ಈ ಐದು ಆಪ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ತಕ್ಷಣವೇ ಡಿಲೀಟ್‌ ಮಾಡಿ ! ಕಾರಣ ಇಲ್ಲಿದೆ

ಸ್ಮಾರ್ಟ್ ಫೋನ್ ಇಲ್ಲದೇ ಯಾವ ಕೆಲಸವೂ ನಡೆಯಲ್ಲ ಅನ್ನೋ ಪರಿಸ್ಥಿತಿ ಇವತ್ತು ಉಂಟಾಗಿದೆ. ಹೌದು ಇವತ್ತು ಫುಡ್ ಆರ್ಡರ್ ಮಾಡಲು ಒಂದು ಆಪ್, ಇಲೆಕ್ಟ್ರಿಕ್ ವಸ್ತು ಕೊಂಡು ಕೊಳ್ಳಲು ಒಂದು ಆಪ್, ವಾಸ್ತು ನೋಡಲು ಒಂದು ಆಪ್, ಟಿಕೆಟ್ ಬುಕ್ ಮಾಡಲು ಒಂದು ಆಪ್ ಹೀಗೆ ಪ್ರತಿಯೊಂದಕ್ಕೂ ಆಪ್ ಮೊರೆ ಹೋಗಿರುವ ನಾವು ಇವತ್ತು ಕಣ್ಣಿದ್ದು ಕೂಡ ಕೆಲವೊಮ್ಮೆ ಕುರುಡರು ಆಗುವುದು ಸಹಜ ಆದ್ದರಿಂದ ನಾವು ಜಾಗರೂಕರಾಗಿರಬೇಕಾಗುತ್ತದೆ. ಹೌದು OTP ಕಳ್ಳರು ATM ಕಳ್ಳರು ಹೀಗೆ ಹಲವಾರು ರೀತಿಯ ಕಳ್ಳರ ಜೊತೆಗೆ ಇವತ್ತು ಆಪ್ ಕಳ್ಳರು ಇದ್ದಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.

ಮುಖ್ಯವಾಗಿ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು, ಪೇಮೆಂಟ್ ಅಪ್ಲಿಕೇಶನ್‌ಗಳು, ಎಡಿಟಿಂಗ್ ಅಪ್ಲಿಕೇಶನ್‌ಗಳು, ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಗಳು ಹೀಗೆ ನಾನಾ ಬಗೆಯ ಆಪ್ ಗಳು ಲಭ್ಯವಿರುತ್ತವೆ. ಆದರೆ ಈ ಅಪ್ಲಿಕೇಶನ್ಗಳಲ್ಲಿ ಕೆಲವು ಸಾಕಷ್ಟು ಅಪಾಯಕಾರಿಯಾಗಿರುತ್ತದೆ. ಇವುಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದ ತಕ್ಷಣ, ಹ್ಯಾಕರ್‌ಗಳು ಫೋನ್ ಅನ್ನು ಹ್ಯಾಕ್ ಮಾಡುತ್ತಾರೆ. ಒಮ್ಮೆ ಫೋನ್ ಹ್ಯಾಕ್ ಆಯಿತು ಎಂದರೆ ಬ್ಯಾಂಕ್ ಖಾತೆ ಸೊನ್ನೆ ಆಗುವುದು ಸಹ ಖಂಡಿತಾ.

ವರದಿಯ ಪ್ರಕಾರ, ಅತ್ಯಂತ ಅಪಾಯಕಾರಿ 5 ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ app ಮೂಲಕ ಹ್ಯಾಕರ್ ಗಳು ಸುಲಭವಾಗಿ ನಿಮ್ಮ ಫೋನ್ ಅನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಬಳಕೆದಾರರ ಖಾತೆ ಸಂಖ್ಯೆ, ಲಾಗಿನ್ ಐಡಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ಐದು ಆಪ್ ಬಗ್ಗೆ ಜಾಗರೂಕರಾಗಿರಬೇಕು.

ಹೌದು ಜನರನ್ನು ವಂಚನೆಗೆ ಗುರಿ ಮಾಡುವ ಮತ್ತೊಂದು ಬ್ಯಾಂಕಿಂಗ್ ಟ್ರೋಜನ್ ರೌಂಡ್ ಎಂದರೆ ವಲ್ಚರ್ .
ವಲ್ಚರ್ ಎಂಬುದು ಆಂಡ್ರಾಯ್ಡ್ ಬ್ಯಾಂಕಿಂಗ್ ಟ್ರೋಜನ್ ಆಗಿದ್ದು, ಅದು ಸೋಂಕಿತ ಸಾಧನಗಳಿಂದ PII ಕದಿಯುವುದರಲ್ಲಿ ಮತ್ತು ಸ್ಕ್ರೀನ್-ಸ್ಟ್ರೀಮಿಂಗ್ ಸಾಮರ್ಥ್ಯಗಳನ್ನು ಬಳಸುವುದರಲ್ಲಿ ಪರಿಣತಿ ಹೊಂದಿದೆ ಎಂದು ಥ್ರೆಟ್ ಫ್ಯಾಬ್ರಿಕ್ ವರದಿ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1,000 ರಿಂದ 100,000 ಇನ್ಸ್ಟಲೆಶನ್ ನೊಂದಿಗೆ ಮೂರು ಹೊಸ ಡ್ರಾಪ್ಪರ್‌ಗಳನ್ನು ಥ್ರೆಟ್ ಫ್ಯಾಬ್ರಿಕ್ ಕಂಡುಹಿಡಿದಿದೆ ಎಂದು ಮಾಹಿತಿ ದೊರೆತಿದೆ.

ಹಾಗಿದ್ದರೆ ಆ 5 ಅತ್ಯಂತ ಅಪಾಯಕಾರಿ ಆಪ್‌ಗಳು ಯಾವುದು ಎಂದು ಇಲ್ಲಿ ತಿಳಿಸಲಾಗಿದೆ. ನೀವು ಈ ಆಪ್‌ಗಳನ್ನು ತಕ್ಷಣ ಡಿಲೀಟ್ ಮಾಡಿ :

  • Zetter Authentiction
  • Codice Fiscale 2022
  • Recover Audio
  • Image and Videos
  • Manager Small Lite
  • My Finances Tracker

ಈ ಅಪ್ಲಿಕೇಶನ್‌ಗಳನ್ನು ಕೂಡಾ google ಪ್ಲೇ ಸ್ಟೋರ್ ನಿಂದ ಲಕ್ಷಾಂತರ ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಆದರೆ ಈ app ಗಳು ಖಂಡಿತವಾಗಿಯೂ ಮೋಸದ ಜಾಲ. ಈ ಅಪ್ಲಿಕೇಶನ್‌ಗಳಲ್ಲಿ ಯಾವುದನ್ನಾದರೂ ನೀವು ಕೂಡಾ ಡೌನ್‌ಲೋಡ್ ಮಾಡಿದ್ದರೆ ತಕ್ಷಣ ಅವುಗಳನ್ನು ಡಿಲೀಟ್ ಮಾಡುವುದು ಉತ್ತಮ.

ಈ ಅಪ್ಲಿಕೇಶನ್ ಡಿಲೀಟ್ ಮಾಡುವ ಮೂಲಕ ನೀವು ನಿಮ್ಮ ಬ್ಯಾಂಕ್ ಮೊತ್ತ ಮತ್ತು ಖಾಸಗಿ ದಾಖಲೆಗಳನ್ನು ಸುರಕ್ಷಿತಗೊಳಿಸಬಹುದಾಗಿದೆ.

Leave A Reply

Your email address will not be published.