ಪಿಕಪ್ ನ ವಾಹನದ ಒಳತೂರಿದ ಬೃಹತ್ ಮರದ ದಿಮ್ಮಿ, ಪವಾಡ ಸದೃಶ ಪಾರಾದ ಚಾಲಕ

Share the Article

ಲಾರಿಯಲ್ಲಿ ಟಿಂಬರ್‌ ಸಾಗಾಟದ ಸಂದರ್ಭ ಮರದ ಬೃಹತ್ ದಿಮ್ಮಿಯೊಂದು ಪಿಕ್‌ಅಪ್‌ ಜೀಪಿನ ಗಾಜನ್ನು ಸೀಳಿ ಒಳಹೊಕ್ಕ ಘಟನೆ ಸಂಭವಿಸಿದೆ.

ಮಡಿಕೇರಿ ಮೂಲಕವಾಗಿ ಶುಕ್ರವಾರ ರಾತ್ರಿ 14 ಚಕ್ರದ ಲಾರಿಯೊಂದರಲ್ಲಿ ಭಾರೀ ಗಾತ್ರದ‌ ಮರದ ದಿಮ್ಮಿಗಳನ್ನು ಮಂಗಳೂರು ಕಡೆಗೆ ಸಾಗುತ್ತಿತ್ತು. ಸಂಪಾಜೆ ರಸ್ತೆಯ ಜೋಡುಪಾಲ ಸಮೀಪ ಬಂದಾಗ ದಿಮ್ಮಿಗಳನ್ನು ಬಂಧಿಸಿದ್ದ ಹಗ್ಗ ತುಂಡರಿಸಲ್ಪಟ್ಟ ಪರಿಣಾಮ ದಿಮ್ಮಿಗಳು ಏಕಾಏಕಿ ರಸ್ತೆಗೆ ಉರುಳಿ ಬಿದ್ದಿದ್ದವು.

ಅದೇ ಸಮಯಕ್ಕೆ ಜೋಡುಪಾಲದಿಂದ ಮದೆನಾಡು ಕಡೆಗೆ ಪಿಕ್‌ಅಪ್‌ ವಾಹನ ಒಂದು ಬರುತ್ತಿತ್ತು. ರಸ್ತೆಗೆ ಉರುಳಿದ ದಿಮ್ಮಿಗಳ ಪೈಕಿ ಒಂದು ಮರದ ದಿಮ್ಮಿ ಪಿಕ್ ಅಪ್ ವಾಹನವನ್ನು ಅಪ್ಪಳಿಸಿದೆ. ಗಾಡಿಯ ಗಾಜನ್ನು ಸೀಳಿ ಒಳಹೊಕ್ಕಿದೆ.

ಈ ಅಚಾನಕ್ ಘಟನೆಯಲ್ಲಿ ಪಿಕ್ ಅಪ್ ಚಾಲಕ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಪಿಕ್ ಅಪ್ ತೀವ್ರ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಸುರಕ್ಷಿತವಾಗಿ ಟಿಂಬರ್ ಸಾಗಾಟ ಮಾಡಿದ ಬಗ್ಗೆ ಸ್ಥಳೀಯರಿಂದ ತೀವ್ರ ಆಕ್ರೋಶ ಕೇಳಿ ಬಂದಿದೆ. ಈ ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply