Home News E-Scooter Offer: ಓಲಾ ಸ್ಕೂಟರ್ ಮೇಲೆ ಬಂಪರ್ ಆಫರ್ | ಒಂದೇ ಬಾರಿಗೆ 6 ಕೊಡುಗೆಗಳು...

E-Scooter Offer: ಓಲಾ ಸ್ಕೂಟರ್ ಮೇಲೆ ಬಂಪರ್ ಆಫರ್ | ಒಂದೇ ಬಾರಿಗೆ 6 ಕೊಡುಗೆಗಳು ಲಭ್ಯ!!

Hindu neighbor gifts plot of land

Hindu neighbour gifts land to Muslim journalist

ನೀವು ಹೊಸ ಸ್ಕೂಟರ್ ಕೊಳ್ಳುವ ಯೋಚನೆಯಲ್ಲಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಅದರಲ್ಲೂ ಸಾಲ ಮಾಡಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಯೋಚನೆಯಲ್ಲಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ಓಲಾ Ola S1, Ola S1 Pro ಮತ್ತು Ola S1 Air ಎಂಬ ಮೂರು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ಸುಲಭ ಸಾಲದ ಕೊಡುಗೆಗಳು ಲಭ್ಯವಿದೆ. ಹಾಗೇ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಸಾಲದ ಮೂಲಕ ನಿಮ್ಮ ಆಯ್ಕೆಯ ಓಲಾ ಸ್ಕೂಟರ್ ಅನ್ನು ನೀವು ಖರೀದಿಸಬಹುದಾಗಿದೆ. ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

ಓಲಾ ಸ್ಕೂಟರ್‌ಗಳ ಮೇಲಿನ ಸಾಲದ ಬಡ್ಡಿದರವನ್ನು ಶೇಕಡಾ 2.2 ರಷ್ಟು ಕಡಿಮೆ ಮಾಡಲಾಗಿದೆ. ನೀವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿದ್ದರೆ ಸಾಲದ ಮೇಲಿನ ಬಡ್ಡಿ ದರವು ಶೇಕಡಾ 8.99 ರಿಂದ ಪ್ರಾರಂಭವಾಗಲಿದೆ. ಆದರೆ ಗ್ರಾಹಕರ ಪ್ರೊಫೈಲ್ ನ ಆಧಾರದ ಮೇಲೆ ಬಡ್ಡಿದರಗಳು ಬದಲಾಗುತ್ತವೆ. ಅಲ್ಲದೆ, ವಿನಿಮಯ ಕೊಡುಗೆಯೂ ಲಭ್ಯವಿದೆ. ನಿಮ್ಮ ಬಳಿ ಇರುವ ಹಳೆ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಹೊಸ ಓಲಾ ಸ್ಕೂಟರ್ ಖರೀದಿಸಿದರೆ 10 ಸಾವಿರದವರೆಗೆ ವಿನಿಮಯ ಲಾಭ ಪಡೆಯಬಹುದು. ಆದರೆ ಈ ಬಂಪರ್ ಆಫರ್ ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ.

ಇದಿಷ್ಟೇ ಅಲ್ಲದೆ, ಕ್ರೆಡಿಟ್ ಕಾರ್ಡ್ ಆಫರ್ ಕೂಡ ಲಭ್ಯವಿದೆ. ತಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಓಲಾ ಸ್ಕೂಟರ್ ಖರೀದಿಸುವ AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರು ರೂ. 5 ಸಾವಿರದವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಾಗೇ ಈ ಒಪ್ಪಂದ ಕೆಲ ಸಮಯದವರೆಗೆ ಮಾತ್ರ ಇರಲಿದೆ. ಜೊತೆಗೆ Ola S1 Pro ಮಾದರಿಯಲ್ಲಿ 15 ಸಾವಿರದವರೆಗೆ ರಿಯಾಯಿತಿ ಕೊಡುಗೆ ಲಭ್ಯವಿದೆ. ಈ ಆಫರ್ ಜನವರಿ 29 ರವರೆಗೆ ಮಾತ್ರ ಲಭ್ಯವಿದೆ. ಎಲೆಕ್ಟ್ರಿಕ್ ಸ್ಕೂಟರ್ ಕೊಳ್ಳುವವರಿಗೆ ಇದು ಉತ್ತಮ ಅವಕಾಶವಾಗಿದೆ.