Smartphone Hacks: ನಿಮ್ಮ ಫೋನ್ ನಲ್ಲಿ ಬರೋ ಜಾಹೀರಾತುಗಳನ್ನು ಈ ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ!
ಆಂಡ್ರಾಯ್ಡ್ ಫೋನ್ ಈಗ ಪ್ರತಿಯೊಬ್ಬರಲ್ಲಿಯೂ ಇದೆ. ಸದ್ಯ ನೀವು ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿರಬಹುದು ಅಂದರೆ ಸ್ಟೋರೇಜ್ ಸಮಸ್ಯೆ, ಕಂಪನಿ ಫೋನ್ ಕರೆಗಳು ಹಾಗೆಯೇ ಅನಗತ್ಯ ಜಾಹೀರಾತು ನೋಟಿಫಿಕೇಶನ್ ಗಳ ಕಿರಿಕಿರಿ ನೀವು ಅನುಭವಿಸುವುದು ಸಹಜ. ಮುಖ್ಯವಾಗಿ ಸದ್ಯ ಫೋನ್ ಮಾಡಲೆಂದು ಸ್ಕ್ರೀನ್ ತೆರೆದಾಗಲೋ, ಸಂದೇಶ ಚೆಕ್ ಮಾಡುತ್ತಿರುವಾಗಲೋ, ಯಾವುದೊ ವೀಡಿಯೋ ನೋಡುವಾಗಲೋ ಪೂರ್ಣ ಪರದೆಯ ಮೇಲೆ ಜಾಹೀರಾತು ಹಾಜರಾಗುತ್ತದೆ. ಅದನ್ನು ನಿವಾರಿಸಲು ಬ್ಯಾಕ್ ಬಟನ್ ಕೂಡ ಗೋಚರಿಸುವುದಿಲ್ಲ ಅಥವಾ ಕ್ಲೋಸ್ ಮಾಡಲು ಗುಣಿಸು ಚಿಹ್ನೆಯ ಐಕಾನ್ ಕೂಡ ಕಾಣಿಸುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ತುಂಬಾ ಕಿರಿ ಕಿರಿ ಅನಿಸುತ್ತದೆ.
ಸದ್ಯ ಅನಗತ್ಯ ಜಾಹಿರಾತಿನಿಂದ ನಮ್ಮ ಕೆಲಸಗಳಿಗೆ ತೊಂದರೆಯಾಗುತ್ತವೆ ಅಥವಾ ನಮ್ಮ ಸಮಯ ವ್ಯರ್ಥ ಆಗುತ್ತವೆ. ದಿನೇ ದಿನೇ ಹೆಚ್ಚುತ್ತಿರುವ ಈ ಜಾಹಿರಾತು ಮತ್ತೇ ಕಾಣಿಸಿಕೊಳ್ಳದಂತೆ ಇಲ್ಲಿ ಪರಿಹಾರ ತಿಳಿಸಲಾಗಿದೆ. ಬ್ರೌಸರ್‌ನಿಂದ ಪಾಪ್-ಅಪ್ ಆಗುವ ಮತ್ತು ಆ್ಯಪ್ ಮೂಲಕ ಆಗಮಿಸುವ ಜಾಹೀರಾತುಗಳನ್ನು ಹೇಗೆ ನಿವಾರಿಸಬಬಹುದು ಎಂದು ಇಲ್ಲಿ ತಿಳಿಯಿರಿ .
- ಮೊದಲನೆಯದಾಗಿ, ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಅಕೌಂಟ್ಸ್ ಎಂದಿರುವಲ್ಲಿ ಗೂಗಲ್ ಎಂದು ಆಯ್ಕೆ ಮಾಡಿಕೊಳ್ಳಿ. ಇತ್ತೀಚಿನ ಕೆಲವು ಫೋನ್‌ಗಳಲ್ಲಿ ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗಲೇ ‘ಗೂಗಲ್’ ಕಾಣಿಸುತ್ತದೆ. ನಂತರ ಆ್ಯಡ್ಸ್ ಅಂತ ಬರೆದಿರುತ್ತದೆ. ಅದನ್ನು ಆಯ್ಕೆ ಮಾಡಿಕೊಂಡಾಗ, Opt Out of Ads Personalisation ಎಂದು ಬರೆದಿರುವುದರ ಪಕ್ಕದಲ್ಲಿ ಸ್ಲೈಡರ್ ಗೋಚರಿಸುತ್ತದೆ. ಅದನ್ನು ಆನ್ ಮಾಡಿಬಿಡಿ.
- ಜೊತೆಗೆ ಹೆಚ್ಚಾಗಿ ಬಳಸುವ ಕ್ರೋಮ್ ಬ್ರೌಸರ್‌ನ ಮೇಲ್ಭಾಗದ ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳ ಬಟನ್ ಒತ್ತಿದಾಗ, ಅದರ ಸೆಟ್ಟಿಂಗ್ಸ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ, ಕೆಳಗೆ ಸೈಟ್ ಸೆಟ್ಟಿಂಗ್ಸ್ ಎಂದಿರುತ್ತದೆ. ಕ್ಲಿಕ್ ಮಾಡಿದಾಗ ಕಾಣಿಸುವ ಸ್ಕ್ರೀನ್‌ನಲ್ಲಿ Pop-ups and redirects ಅಂತ ಕಾಣಿಸುತ್ತದೆ. ಅದರ ಸ್ಲೈಡರನ್ನು ಆಫ್ ಮಾಡಿ . ಈ ರೀತಿ ಮಾಡಿದರೆ, ನೀವು ಬ್ರೌಸರ್ ಮೂಲಕ ಇಂಟರ್ನೆಟ್ ಬ್ರೌಸ್ ಮಾಡುವಾಗ, ಯಾವುದನ್ನೆಲ್ಲಾ ನೋಡುತ್ತೀರಿ ಎಂಬುದರ ಆಧಾರದಲ್ಲಿ ಗೂಗಲ್ ತನ್ನಿಂತಾನಾಗಿ ಆ ವಿಷಯಕ್ಕೆ ಸಂಬಂಧಪಟ್ಟ ಜಾಹೀರಾತುಗಳನ್ನು ನಿಮಗೆ ತೋರಿಸುವುದನ್ನು ನಿಲ್ಲಿಸುತ್ತದೆ.
