Health Tips: ಈ ಜ್ಯೂಸ್ ಶಕ್ತಿ ಕೊಡುತ್ತೆ ಎಂದು ಈ ಕುಡಿಯಲು ಹೋಗಬೇಡಿ, ಸ್ವಲ್ಪ ಈ ಸುದ್ದಿ ಓದಿ!
ಎನರ್ಜಿ ಡ್ರಿಂಕ್ಸ್ ಆಹಾರಕ್ಕೆ ಪೂರಕವಾಗಿ ಹೆಚ್ಚುವರಿ ಪೋಷಣೆಯಾಗಿದೆ. ಇದು ನೀರು, ಸಕ್ಕರೆ, ಹಾಲಿನ ಪ್ರೋಟೀನ್, ಮಾಲ್ಟೆಡ್ ಗೋಧಿ, ಒಣಗಿದ ಕೆನೆ ತೆಗೆದ ಹಾಲು, ವಿಟಮಿನ್ಸ್ ಮತ್ತು ಮಿನರಲ್ಸ್ಗಳ ಮಿಶ್ರಣವಾಗಿದೆ. ಇಷ್ಟೆಲ್ಲಾ ಪೋಷಕಾಂಶಗಳು ಇದ್ದರೂ ಈ ಎನರ್ಜಿ ಡ್ರಿಂಕ್ಸ್ ಆರೊಗ್ಯಕ್ಕೆ ಮಾರಕವಾಗಬಹುದು. ಹೇಗೆ? ಎನರ್ಜಿ ಡ್ರಿಂಕ್ಸ್ ದಿನಕ್ಕೆ 2 ರಿಂದ 3 ಬಾರಿ ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎನ್ನಲಾಗಿದೆ.
ಎನರ್ಜಿ ಡ್ರಿಂಕ್ಸ್ ಕೆಫೀನ್ ಮತ್ತು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಈ ಕಾರಣದಿಂದ ಇದನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳು ಉಂಟಾಗಬಹುದು. ಎನರ್ಜಿ ಡ್ರಿಂಕ್ಸ್ ಅನ್ನು ಹೆಚ್ಚು ಸೇವಿಸಿದರೆ, ಹೃದಯ ಬಡಿತದ ವೇಗ ನಿಯಂತ್ರಣಕ್ಕೆ ಸಿಗದಂತೆ ಏರತೊಡಗುತ್ತದೆ. ಇದರ ಪರಿಣಾಮ ಒತ್ತಡ ಮತ್ತು ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ.
ಇನ್ನು ತೂಕದ ಬಗ್ಗೆ ಕಾಳಜಿವಹಿಸುವವರು ಈ ಎನರ್ಜಿ ಡ್ರಿಂಕ್ಸ್ ಸೇವಿಸಬಾರದು. ಯಾಕಂದ್ರೆ, ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರೋದ್ರಿಂದ ಇದನ್ನು ಸೇವಿಸಿದರೆ ಬೊಜ್ಜು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಇದರಲ್ಲಿ ಕೆಫೀನ್ ಪ್ರಮಾಣವೂ ಹೆಚ್ಚಾಗಿರೋದ್ರಿಂದ ಈ ಪಾನೀಯವನ್ನು ಸೇವಿಸಿದಾಗ ನೀರಿನ ದಾಹ ಆಗುವುದಿಲ್ಲ. ಇದರ ಪರಿಣಾಮ ನಿಮ್ಮ ದೇಹವು ನಿರ್ಜಲೀಕರಣಗೊಳ್ಳಬಹುದು.
ಅಲ್ಲದೆ, ಎನರ್ಜಿ ಡ್ರಿಂಕ್ಸ್ ಗಳಲ್ಲಿನ ಕೆಫೀನ್ ದ್ರವವು ಮೂತ್ರಪಿಂಡದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಆಗಾಗ ಮೂತ್ರ ವಿಸರ್ಜನೆಯ ಸಮಸ್ಯೆ ಎದುರಾಗುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಕೊರತೆಯೂ ಉಂಟಾಗುತ್ತದೆ. ವಿಶೇಷವಾಗಿ ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಈ ಪಾನೀಯದ ಅತಿಯಾದ ಸೇವನೆಯು ನಿದ್ರೆಗೆ ಅಡ್ಡಿಪಡಿಸುತ್ತದೆ.
ಹೃದಯಾಘಾತದಂತಹ ಹೃದಯ ಸಂಬಂದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆತಂಕ ಮತ್ತು ಫೋಬಿಯಾಗಳಂತಹ ಸಮಸ್ಯೆಗಳು ಎದುರಾಗಬಹುದು. ಇದರಲ್ಲಿನ ಕೆಫೀನ್ ಅಂಶವು ಹೆಚ್ಚು ಅಪಾಯಕಾರಿ ಎಂದು ಅಧ್ಯಯನಗಳು ತಿಳಿಸಿವೆ. ಹಾಗಾಗಿ
ಎನರ್ಜಿ ಡ್ರಿಂಕ್ಸ್ ಎನರ್ಜಿ ಕೊಡುತ್ತೇ ಎಂದು ಕುಡಿಯಲು ಹೋಗದೇ ಇರುವುದೇ ಉತ್ತಮ.