ಬೆಂಗ್ಳೂರು ವಾಹನ ಸವಾರರೇ ನಿಮಗೊಂದು ಶಾಕಿಂಗ್ ನ್ಯೂಸ್! ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪ್ರತಿ ಸಿಗ್ನಲ್‌ನಲ್ಲೂ ಬೀಳುತ್ತೆ ದಂಡ!!
ಬೆಂಗಳೂರಿನ ವಾಹನ ಸವಾರರೇ ಇನ್ನು ಮುಂದೆ ನೀವು ಮನೆಯಿಂದ ಹೊರಡುವಾಗ, ರಸ್ತೆಯಲ್ಲಿ ಹೋಗುವಾಗ ಬಹಳ ಎಚ್ಚರಿಕೆಯಿಂದ ಹೋಗಿರಿ. ಎಲ್ಲಾ ನಿಯಮಗಳನ್ನು ತಪ್ಪದೇ ಫಾಲೋ ಮಾಡಿ. ಇನ್ನು ನೀವೇನಾದರೂ ಸಣ್ಣ ರೂಲ್ಸ್ ಕೂಡ ಫಾಲೋ ಮಾಡ್ಲಿಲ್ಲ ಅಂದ್ರೆ ಬೀಳುತ್ತೆ ಭಾರೀ ದಂಡ. ಯಾಕಂದ್ರೆ ಬೆಂಗ್ಳೂರಲ್ಲಂತೂ ಸಿಗ್ನಲ್ ಜಂಪ್ ಮಾಡೋದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋದು, ಜೊತೆಗೆ ಹೆಲ್ಮೆಟ್ ಧರಿಸದೇ ವಾಹನ ಓಡಿಸೋ ಸಾಹಸ ಮಾಡೋರೆ ಹೆಚ್ಚು . ಅಂತಹವರಿಗೆ ಇನ್ನು ದಂಡದ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಇಷ್ಟು ದಿನ ಹೆಚ್ಚಿನೋರು ಹೆಲ್ಮೆಟ್ ಧರಿಸದೆ, ನಿಯಮ ಉಲ್ಲಂಘಿಸಿ ಒಮ್ಮೆ ದಂಡ ಕಟ್ಟಿ, ಮುಂದೆಲ್ಲಾದರೂ ಮತ್ತೆ ಪೋಲೀಸ್ ಹಿಡಿದರೆ ರಸೀದಿ ತೋರಿಸಿ ಮುಂದೋಗಬಹುದಿತ್ತು. ಆದ್ರೀಗ ಎಚ್ಚೆತ್ತುಕೊಂಡ ಪೋಲೀಸರು ಪ್ರತಿ ಸಿಗ್ನಲ್‌ನಲ್ಲೂ 500 ರೂಪಾಯಿಯಂತೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ (ITMS) ತಂತ್ರಜ್ಞಾನ ಬಳಸಿಕೊಳ್ತಿದ್ದಾರೆ. ಬೆಂಗಳೂರಿನ ಎಲ್ಲ ಜಂಕ್ಷನ್‌ಗಳಲ್ಲೂ ಐಟಿಎಂಎಸ್ ಆಧಾರಿತ ಡಿಜಿಟಲ್ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ.
ಈ ಇಂಟಲಿಜೆಂಟ್(ITMS) ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಅಂದ್ರೆ ಏನು ಅಂತ ಗೊತ್ತಾ ನಿಮಿಗೆ? ಈ ಐಟಿಎಂಎಸ್ ಬೆಂಗಳೂರಲ್ಲಿ ಇತ್ತೀಚೆಗೆ ಜಾರಿಯಾದ ಸಿಸ್ಟಂ. ಡಿಜಿಟಲ್ ಕ್ಯಾಮರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡ ಹಾಕೋ ವಿಧಾನ ಇದು. ಬೆಂಗಳೂರಿನ ಎಲ್ಲಾ ಜಂಕ್ಷನ್ ಗಳಲ್ಲೂ ಐಟಿಎಂಎಸ್ ವ್ಯವಸ್ಥೆ ಮಾಡಲಾಗುತ್ತಿದೆ. ಒಬ್ಬ ರೈಡರ್ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ 10 ಸಾವಿರ ದಂಡ ಸಹ ಬೀಳಬಹುದು.
ಐಟಿಎಂಎಸ್ ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಕೇಸ್‌ಗಳು ದಾಖಲಾಗಿವೆ. ಹಾಗಾಗಿ ಇನ್ಮುಂದೆಯಾದರೂ ನೀವು ಎಲ್ಲಾ ರೂಲ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ. ಮುಖ್ಯವಾಗಿ ಎಲ್ಲಿಗೆ ಹೋದರೂ ಹೆಲ್ಮೆಟ್ ಹಾಕಿಯೇ ಹೋಗಿ. ನಿಮಗೆ ಬೀಳುವ ಭಾರೀ ದಂಡವನ್ನು ತಪ್ಪಿಸಿ.