ಕೇವಲ 30,000 ಕ್ಕೆ ಮನೆಗೆ ತನ್ನಿ ಸೂಪರ್ ಡೂಪರ್ ಬೈಕ್ !!
ಆರ್ಥಿಕ ಸಮಸ್ಯೆಯಿಂದ ಎಲ್ಲರಿಗೂ ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಮೇಲೆ ಭರವಸೆ ಕಡಿಮೆಯಿರುವ ಕಾರಣ ಜನರು ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಮನಸ್ಸು ಮಾಡುವುದಿಲ್ಲ. ಸರಿಯಾಗಿ ವಿಚಾರಣೆ ಮಾಡಿ, ಒಳ್ಳೆ ವೆಬ್ ಸೈಟ್ ಸಹಾಯದಿಂದ ನೀವು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಯನ್ನು ಮಾಡಬಹುದಾಗಿದೆ. ದೇಶದಲ್ಲಿ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿ ಬೆಳೆದಿರುವ ಹೋಂಡಾ ವು ಬೃಹತ್ ಶ್ರೇಣಿಯ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ‘ಗಳನ್ನು ಹೊಂದಿದೆ. ಆದರೆ ಇವುಗಳಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಬೈಕ್ ಎಂದರೆ ಕಂಪನಿಯ ಹೋಂಡಾ ಸಿಬಿ ಶೈನ್ ಮೋಟಾರ್‌ಸೈಕಲ್ ಆಗಿದೆ.
ನಾವೀಗ ಈ ವಿಚಾರವನ್ನು ಯಾಕೆ ಹೇಳ್ತಿದ್ದೇವೆ ಅಂದ್ರೆ, ವಾಸ್ತವದಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಹಳೆಯ ಹೋಂಡಾ ಸಿಬಿ ಶೈನ್ ಬೈಕ್‌ಗಳನ್ನು ಮಾರಾಟ ಮಾಡುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಇವುಗಳಲ್ಲಿ ಕೆಲವು ಬೈಕ್‌ಗಳು ಹೆಚ್ಚಾಗಿ ಬಳಕೆಯಾಗಿಲ್ಲ. ಅವುಗಳಲ್ಲಿ ಮುಖ್ಯವಾಗಿ ಹೋಂಡಾ ಸಿಬಿ ಶೈನ್‌ನ ಕೆಲ ಪರ್ಯಾಯಗಳನ್ನು ನಾವು ನಿಮಗಾಗಿ ತಂದಿದ್ದೇವೆ. ನೀವೆನಾದರು ಸೆಕೆಂಡ್ ಹ್ಯಾಂಡ್ ಬೈಕ್ ಕೊಳ್ಳುವ ಪ್ಲಾನ್’ನಲ್ಲಿದ್ದರೆ ಈಗಲೇ ಖರೀದಿಸಬಹುದು. ಏಕೆಂದರೆ ಇದರ ಬೆಲೆ ಕೇವಲ 30000 ರೂ ಆಗಿದೆ!! ಹಾಗಾದರೆ, ಇದರ ಬೆಲೆ ಹಾಗೂ ಲಭ್ಯತೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಹೋಂಡಾ ಶೈನ್ 125 ಬೈಕ್ 124cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ, ಇದು 10.7PS ಪವರ್ ಮತ್ತು 11Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಹೋಂಡಾದ ACG (ಆಲ್ಟರ್ನೇಟರ್ ಕರೆಂಟ್ ಜನರೇಟರ್) ಸೈಲೆಂಟ್ ಸ್ಟಾರ್ಟರ್ ಆಯ್ಕೆಯ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಶೋರೂಂನಿಂದ ಈ ಬೈಕ್ ಖರೀದಿಸಿದರೆ ಕನಿಷ್ಠವೆಂದರೆ ರೂ.90,000 ಪಾವತಿಸಬೇಕಾಗುತ್ತದೆ. ಆದರೆ, ನೀವು ಇದನ್ನು ಕೇವಲ 30,000 ರೂ. ಗೆ ಕೊಂಡುಕೊಳ್ಳಬಹುದು. ಇವುಗಳನ್ನು OLX ನಲ್ಲಿ ಗಮನಿಸಿದ್ದೇವೆ ಮತ್ತು ಈ ಎಲ್ಲಾ ಬೈಕ್‌ಗಳು ದೆಹಲಿ ನೊಂದಾಯಿತ ಬೈಕ್ ಗಳಾಗಿವೆ.
ಮೊದಲ ಹೋಂಡಾ ಶೈನ್ 2015 ರ ಮಾಡೆಲ್ ಆಗಿದ್ದು, ಇದುವರೆಗೆ ಕೇವಲ 28,000 ಕಿಮೀ ಮಾತ್ರ ಪ್ರಯಾಣಿಸಿದೆ. ಈ ಬೈಕ್ ಗೆ 30 ಸಾವಿರ ರೂಪಾಯಿ ಬೇಡಿಕೆ ಇಡಲಾಗಿದೆ. ಇದರ ಸ್ಥಳ ದ್ವಾರಕಾ ಸೆಕ್ಟರ್ 2. ಬೈಕ್‌ನ ಎರಡೂ ಟೈರ್‌ಗಳು ಹೊಸ ಟೈರ್ ಗಳಾಗಿವೆ ಎಂದು ಹಾನರ್ ಹೇಳಿಕೊಂಡಿದೆ. ಇದು ಪ್ರತಿ ಲೀಟರ್‌ಗೆ 55ಕಿಮೀ ಮೈಲೇಜ್ ಕೊಡುತ್ತದೆ.
ಎರಡನೇ ಬೈಕ್ ಕೂಡ 2015 ರ ಮಾಡೆಲ್ ಬೈಕ್ ಆಗಿದ್ದು, ಕೇವಲ 1,26,500 ಕಿಮೀ ಚಲಿಸಿದೆ. ಈ ಬೈಕ್ ಗೂ 30 ಸಾವಿರ ರೂಪಾಯಿ ಬೇಡಿಕೆ ಇಡಲಾಗಿದೆ. ಇದರ ಸ್ಥಳ ಪ್ರತಾಪ್ ವಿಹಾರ್, ದೆಹಲಿ.
ಮೂರನೇ ಹೋಂಡಾ ಶೈನ್ ಇದುವರೆಗೆ ಕೇವಲ 45 ಸಾವಿರ ಕಿಮೀ ಚಲಿಸಿದೆ. ಬೈಕ್‌ನ ಎಂಜಿನ್‌ನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹಾನರ್ ಹೇಳಿಕೊಂಡಿದೆ. ಇದು 55 ರಿಂದ 60kmpl ಮೈಲೇಜ್ ನೀಡುತ್ತದೆ. ಎರಡೂ ಟೈರ್‌ಗಳು ಹೊಸ ಮತ್ತು ಟ್ಯೂಬ್‌ಲೆಸ್ ಆಗಿವೆ.