗಿ ಅದರ ವೆಚ್ಚವು ತುಂಬಾ ಹೆಚ್ಚಾಗಿದೆ.

ಕಡವೆ ಜೀರುಂಡೆ ಇತರ ಸಾಮಾನ್ಯ ಕೀಟಕ್ಕಿಂತ ಭಿನ್ನವಾಗಿರುತ್ತದೆ. ಪ್ರೌಢ ಜೀರುಂಡೆಗಳು ಕೆಲವು ತಿಂಗಳುಗಳ ಕಾಲ ಮಾತ್ರ ಜೀವಿಸುತ್ತವೆ. ಇವು ಸಾಮಾನ್ಯವಾಗಿ ನಿಶಾಚರಿಗಳಾಗಿದ್ದು ರಾತ್ರಿ ಮಸುಕಿನಲಿ ಹಾರಾಡುತ್ತವೆ. ಈ ಜೀರುಂಡೆಗಳು 5 ರಿಂದ 6 ಸೆಂ. ಮೀ ಉದ್ದವಿದ್ದರೂ ದೇಹದಿಂದ ದವಡೆಗಳೇ ಉದ್ದಾವಾಗಿರುತ್ತವೆ. ಕಪ್ಪು, ಹಳದಿ, ಹಸಿರು ಮುಂತಾದ ಹೊಳೆಯುವ ಬಣ್ಣಗಳಲ್ಲೂ ಈ ಕಡವೆ ಜೀರುಂಡೆ ಗಳು ನಮಗೆ ಸಿಗುತ್ತವೆ. ನಮ್ಮ ದೇಶದಲ್ಲಿ ಇವುಗಳ ಸಂಖ್ಯೆ ಕಡಿಮೆ. ಇಂಗ್ಲೇಡ್‌ನಲ್ಲಿ ಇವು ಹೆಚ್ಚಿನ ಸಂಖ್ಯೆಗಳಲ್ಲಿ ಕಾಣಸಿಗುತ್ತವೆ. ಈ ಕೀಟ ಪ್ರಭೇದಗಳ ಮೇಲೆ ಅಳಿವಿನ ಅಪಾಯವೂ ಹೆಚ್ಚುತ್ತಿದೆ. ಹಾಗಾಗಿ ಇವುಗಳ ಸಂರಕ್ಷಣಾ ಕಾರ್ಯವೂ ಕೆಲವೆಡೆ ನಡೆಯುತ್ತಿದೆ.

Leave A Reply

Your email address will not be published.