ನಿಮ್ಮ ಬಳಿ ಟೋಲ್ ರಶೀದಿ ಇದೆಯಾ? ಇದ್ದರೆ ಪ್ರಯೋಜನ ತಿಳಿದುಕೊಳ್ಳಿ! ಕಂಪ್ಲೀಟ್ ವಿವರ ಇಲ್ಲಿದೆ

ಸರ್ಕಾರ ವಿಧಿಸುವ ಹಲವು ತೆರಿಗೆಗಳಲ್ಲಿ ಟೋಲ್ ಟ್ಯಾಕ್ಸ್ ಕೂಡ ಒಂದು. ನಿರ್ವಹಣಾ ಶುಲ್ಕವಾಗಿ, ರಸ್ತೆಗಳಲ್ಲಿ ಸಂಚರಿಸುವ ಚಾಲಕರಿಂದ ಹಣವನ್ನು ವಸೂಲಿ ಮಾಡುತ್ತಾರೆ. ಟೋಲ್ ಎನ್ನುವುದು ಕೆಲವು ಅಂತರರಾಜ್ಯ ಎಕ್ಸ್‌ಪ್ರೆಸ್‌ವೇಗಳು, ಸುರಂಗಗಳು, ಸೇತುವೆಗಳು ಮತ್ತು ಇತರ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ದಾಟುವಾಗ ವಾಹನ ಚಾಲಕರು ಪಾವತಿಸಬೇಕಾದ ಶುಲ್ಕವಾಗಿದೆ. ಆದರೆ ಹೆಚ್ಚಿನ ಜನರು, ಪಾವತಿಸಿದ ಶುಲ್ಕಗಳಿಗೆ ನೀಡಿದ ರಶೀದಿಯನ್ನು ಬಿಸಾಡುತ್ತಾರೆ. ಆದರೆ, ನಿಮಗೆ ಗೊತ್ತಾ? ಈ ರಶೀದಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರಿಂದ ಏನೆಲ್ಲಾ ಲಾಭವನ್ನು ಪಡೆಯಬಹುದೆಂದು? ಹಾಗಾದರೆ ಬನ್ನಿ, ರಶೀದಿಯ ಪ್ರಯೋಜನಗಳ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಸಿದ ನಂತರ ರಶೀದಿಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅನೇಕ ಲಾಭಗಳಿವೆ. ಟೋಲ್ ರಸ್ತೆಯಲ್ಲಿ ಪ್ರಯಾಣಿಸುವಾಗ ನಿಮ್ಮ ಕಾರು ಅಥವಾ ವಾಹನ ಕೆಟ್ಟು ಹೋದರೆ, ಟೋಲ್ ಕಂಪನಿಯು ನಿಮ್ಮ ಕಾರನ್ನು ಸಾಗಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಎಕ್ಸೆಸ್ ಹೆದ್ದಾರಿಯಲ್ಲಿ ನಿಮ್ಮ ಕಾರಿನಲ್ಲಿ ಪೆಟ್ರೋಲ್ ಅಥವಾ ಬ್ಯಾಟರಿ ಖಾಲಿಯಾದರೆ, ನಿಮ್ಮ ಕಾರನ್ನು ಅಥವಾ ವಾಹನವನ್ನು ಬದಲಿಸಲು ಮತ್ತು ಪೆಟ್ರೋಲ್ ಮತ್ತು ಬಾಹ್ಯ ಚಾರ್ಜಿಂಗ್ ಅನ್ನು ಒದಗಿಸುವ ಜವಾಬ್ದಾರಿಯನ್ನು ಟೋಲ್ ಸಂಗ್ರಹ ಕಂಪನಿಯು ಹೊಂದಿರುತ್ತದೆ.

ನೀವು ಕರೆ ಮಾಡಿದರೆ ಸಾಕು, ನಿಮಗೆ ಕ್ಷಣ ಮಾತ್ರದಲ್ಲೇ ಸಹಾಯ ಸಿಗಲಿದ್ದೂ,5 ರಿಂದ 10 ಲೀಟರ್ ಪೆಟ್ರೋಲ್’ನ್ನು ಉಚಿತವಾಗಿ ಪಡೆಯಬಹುದು. ಕಾರು ಪಂಕ್ಚರ್ ಆಗಿದ್ದರೂ, ಟೋಲ್ ಫ್ರೀ ಸಂಖ್ಯೆಗೆ ಸಂಪರ್ಕಿಸಿದರೆ ನಿಮಗೆ ಸಹಾಯ ಮಾಡುತ್ತಾರೆ. ಅಷ್ಟೇ ಅಲ್ಲದೆ, ನಿಮ್ಮ ಕಾರು/ವಾಹನ ಅಪಘಾತಕ್ಕೀಡಾದರೆ, ನೀವು ಮೊದಲು ಟೋಲ್ ರಶೀದಿಯಲ್ಲಿ ಒದಗಿಸಲಾದ ಫೋನ್ ಸಂಖ್ಯೆಯನ್ನು ಸಂಪರ್ಕಿಸಬೇಕು. ಕಾರಿನಲ್ಲಿ ಪ್ರಯಾಣಿಸುವಾಗ ಇದ್ದಕ್ಕಿದ್ದಂತೆ ಯಾರಾದರೂ ಅಸ್ವಸ್ಥರಾಗಿದ್ದರೆ, ಆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕಾದಂತಹ ಪರಿಸ್ಥಿತಿಯಲ್ಲಿ ನಿಮಗೆ ಆಂಬ್ಯುಲೆನ್ಸ್ ಒದಗಿಸುವುದು ಟೋಲ್ ಕಂಪನಿಗಳ ಜವಾಬ್ದಾರಿಯಾಗಿದೆ.

ಹೆದ್ದಾರಿಗಳಲ್ಲಿ ಸಂಚರಿಸುವಾಗ, ಸಂಕಷ್ಟಕ್ಕೆ ಸಿಲುಕಿಕೊಂಡಾಗ ಏನು ಮಾಡಬೇಕೆಂದು ತೊಚುವುದಿಲ್ಲ. ಆ ಸಮಯದಲ್ಲಿ ಈ ಕ್ರಮವನ್ನು ಅನುಸರಿಸಿರಿ. ಸಂಕಷ್ಟದಿಂದ ಹೊರಬರಲು ತುಂಬ ಸಹಕಾರಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ: 1033

Leave A Reply

Your email address will not be published.