Home Entertainment ವಿಜಯ್ ದೇವರಕೊಂಡ ಜೊತೆ ಟೂರ್ ಹೋದದ್ದು ನಿಜ, ಏನಿವಾಗ ?- ಎಂದ ರಶ್ಮಿಕಾ ಮಂದಣ್ಣ !

ವಿಜಯ್ ದೇವರಕೊಂಡ ಜೊತೆ ಟೂರ್ ಹೋದದ್ದು ನಿಜ, ಏನಿವಾಗ ?- ಎಂದ ರಶ್ಮಿಕಾ ಮಂದಣ್ಣ !

Hindu neighbor gifts plot of land

Hindu neighbour gifts land to Muslim journalist

ಕೆಲವು ನಟಿಯರು ಏನೇ ಮಾಡಲಿ, ಏನಾದರೂ ಮಾತನಾಡಲಿ, ಕಣ್ಣು ಮುಚ್ಚಿ ಬಿಡುವುದರೊಳಗೆ ಅದು ವೈರಲ್ ಆಗಿ, ಸಾಕಷ್ಟು ಟ್ರೋಲ್ ಆಗಿಬಿಡುತ್ತದೆ. ಇಂತಹ ನಟಿಯರಲ್ಲಿ ಇಂಡಿಯನ್ ಕ್ರಶ್ ಆಗಿ ಮೆರೆಯುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಅವರ ಹೆಸರು ನಟ ವಿಜಯ್ ದೇವರಕೊಂಡ ಅವರೊಂದಿಗೆ ಬಹಳ ಕಾಲದಿಂದ ಕೇಳುಬರುತ್ತಿದೆ. ಇವರಿಬ್ಬರ ರಿಲೆಷನ್‌ಶಿಪ್‌ ಸುದ್ದಿ ಆಗಾಗ ವರದಿಯಾಗುತ್ತಲೇ ಇರುತ್ತದೆ. ಆದರೀಗ ಈ ವಿಚಾರವಾಗಿ ರಶ್ಮಿಕಾ ಮೌನ ಮುರಿದಿದ್ದು, ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಹೇಳಿದ್ದೇನು ಗೊತ್ತಾ?

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರಿಗೆ ನೀವು ವಿಜಯ್ ದೇವರಕೊಂಡ ಅವರೊಂದಿಗೆ ಸಂಬಂಧ ಹೊಂದಿದ್ದೀರಾ, ಇಲ್ಲವೆಂದಾದ್ರೆ ಮೊನ್ನೆ ಹೊಸವರ್ಷದ ಸಂಭ್ರಮಾಚರಣೆಯನ್ನು ಒಟ್ಟಿಗೇ ಎಂಜಾಯ್ ಮಾಡಿಕೊಂಡು ಸೆಲೆಬ್ರೇಟ್ ಯಾಕೆ ಮಾಡಿದ್ರಿ, ಅದೂ ಅಲ್ಲದೆ ಇದು ಭಾರೀ ಸುದ್ದಿ ಆಯ್ತಲ್ಲಾ, ಇದಕ್ಕೆ ಏನು ಹೇಳ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಬಂದಿವೆ. ಹೊಸ ವರ್ಷವನ್ನು ಸ್ವಾಗತಿಸುವ ಇವರಿಬ್ಬರ ಇತ್ತೀಚಿನ ಪೋಸ್ಟ್‌ಗಳು ನಿಜವಾಗಿಯೂ ಇವರು ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಅನುಮಾನವನ್ನು ಕೆದಕಿ ಎಬ್ಬಿಸಿದ್ದರಿಂದ ಈ ಪ್ರಶ್ನೆಗಳು ಹುಟ್ಟಿವೆ.

