Home Entertainment ಮಂಗಳೂರು : ಕಂಬಳದಲ್ಲಿ ಕಪಾಳಮೋಕ್ಷ ಪ್ರಕರಣ : ಸಾನ್ಯಾ ಅಯ್ಯರ್‌ ಏನಂದ್ರು ಈ ಘಟನೆ ಬಗ್ಗೆ...

ಮಂಗಳೂರು : ಕಂಬಳದಲ್ಲಿ ಕಪಾಳಮೋಕ್ಷ ಪ್ರಕರಣ : ಸಾನ್ಯಾ ಅಯ್ಯರ್‌ ಏನಂದ್ರು ಈ ಘಟನೆ ಬಗ್ಗೆ ? ಇಲ್ಲಿದೆ ಕಂಪ್ಲೀಟ್‌ ವಿವರ

Hindu neighbor gifts plot of land

Hindu neighbour gifts land to Muslim journalist

ಎರಡು ದಿನದಿಂದ ಸೆಲ್ಫಿ ಕ್ಲಿಕ್ಕಿಸುವ ವಿಷಯದಲ್ಲಿ ಸಾನ್ಯ ಅಯ್ಯರ್‌ ಕಪಾಳಮೋಕ್ಷ ಮಾಡಿದ್ದರು ಎಂಬ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಈ ವಿಷಯದ ಬಗ್ಗೆ ಸ್ವತಃ ಬಿಗ್‌ಬಾಸ್‌ ಸ್ಪರ್ಧಿ ಸಾನ್ಯಾ ಅಯ್ಯರ್‌ ಸ್ಪಷ್ಟನೆ ನೀಡಿದ್ದಾರೆ. ಪುತ್ತೂರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಬಂದ ಸಂದರ್ಭದಲ್ಲಿ ಯುವಕ ಕೈ ಹಿಡಿದು ಎಳೆದಾಗ, ಸಾನ್ಯಾ ಅಯ್ಯರ್ ಅವರು ( Sanya Iyer ) ಕಪಾಳ ಮೋಕ್ಷ ಮಾಡಿದ್ದರು ಎಂದು ಹೇಳಲಾಗಿತ್ತು. ಆ ಬಗ್ಗೆ ಸಾಕಷ್ಟು ಚರ್ಚೆಗಳು ಉಂಟಾಗಿತ್ತು. ಅದಕ್ಕೆ ಸಾನ್ಯಾ ಅಯ್ಯರ್ ಉತ್ತರ ನೀಡಿದ್ದಾರೆ.

28ನೇ ತಾರೀಕಿನಂದು ನಾವು ಪುತ್ತೂರಿಗೆ ಹೋಗಿದ್ವಿ. ನಮ್ಮನ್ನು ಅತಿಥಿಯಾಗಿ ಕರೆದಿದ್ರು. ಕಂಬಳನ ನೀಟಾಗಿ ನನಗೆ ನೋಡೋಕೆ ಆಗಿರಲಿಲ್ಲ. ಹಾಗಾಗಿ ನಾನು ರಾತ್ರಿ ಮತ್ತೆ ವಾಪಾಸು ಬಂದ್ವಿ. ಕಾಂತಾರ ರಿಲೀಸ್‌ ಆದ ನಂತರ ಎಲ್ಲೆಲ್ಲಿಂದ ಊರಿಂದ ಈ ಕಂಬಳ ನೋಡೋಕೆ ಜನ ಸಾಗರವೇ ಬಂದಿತ್ತು. ಇದರ ಮಧ್ಯೆ ನಾವು ಅಲ್ಲಿಗೆ ಬಂದ್ವಿ. ನಾವು ವಾಪಸು ಮತ್ತೆ ರಾತ್ರಿ ಅಲ್ಲಿಗೆ ಬರುವುದು ಮುಖ್ಯ ಆಯೋಜಕರಿಗೆ ಗೊತ್ತಿರಲಿಲ್ಲ. ನಾವೇನಾದರೂ ಅವರಿಗೆ ಮೊದಲೇ ತಿಳಿಸ್ತಿದ್ರೆ ಅವರು ಏನಾದರೂ ವ್ಯವಸ್ಥೆ ಮಾಡ್ತಾ ಇದ್ರು. ಆದರೆ ನಾವು ಹಾಗೆ ಬಂದು ಒಮ್ಮೆ ನೋಡಿ ಹೋಗುವ ಎಂದು ಬಂದ್ವಿ. ಆದರೆ ಈ ಸಂದರ್ಭದಲ್ಲಿ ನಶೆಯಲ್ಲಿದ್ದ ಓರ್ವ ವ್ಯಕ್ತಿ ಒಮ್ಮಿಂದೊಮ್ಮೆಲೇ ನನ್ನ ಜೊತೆ ಇದ್ದ ಸ್ನೇಹಿತೆಯರ ಮೇಲೆ ಬಿದ್ದು ಕಿರುಕುಳ ಕೊಟ್ಟ. ಹಾಗಾಗಿ ಒಮ್ಮಿಂದೊಮ್ಮೆಲೇ ನಾವು ಕಿರುಚಾಡಿದ್ವಿ. ಬಂದ ಮೈಮೇಲೆ ಬಿದ್ದ. ಕುಡಿದಿದ್ದ. ನಾವು ಕಿರುಚಾಡಿದಾಗ ಜನ ಎಲ್ಲರೂ ಬಂದ್ರು. ಅಷ್ಟರಲ್ಲಿ ಆತ ಓಡಿ ಹೋದ. ನಮ್ಮ ಕೈಗೆ ಕೂಡಾ ಸಿಗಲಿಲ್ಲ. ಈ ಘಟನೆ ನಡೆದ ಮೇಲೆ ಮುಖ್ಯ ಆಯೋಜಕರಿಗೆ ಗೊತ್ತಾಗಿ ಕೂಡಲೇ ಅವರು ಸೇಫ್‌ಗಾರ್ಡ್‌ ಮಾಡಿ ನಮ್ಮನ್ನು ಸ್ಟೇಜ್‌ ಮೇಲೆ ಕೂರಿಸಿದ್ರು.

ನಾನ್ಯಾರಿಗೋ ಹೊಡೆದೆ, ಅವನು ನನಗೆ ಹೊಡೆದ ಅನ್ನೋದು ಸುಳ್ಳು. ಅಭಿಮಾನಿ ಸೆಲ್ಫಿ ಕೇಳಿದ್ದಕ್ಕೆ ಹೊಡೆಯುವ ಮನಸ್ಥಿತಿ ನನಗಿಲ್ಲ. ನನ್ನ ಸ್ನೇಹಿತೆಯರ ಮೇಲೆ ಬಿದ್ದಿದ್ದಕ್ಕೆ ನಾನು ಕೂಗಿದೆ. ಆ ಹುಡುಗ ಸಿಕ್ಕಿದ್ರೆ ನಾನು ಸುಮ್ಮನೆ ಇರುತ್ತಿರಲಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.