BroadBand : ಚೀಪೆಸ್ಟ್‌ ಬೆಲೆಯ ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ ನ ಹುಡುಕಾಟದಲ್ಲಿದ್ದೀರಾ ? ಹಾಗಾದರೆ ಈ ಪ್ಲ್ಯಾನ್‌ ಅಪ್ಲೈ ಮಾಡಿ !

Share the Article

ಈ ಸ್ಮಾರ್ಟ್’ಯುಗದಲ್ಲಿ ಇಂಟರ್ನೆಟ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲವೇನೋ ಎಂಬಂತೆ ಆಗಿದೆ. ಬಹುತೇಕ ಕೆಲಸಗಳಿಗೆ ಇಂಟರ್ನೆಟ್‌ ಅಗತ್ಯ ಮತ್ತು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮ ಡೇಟಾ ಸೌಲಭ್ಯ ಇರುವ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಸುತ್ತಾರೆ. ಮತ್ತೆ ಕೆಲವರು ತಡೆ ರಹಿತ ಇಂಟರ್ನೆಟ್‌ ಸೌಲಭ್ಯವನ್ನು ಬಯಸುತ್ತಾರೆ. ಹೀಗಾಗಿ ಅವರು ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಪಡೆಯಲು ಮುಂದಾಗುತ್ತಾರೆ. ಪ್ರಸ್ತುತ, ಜನಪ್ರಿಯ ಸರ್ಕಾರಿ ಸ್ವಾಮ್ಯದ ಭಾರತ​ ಸಂಚಾರಿ ನಿಗಮ ಲಿಮಿಟೆಡ್​ (ಬಿಎಸ್​ಎನ್ಎಲ್​) ಕೂಡ ಬ್ರಾಡ್​ಬ್ಯಾಂಡ್​ ಸೇವೆಯಲ್ಲಿ ಬೇರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ,ಕೊಂಚ ಬದಲಾವಣೆ ಮಾಡಿಕೊಂಡಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್‌ ಆಯ್ಕೆಗಳು ಲಭ್ಯ ಇದ್ದು, ಅಗ್ಗದ ಬೆಲೆಯಲ್ಲಿ ಉತ್ತಮ ಪ್ರಯೋಜನ ಪಡೆಯುವ ಪ್ಲಾನ್’ಗಳ ಕಂಪ್ಲೀಟ್ ಡೀಟೇಲ್ ಇಲ್ಲಿದೆ.

ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್:- ಹೆಚ್ಚು ಖರ್ಚಿಲ್ಲದ ತಡೆ ರಹಿತ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ನೀವೇನಾದರೂ ಪಡೆಯಲು ಬಯಸಿದರೆ, ಬಿಎಸ್‌ಎನ್‌ಎಲ್‌ನ್ 449ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು ಬೆಸ್ಟ್ ಅಂತ ಹೇಳಿದರೆ ತಪ್ಪಾಗೊಲ್ಲ. ಈ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ‘ಫೈಬರ್‌ ಬೇಸಿಕ್ NEO’ ಎಂದು ಕರೆದಿದೆ. ಬಿಎಸ್‌ಎನ್‌ಎಲ್‌ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ 30 Mbps ವೇಗದ, ತಿಂಗಳಿಗೆ 3.3 TB (3,300 GB) ಡೇಟಾವನ್ನು ನೀಡುತ್ತಿದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ.ಮಾತ್ರವಲ್ಲದೆ ದೇಶದಾದ್ಯಂತ ಉಚಿತ ಲ್ಯಾಂಡ್​ಕನೆಕ್ಷನ್ ಸೌಲಭ್ಯ ಸೇವೆಯನ್ನು ಪಡೆದಿದೆ.

ಬಿಎಸ್‌ಎನ್‌ಎಲ್‌ನ್ 449ರೂ. ಫೈಬರ್ ಬೇಸಿಕ್ ಬ್ರಾಡ್‌ಬ್ಯಾಂಡ್‌ ಪ್ಲಾನ್ :- ಈ ಯೋಜನೆಯು 40 Mbps ಇಂಟರ್ನೆಟ್ ವೇಗದ, 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯವನ್ನು ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಇದ್ರಲ್ಲಿ, ಬಳಕೆದಾರರು ಮೊದಲ ತಿಂಗಳ ಬಾಡಿಗೆಯಲ್ಲಿ 500ರೂ. ವರೆಗಿನ 90% ರಿಯಾಯಿತಿಯನ್ನು ಸಹ ಪಡೆಯುತ್ತಾರೆ. ಆರಂಭಿಕ ಆರು ತಿಂಗಳವರೆಗೆ ಈ ಬ್ರಾಡ್‌ಬ್ಯಾಂಡ್‌ನಲ್ಲಿರುವ ಗ್ರಾಹಕರು ಅವರಿಷ್ಟದ ಆಯ್ಕೆಯ ಪ್ರಕಾರ ಫೈಬರ್‌ ಬೇಸಿಕ್‌ ಯೋಜನೆ ಅಥವಾ ಇತರೆ ಯಾವುದೇ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗೆ ಅಪ್‌ಗ್ರೇಡ್‌ ಮಾಡಬಹುದು ಎನ್ನಲಾಗಿದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಬಿಎಸ್‌ಎನ್‌ಎಲ್‌ 799ರೂ. ಫೈಬರ್ ವ್ಯಾಲ್ಯೂ ಪ್ಲ್ಯಾನ್ :- ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ’ ಯೋಜನೆಯಲ್ಲಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಈ ಯೋಜನೆಯಲ್ಲಿ 100 Mbps ವೇಗದ, 3.3 TB (3,300 GB) ಮಾಸಿಕ ಡೇಟಾವನ್ನು ಪಡೆಯಬಹುದು. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 TB ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 Mbps ಗೆ ಇಳಿಕೆ ಮಾಡಲಾಗುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಫೈಬರ್ ಪ್ರೀಮಿಯಂ ಪ್ಲ್ಯಾನ್ :- ಬಿಎಸ್‌ಎನ್‌ಎಲ್ ‘ಫೈಬರ್ ಪ್ರೀಮಿಯಂ’ ಯೋಜನೆಯಲ್ಲಿ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 2 TB (2000 GB) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. FUP ಡೇಟಾ ಬಳಕೆಯನ್ನು ಮುಗಿಸಿದ ನಂತರ ವೇಗವು 2 Mbps ಗೆ ಇಳಿಯುತ್ತದೆ. ಇದಲ್ಲದೆ ಬಹುಮುಖ್ಯವಾಗಿ, ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸ್ವೀಕರಿಸುವ ಬಳಕೆದಾರರೊಂದಿಗೆ ಆಪರೇಟರ್ ಓವರ್-ದಿ-ಟಾಪ್ (ಒಟಿಟಿ) ಪ್ರಯೋಜನವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ 1,499ರೂ ಫೈಬರ್ ಅಲ್ಟ್ರಾ ಪ್ಲ್ಯಾನ್ :- ಬಿಎಸ್‌ಎನ್‌ಎಲ್ ‘ಫೈಬರ್ ಅಲ್ಟ್ರಾ’ ಯೋಜನೆಯ ಮಾಸಿಕ ಶುಲ್ಕ 1,499 ರೂ. ಆಗಿದೆ. ಬಳಕೆದಾರರು 300 ಎಮ್‌ಬಿಪಿಎಸ್ ವರೆಗೆ ಬ್ರೌಸ್ ಮಾಡಲು ಮತ್ತು 4 TB (4,000 GB) ಡೇಟಾದವರೆಗೆ ವೇಗವನ್ನು ಅಪ್‌ಲೋಡ್ ಮಾಡುವ ಸೌಲಭ್ಯ ಇದರಲ್ಲಿದೆ. ಎಫ್‌ಯುಪಿ ಡೇಟಾದ ಬಳಕೆಯ ಮಿತಿ ಮುಗಿದ ನಂತರ, ವೇಗವು ಬಳಕೆದಾರರಿಗೆ 4 Mbps ಗೆ ಇಳಿಯುತ್ತದೆ.

Leave A Reply