ಇದಕ್ಕೆ ಉತ್ತರಿಹಿದ ರಶ್ಮಿಕಾ, ವಿಜಯ್ ನನ್ನ ಉತ್ತಮ ಸ್ನೇಹಿತ, ಜೊತೆಯಲ್ಲಿ ಸಿನೆಮಾ ಕೂಡ ಮಾಡಿದ್ದೇವೆ. ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಮತ್ತು ‘ವರ್ಲ್ಡ್ ಫೇಮಸ್ ಲವರ್’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮೊದಲಿಂದಲೂ ಪರಿಚಿತರಾಗಿರೋದ್ರಿಂದ ಕ್ಲೋಸ್ ಇದ್ದೇವೆ ಅಷ್ಟೇ. ಸ್ನೇಹಿತರು ಯಾವಾಗ್ಲೂ ಒಟ್ಟಿಗಿರ್ಬಾರ್ದಾ ಎಂದು ಹೇಳಿದ ಅವರು, ನಾನು ವಿಜಯ್ ಜೊತೆ ಪ್ರವಾಸ ಹೋದದ್ದು ನಿಜ, ಅದರಲ್ಲೇನು ತಪ್ಪಿದೆ? ಅದೂ ಅಲ್ದೆ ತನ್ನ ಸ್ನೇಹಿತನ ಜೊತೆ ಟೂರ್ ಹೋದರೆ ಅದರಲ್ಲಿ ತಪ್ಪೇನಿದೆ, ನಿಮಗೇನು ಪ್ರಾಬ್ಲಂ? ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನನ್ನ ವಿಚಾರವಾಗಿ ಅನೇಕರು ಸಾಕಷ್ಟು ಟ್ರೋಲ್ ಮಾಡುತ್ತಾರೆ. ನಾನೇನು ಮಾತಾಡಿದರೂ ಅದು ಟ್ರೋಲ್ ಆಗಿಬಿಡುತ್ತದೆ. ಇದು ನನಗೆ ಸಾಮಾನ್ಯವಾಗಿದೆ. ಹಾಗಾಗಿ ಇಂತಹ ಟ್ರೋಲಿಂಗ್ ಅನ್ನು ಸಹಿಸಿಕೊಳ್ಳುತ್ತೇನೆ ಎಂದು ಹೇಳಿದರು. ಅಲ್ಲದೆ ಯಾರಾದರೂ ತನ್ನ ಮೇಲೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದಾಗ, ಅವರಿಗೆ ಹೇಗೆ ಉತ್ತರಿಸಬೇಕೆಂದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಗಾಸಿಪ್ ಮಾಡುವ ವರ್ಗ ಬೇರೆಯದೇ ಕಾಮೆಂಟು ಹೊಡೆಯುತ್ತಿದೆ. ನೀವು ಟೂರ್ ಹೋದದ್ದು ನಿಜ ಅಂತ ಆಯಿತು. ಜತೆಗೇ ಹೋದ್ರಾ, ಜತೆಗೇ ಇದ್ರಾ, ಟೂರ್ ಪ್ರೋಗ್ರಾಮ್ ನಲ್ಲಿ ಏನಿತ್ತು ಏನಿರಲಿಲ್ಲ? ಎನ್ನುವ ಕುತೂಹಲಿಗಳ ಪ್ರಶ್ನೆಗಳು ನಿಲ್ಲದೆ ಸುರಿಯುತ್ತಿವೆ. ರಜಾ ದಿನಗಳಲ್ಲಿ ದೂರದ ದ್ವೀಪ ಸಮೂಹಗಳಲ್ಲಿ, ಸಮುದ್ರದ ಅರೆಗತ್ತಲು ಕಿನಾರೆಗಳಲ್ಲಿ, ಸ್ವಿಮ್ಮಿಂಗ್ ಪೂಲಿನ ನೀಲಿ ನೀರಿನ ಆಳ-ಅಗಲಗಳಲ್ಲಿ ಅವರಿಬ್ಬರ ಸಾಂಗತ್ಯವು ನಿಚ್ಚಳವಾಗಿ ಕಂಡು ಬಂದ ಕಾರಣ ಮಾದ್ಯಮದ ಜತೆ ಟ್ರಾಲ್ ಜಗತ್ತು ಆಕೆಯನ್ನು ಬೆನ್ನು ಬಿದ್ದು ಹಿಮಾಲಿಸುತ್ತಿದೆ. ಇದೀಗ ಪೀಡಿಸಿ ಕಾಡಿಸಿ ಆಕೆಯ ಬಾಯಿಯಿಂದ ಸತ್ಯ ಕಕ್ಕಿಸಿದೆ – ಜತೆಗೆ ಹೋದ್ದು ನಿಜ, ಏನಿವಾಗ ?!