ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅಭಿಮಾನಿಗಳಿಗೆ ಸಂತಸದ ಸುದ್ದಿ !
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 30 ಡಿಸೆಂಬರ್ 2022 ರಂದು ಬೆಳಿಗ್ಗೆ ತನ್ನ ತಾಯಿಯನ್ನು ಭೇಟಿ ಮಾಡಲು ದೆಹಲಿಯಿಂದ ರೂರ್ಕಿಗೆ ಹೋಗಿದ್ದು, ಸದ್ಯ ಬಾಂಗ್ಲಾದೇಶ ಪ್ರವಾಸ ಮುಗಿಸಿ ತವರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಅವರು ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಘಾತದ ನಡೆದು 1 ತಿಂಗಳ ನಂತರ ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಈ ವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಮಾಹಿತಿ ದೊರೆತಿದೆ.
ವರದಿ ಪ್ರಕಾರ ರಿಷಬ್ ಪಂತ್ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ನಂತರ ಚೇತರಿಸಿಕೊಂಡಿರುವ ಬಗ್ಗೆ ಇನ್ಸೈಡ್ ಸ್ಪೋರ್ಟ್ ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.
ಇನ್ಸೈಡ್ ಸ್ಪೋರ್ಟ್ ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪ್ರಕಾರ ರಿಷಬ್ ಪಂತ್ ಸಂಪೂರ್ಣ ಫಿಟ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ. ಅಪಘಾತದಲ್ಲಿ, ಪಂತ್ ಅವರ ಬಲ ಮೊಣಕಾಲಿನ ಎಲ್ಲಾ ಮೂರು ಅಸ್ಥಿರಜ್ಜುಗಳು ಮುರಿದುಹೋಗಿವೆ. ಆದ್ದರಿಂದ ಈಗಾಗಲೇ ಒಂದು ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದ್ದು ಶಸ್ತ್ರಚಿಕಿತ್ಸೆಯನ್ನು ಇನ್ನೂ ಮಾಡಬೇಕಾಗಿದೆ ಎಂದು ಮಾಹಿತಿ ಇದೆ.
ಈಗಾಗಲೇ 2022 ರಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾಗಾಗಿ ಒಟ್ಟು 7 ಪಂದ್ಯಗಳನ್ನು ಆಡಿದ್ದು ಉತ್ತಮ ಆಟಗಾರರಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೆ ರಿಷಬ್ ಪಂತ್ ಅವರು ಆದಷ್ಟು ಬೇಗ ಮತ್ತೇ ಟೀಮ್ ಇಂಡಿಯಾಗಾಗಿ ಆಟ ಆಡುವಂತಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.