- ಗೂಗಲ್ ಎಂಬಲ್ಲಿಂದ ಗೂಗಲ್ ಅಕೌಂಟ್ ಎಂದು ಬರೆದಿರುವುದನ್ನು ಸ್ಪರ್ಶಿಸಿ. ಅಲ್ಲಿ ಕಾಣಿಸಿಕೊಳ್ಳುವ ಪುಟದಲ್ಲಿ, Home, Personal Info, ಬಳಿಕ Data & Personalisation ಎಂಬ ಟ್ಯಾಗ್ ಕಾಣಿಸುತ್ತದೆ, ಅದನ್ನು ಆಯ್ಕೆ ಮಾಡಿಕೊಳ್ಳಿ. ಸ್ವಲ್ಪ ಕೆಳಗೆ Ad Personalisation ಎಂಬುದು ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ‘ಆಫ್’ ಎಂದು ಹೊಂದಿಸಿಬಿಡಿ.
- ನಿಮ್ಮ ಫೋನ್‌ನಲ್ಲಿ Chrome ಬ್ರೌಸರ್ ತೆರೆಯಿರಿ. ಅಲ್ಲಿ ನೀಡಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ. ಇಲ್ಲಿ ನೀವು ಸೈಟ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಪಡೆಯುತ್ತೀರಿ. ಇಲ್ಲಿ ನೀವು ಜಾಹೀರಾತುಗಳು, ಪಾಪ್-ಅಪ್ ಮೆಸೇಜ್ ಗಳನ್ನು ರಿಸೆಟ್ಟಿಂಗ್ ಮಾಡುವ ಆಯ್ಕೆಯನ್ನು ನೋಡಬಹುದು. ನೀವು ಎರಡೂ ಆಯ್ಕೆಗಳನ್ನು ಆನ್ ಮಾಡಬೇಕು . ಆನಂತರ ಜಾಹೀರಾತುಗಳು ಬರುವುದು ನಿಲ್ಲುತ್ತವೆ.
ಕೆಲವರಿಗೆ ಈ ಮೇಲಿನವುಗಳಲ್ಲಿ ಯಾವುದಾದರೂ ಒಂದು ವಿಧಾನ ಮಾಡಿದರೆ ಸಾಕಾಗಬಹುದು. ಸಮಸ್ಯೆ ಎಲ್ಲಿಂದ ಎಂಬುದು ಪತ್ತೆ ಮಾಡುವುದು ಕಷ್ಟವಾದುದರಿಂದ ಕೆಲವರಿಗೆ ಎಲ್ಲ ವಿಧಾನಗಳನ್ನು ಅನುಸರಿಸಬೇಕಾಗಬಹುದು.
ಇವುಗಳ ಹೊರತು ನಿಮಗೆ ಜಾಹಿರಾತು ಬರುತ್ತಿದೆ ಅಂದರೆ ಇತ್ತೀಚೆಗಷ್ಟೇ ಇನ್‌ಸ್ಟಾಲ್ ಮಾಡಿಕೊಂಡ ಆ್ಯಪ್ ನಿಂದ ಬರುವ ಜಾಹಿರಾತು ಇರಬಹುದು. ಅದು ಯಾವುದು ಅಂತ ನೆನಪಿಸಿಕೊಂಡು ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಕೆಲವೊಮ್ಮೆ ಹೀಗೂ ಮಾಡಿ ನೋಡಬಹುದು. ಮೊಬೈಲ್ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಮೂರು ಬಟನ್‌ಗಳಲ್ಲಿ ಇತ್ತೀಚೆಗೆ ನೀವು ಬಳಸಿದ ಆ್ಯಪ್ಸ್ ತೋರಿಸುವ ಚೌಕಾಕಾರದ ಬಟನ್ ಪ್ರೆಸ್ ಮಾಡಿ. ಅದರಲ್ಲಿ ಮೇಲ್ಭಾಗದಲ್ಲಿರುವ ಆ್ಯಪ್‌ನಿಂದಲೇ ಈ ಜಾಹೀರಾತು ಬಂದಿದೆ ಅಂತ ಅಂದುಕೊಳ್ಳಬಹುದು. ಅಂಥ ಆ್ಯಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದರಾಯಿತು.
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಬರುವ ಅನಗತ್ಯ ಜಾಹಿರಾತನ್ನು ನಿಲ್ಲಿಸುವ ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ಅನಗತ್ಯ ಜಾಹಿರಾತಿನಿಂದ ಮುಕ್ತಿ ಪಡೆಯಬಹುದಾಗಿದೆ.