Budget 2023 Update: ಬಜೆಟ್ ನಲ್ಲಿ ಯಾವುದೆಲ್ಲಾ ಅಗ್ಗವಾಗಿದೆ ? ಯಾವುದು ಏರಿಕೆಯಾಗಿದೆ ? ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ
ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ 2023ರ ಬಜೆಟ್ ನ್ನು ಐದನೇ ಬಾರಿಗೆ ಮಂಡಿಸಿದ್ದು, 2024ರ ಲೋಕಸಭೆ ಚುನಾವಣೆಗೂ ಮುಂಚಿತವಾದ ಕೊನೆಯ ಸಂಪೂರ್ಣ ಬಜೆಟ್ ಇದಾಗಿದೆ.
2023-2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಫೆಬ್ರವರಿ 1 ರಂದು ಸಂಸತ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೆಲವು ಜನಯೋಪಯೋಗಿ ಸರಕು ಸೇವೆಯಲ್ಲಿ ಇಳಿಕೆಯಾದರೆ, ಇನ್ನೂ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಬಜೆಟ್ ಮಂಡನೆಯಲ್ಲಿ ಯಾವ ವಸ್ತುಗಳು ಅಗ್ಗವಾಯಿತು ಮತ್ತು ಯಾವುದು ದುಬಾರಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಅಗ್ಗವಾದ ವಸ್ತುಗಳ ಪಟ್ಟಿ ಇಲ್ಲಿದೆ :
ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಇಳಿಕೆಯಾಗಿದ್ದು, ಎಲ್ಇಡಿ ಟಿವಿ, ಬಟ್ಟೆ, ಹಾಗೇ ಇಂದಿನ ದಿನದಲ್ಲಿ ಪ್ರತಿಯೊಬ್ಬರೂ ಬಳಕೆ ಮಾಡುವಂತಹ ಮೊಬೈಲ್ ಫೋನ್ ಇದರ ಬೆಲೆಯೂ ಅಗ್ಗವಾಗಿದ್ದು, ಜೊತೆಗೆ ಸಣ್ಣ ಮಕ್ಕಳ ಆಟಿಕೆ, ಮೊಬೈಲ್ ಕ್ಯಾಮೆರಾ ಲೆನ್ಸ್ , ವಿದ್ಯುತ್ ವಾಹನಗಳು. ಇವಿಷ್ಟೇ ಅಲ್ಲದೆ, ವಜ್ರದ ಆಭರಣಗಳ ಬೆಲೆ ಕೂಡ ಕಡಿಮೆಯಾಗಿದೆ. ಜೈವಿಕ ಅನಿಲಕ್ಕೆ ಸಂಬಂಧಿಸಿದ ವಿಷಯಗಳು, ಲಿಥಿಯಂ ಜೀವಕೋಶಗಳು. ಕೊನೆಗೆ ಇಂದು ಅತಿಕಡಿಮೆ ಬಳಕೆಯಲ್ಲಿರುವ ಸೈಕಲ್. ಇದೆಲ್ಲದರ ಬೆಲೆ ಬಜೆಟ್ ನಲ್ಲಿ ಅಗ್ಗವಾಗಿದೆ.
ದುಬಾರಿಯಾದ ವಸ್ತುಗಳು ಯಾವುದು ?
ಅಗ್ಗವಾದ ವಸ್ತುಗಳೇನೋ ಜನರಿಗೆ ಉಪಯುಕ್ತವಾದ ವಸ್ತುಗಳೇ ಆಗಿದೆ ಇನ್ನು ಬೆಲೆ ಏರಿಕೆಯಾದ ವಸ್ತುಗಳು ಯಾವುದೆಲ್ಲ ಎಂದರೆ, ದಿನದಲ್ಲಿ ಸಾಕಷ್ಟು ಬಾರಿ ಸಿಗರೇಟ್ ಸೇದೋರಿಗೆ ಇದು ಕಹಿ ಸುದ್ದಿ, ಬಜೆಟ್ ಮಂಡನೆಯಲ್ಲಿ ಸಿಗರೇಟ್ ಬೆಲೆ ಏರಿಕೆಯಾಗಿದೆ. ಇದರ ಜೊತೆಗೆ ಮದ್ಯದ ಬೆಲೆಯೂ ಏರಿಕೆಯಾಗಿದ್ದು, ಇದಂತು ಮದ್ಯ ಪ್ರಿಯರಿಗೆ ಬೇಸರದ ಸಂಗತಿಯೇ ಸರಿ. ಇದರ ಜೊತೆಗೆ ಛತ್ರಿ, ಪ್ಲಾಟಿನಂ, ವಜ್ರ, ವಿಲಕ್ಷಣ ಅಡಿಗೆ ಚಿಮಣಿ, ಎಕ್ಸ್-ರೇ ಯಂತ್ರ ಹಾಗೂ ಆಮದು ಮಾಡಿದ ಬೆಳ್ಳಿ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ.