ಮಗುವಿನೊಂದಿಗೆ ಮಗುವಾಗಿ ಆಟ ಆಡಿದ ಕಾಂತೇರಿ ದೈವ | ವೈರಲ್ ಆಗಿದೆ Video

Share the Article

ಕರ್ನಾಟಕದ ಕರಾವಳಿ ತುಳುನಾಡು ಎಂದೇ ಪ್ರಸಿದ್ಧಿ. ಇಲ್ಲಿ ನಡೆಯುವ ಪ್ರಮುಖ ಆಚರಣೆಯ ದೈವಾರದ ದಿನ ಅಥವಾ ಭೂತಾರಾಧನೆ. ಕಾಂತಾರ ಚಿತ್ರ ಬಂದ ಮೇಲೆಯಂತೂಮೇಲೆಯಂತೂ ಕರಾವಳಿಯ ಪ್ರಸಿದ್ಧ ಭೂತಾರಾಧನೆ ಅಂತಾರಾಷ್ಟ್ರೀಯ ಮಟ್ಟವನ್ನು ತಲುಪಿದೆ. ಈಗ ಭೂತದ ಮತ್ತು ಪುಟ್ಟ ಮಗು ಒಂದರ ನಡುವಿನ ಮೌಖಿಕ ಸಂಭಾಷಣೆ ವೈರಲ್ ಆಗಿದೆ.

ಭೂತ ಅಂದ ಕೂಡಲೇ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಇದೀಗ ಮಂಗಳೂರಿನ ಬಿಕರ್ನಕಟ್ಟೆಯ ಬಜ್ಜೋಡಿಯಲ್ಲಿ ನಡೆದ ದೊಂಪದಬಲಿಯಲ್ಲಿ ಕಾಂತೇರಿ ಜುಮಾದಿ ದೈವವೂ ಮಗುವನ್ನು ಮುಗ್ದತೆಯಿಂದ ಪರಸ್ಪರ ಭಾವಗಳಲ್ಲಿ ಮಾತನಾಡಿದ ವಿಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಮಗುವೊಂದು ನೆಲದಲ್ಲಿ ಕುಳಿತ ನೇಮೋತ್ಸವನ್ನು ಸ್ವೀಟ್ ಕಾರ್ನ್ ತಿನ್ನುತ್ತಾಕಣ್ಣು ಮಿಟುಕಿಸುತ್ತ ನೋಡುತ್ತಿತ್ತು. ಈ ಮಗುವನ್ನು ಕಂಡು, ಕಾಂತೇರಿ ಜುಮಾದಿ ದೈವ ಮಗುವಿನ ಹತ್ತಿರ ಬಂದು ಆಟವಾಡಲು ತೊಡಗಿದೆ. ಮಗುವಿನ ಬಳಿ ಕೈ ಚಾಚಿ ತನಗೂ ತಿನ್ನೋದಕ್ಕೆ ಕೊಡುವಂತೆ ಕೈ ಚಾಚಿದೆ. ದೈವ ತನ್ನಲ್ಲಿಗೆ ಬಂದಾಗ ಕೊಂಚವೂ ಭಯಪಡದೇ, ಮಗು ಸ್ವೀಟ್ ಕಾರ್ನ್ ನೀಡಲು ಮುಂದಾಗಿದೆ. ಕಾಂತೇರಿ ದೈವ ಮಗುವಿನ ಜತೆ ಕೀಟಲೆ ಮಾಡುತ್ತಾ ಒಂದೆರಡು ಕ್ಷಣಗಳನ್ನು ಕಳೆದಿದೆ. ಈ ಸಂದರ್ಭ ತಲೆದೂಗಿದ ದೈವ ತನ್ನ ಹಣೆಯ ಬಣ್ಣವನ್ನೇ ಆರ್ಶೀವಾದ ರೂಪದಲ್ಲಿ ಮಗುವಿನ ಹಣೆಗೆ ತಿಲಕವಿರಿಸಿದೆ. ಮಗುವಿನೊಂದಿಗಿನ ಮನಸ್ಸಿಗೆ ಮೊದ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಇಲ್ಲಿದೆ ನೋಡಿ.

Leave A Reply