SBI home loan Offers: ಗೃಹಸಾಲ ಪಡೆಯುವವರಿಗೆ ಗುಡ್ ನ್ಯೂಸ್ | SBI ನಿಂದ ವಿಶೇಷ ಆಫರ್‌ ಪ್ರಕಟ !

ಇದೀಗ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) “ಕ್ಯಾಂಪೈನ್‌ ರೇಟ್ಸ್‌” ಹೆಸರಿನಲ್ಲಿ ಕೊಡುಗೆಗಳನ್ನು ಪ್ರಕಟಿಸಿದೆ. ಈ ಆಫರ್ ಗೃಹಸಾಲ ಪಡೆಯುವವರಿಗೆ ಲಭ್ಯವಾಗಲಿದ್ದು, ಗೃಹಸಾಲ ಬಡ್ಡಿದರದಲ್ಲಿ 30 ರಿಂದ 40 ರಷ್ಟು ಮೂಲಾಂಶ ಕಡಿತವಾಗಲಿದೆ. ಹಾಗೇ ಈ ಆಫರ್‌ ಮಾರ್ಚ್‌ 31, 2023 ರವರೆಗೆ ಮಾತ್ರ ಇರಲಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

• ಸಾಮಾನ್ಯ ಗೃಹಸಾಲಕ್ಕೆ ಎಸ್‌ಬಿಐ ಭರ್ಜರಿ ಆಫರ್ ನೀಡಿದ್ದು, ಕ್ರೆಡಿಟ್‌ ಸ್ಕೋರ್‌ 700 ಮತ್ತು ಅದಕ್ಕಿಂತ ಅಧಿಕ ಇರುವವರಿಗೆ ಈ ಕೊಡುಗೆ ಲಭ್ಯವಾಗಲಿದೆ.
• ಎಸ್‌ಬಿಐ ಗೃಹಸಾಲ ಬಡ್ಡಿದರ ಶೇಕಡಾ 8.90 ಇದ್ದರೆ, ಅದರಲ್ಲಿ 30 ಮೂಲಾಂಶದಷ್ಟು ಕಡಿತವಾದರೆ, ಗ್ರಾಹಕರಿಗೆ ಶೇಕಡಾ 8.60 ಬಡ್ಡಿದರಕ್ಕೆ ಗೃಹಸಾಲ ದೊರೆಯುತ್ತದೆ.
•  750 – 799 ಮತ್ತು 700 -749 ಕ್ರೆಡಿಟ್‌ ಸ್ಕೋರ್‌ ಇರುವವರಿಗೆ 8.60% ಮತ್ತು 8.70% ಬಡ್ಡಿದರದಲ್ಲಿ ಗೃಹಸಾಲ ಲಭ್ಯವಾಗಲಿದೆ. ಆಫರ್ ಗೂ ಮೊದಲು ಈ ಕ್ರೆಡಿಟ್‌ ಸ್ಕೋರ್‌ ಇರುವವರು ಕ್ರಮವಾಗಿ 9% ಮತ್ತು 9.10% ಬಡ್ಡಿದರ ನೀಡಬೇಕಿತ್ತು.
•  ಅಲ್ಲದೆ, “NTC/NO CIBIL/-1” ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಎಸ್‌ಬಿಐ 30 ಬಿಪಿಎಸ್‌ ಕಡಿತ ಮಾಡಲಿದ್ದು, ಇದರಿಂದ  8.80% ಬಡ್ಡಿದರದಲ್ಲಿ ಸಾಲ ಸಿಗಲಿದೆ. ಈ ಮೊದಲು ಈ ಸ್ಕೋರ್‌ ಇರುವವರಿಗೆ ಗೃಹಸಾಲಕ್ಕೆ 9.10% ಬಡ್ಡಿದರ ಇತ್ತು. ಸದ್ಯ ಈ ಆಫರ್ ನಿಂದಾಗಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ.

ಆದರೆ ಈ ಕೊಡುಗೆಗಳು ಇರೋದು ಕೇವಲ 700 ಮತ್ತು ಅದಕ್ಕಿಂತ ಹೆಚ್ಚಿರುವ ಸ್ಕೋರ್ ಗಳಿಗೆ ಮಾತ್ರ. ಅದರ ಹೊರತು 650 – 699 ಮತ್ತು 550 – 649 ಕ್ರೆಡಿಟ್‌ ಸ್ಕೋರ್‌ ಇರುವವರಿಗೆ ಈ ಆಫರ್‌ ಲಭ್ಯವಾಗಲ್ಲ. ಈ ಸ್ಕೋರ್‌ ಇರುವವರಿಗೆ ಈ ಹಿಂದಿನ 9.20% ಬಡ್ಡಿದರ ಸಿಗುವುದು. ಜೊತೆಗೆ ಮಹಿಳಾ ಗೃಹಸಾಲ ಖರೀದಿದಾರರಿಗೂ 5 ಬಿಪಿಎಸ್‌ನಷ್ಟು ಬಡ್ಡಿದರ ಕಡಿತವಾಗಲಿದ್ದು, ಸ್ಯಾಲರಿ ಅಕೌಂಟ್‌ ಹೊಂದಿರುವವರಿಗೆ 5 ಬಿಪಿಎಸ್‌ನಷ್ಟು ಬಡ್ಡಿದರ ಕಡಿತವಾಗಲಿದೆ.

ಕ್ರೆಡಿಟ್‌ ಬ್ಯೂರೋಸ್‌ ಇನ್‌ ಇಂಡಿಯಾ, ಗ್ರಾಹಕರ ಕ್ರೆಡಿಟ್‌ ಹಿಸ್ಟರಿ ಮೇಲೆ ಈ ಸ್ಕೋರ್ ನೀಡುತ್ತದೆ. ಕ್ರೆಡಿಟ್‌ ಸ್ಕೋರ್‌ 300ರಿಂದ 900ರವರೆಗೆ ಇರುತ್ತದೆ. ಆದರೆ ಇಲ್ಲಿ 700 ರ ಸಾಲಿನಲ್ಲಿರುವ ಕ್ರೆಡಿಟ್‌ ಸ್ಕೋರ್‌ ಹೊಂದಿರುವವರನ್ನು ‘ಬೆಸ್ಟ್‌ ಕ್ರೆಡಿಟ್‌ ಸ್ಕೋರ್‌ ಹೊಂದಿರುವ ಗ್ರಾಹಕ’ ಎಂದು ಬ್ಯಾಂಕ್‌ಗಳು ಪರಿಗಣಿಸುತ್ತವೆ.

Leave A Reply

Your email address will not be published.