ಮೊಟ್ಟೆ ಪ್ರಿಯರೇ ಈ ಸುದ್ದಿ ನಿಮಗಾಗಿ | ನಿಮಗೇನಾದರೂ ಈ ಸಮಸ್ಯೆ ಇದ್ದರೆ ಖಂಡಿತ ಮೊಟ್ಟೆ ಸೇವಿಸಲೇಬೇಡಿ !

ಮೊಟ್ಟೆಯನ್ನು ಪ್ರಪಂಚದಾದ್ಯಂತ ಪೌಷ್ಟಿಕ ಆಹಾರ ಪದಾರ್ಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೊಟ್ಟೆಯ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಸಾಕಷ್ಟು ಪ್ರೋಟೀನ್ ಇರೋದ್ರಿಂದ ಪ್ರತಿನಿತ್ಯ ಮೊಟ್ಟೆ ಸೇವಿಸೋದು ಮೂಳೆಗಳಿಗೂ ಒಳ್ಳೆಯದು. ಅಲ್ಲದೆ, ಮೊಟ್ಟೆಯು ಸೆಲೆನಿಯಮ್, ವಿಟಮಿನ್ ಡಿ, ವಿಟಮಿನ್ ಬಿ 6, ವಿಟಮಿನ್ ಬಿ 12, ಸತು, ತಾಮ್ರ ಮತ್ತು ಕಬ್ಬಿಣದಿಂದ ಸಮೃದ್ದವಾಗಿದೆ.

ದಿನಕ್ಕೆ ಎರಡು ಮೊಟ್ಟೆಗಳನ್ನು ತಿನ್ನುವುದರಿಂದ ಕೆಂಪು ರಕ್ತ ಕಣಗಳ ಸಂಖ್ಯೆ ಸುಧಾರಿಸುತ್ತದೆ. ಇದಿಷ್ಟೇ ಅಲ್ಲದೆ, ತೂಕ ಕಡಿಮೆಯಾಗಲು ಕೂಡ ಈ ಮೊಟ್ಟೆ ಸಹಕಾರಿಯಾಗಿದೆ. ಆದರೆ ಕೆಲವರು ಈ ಮೊಟ್ಟೆಯನ್ನು ಸೇವಿಸಬಾರದು. ಯಾರೆಂದರೆ, ಕೆಲವೊಂದು ಆರೋಗ್ಯ ಸಮಸ್ಯೆ ಇರುವಂತವರು ಮೊಟ್ಟೆ ತಿನ್ನಲೇಬಾರದು. ಯಾಕೆ? ಮೊಟ್ಟೆ ಸೇವನೆ ಆರೋಗ್ಯಕ್ಕೆ ಮಾರಕವೇ? ಹೌದು, ಈ 5 ಸಮಸ್ಯೆಗಳನ್ನು ಹೊಂದಿರುವವರು ಮೊಟ್ಟೆಯನ್ನು ತಿಂದರೆ ಅದು ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು.

ಹೃದ್ರೋಗ :

ಹೃದಯದ ಆರೋಗ್ಯ ಉತ್ತಮವಾಗಿರಬೇಕು, ಹೃದಯಾಘಾತ ಆಗದಂತೆ ತಡೆಯಬೇಕು ಎಂದಾದರೆ ಅದಕ್ಕೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ. ಅತಿಯಾಗಿ ಮೊಟ್ಟೆ ತಿನ್ನೋದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ. ಅಧಿಕ ಕೊಲೆಸ್ಟ್ರಾಲ್ ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತೆ. ಹೀಗಾಗಿ ಕೊಲೆಸ್ಟ್ರಾಲ್ ಇದ್ದವರು, ಹೃದ್ರೋಗ ಇರುವವರು ಮೊಟ್ಟೆ ಸೇವನೆಯ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಆದರೆ, ನೀವು ಮೊಟ್ಟೆ ಪ್ರಿಯರಾಗಿದ್ದರೆ, ಮೊಟ್ಟೆಯ ಬಿಳಿಭಾಗವನ್ನು ಮಾತ್ರ ತಿನ್ನುವುದು ಉತ್ತಮ. ಮೊಟ್ಟೆಯ ಬಿಳಿಯಲ್ಲಿ ಕೊಲೆಸ್ಟ್ರಾಲ್ ಇರುವುದಿಲ್ಲ ಎಂದು ಹೇಳಲಾಗಿದೆ.

ಚರ್ಮದ ಸಮಸ್ಯೆ :

ಮೊಟ್ಟೆಯು ದೇಹವನ್ನು ಹೀಟ್ ಮಾಡುತ್ತದೆ. ಹಾಗಾಗಿ ಸೂಪರ್ ಫುಡ್ ಅಂತ ಕರೆಯಲ್ಪಡುವ ಮೊಟ್ಟೆಯನ್ನು ತಿಂದರೆ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಮುಖದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವವರು ಮೊಟ್ಟೆಯಿಂದ ದೂರವಿರುವುದು ಉತ್ತಮ. ಮೊಟ್ಟೆಯಿಂದ ಹಾರ್ಮೋನುಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಇದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಬೀರಬಹುದು.

ಅಜೀರ್ಣ :

ಮೊಟ್ಟೆ ಸಾಮಾನ್ಯವಾಗಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಪ್ರೋಟೀನ್‌ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹದ ತಾಪವೂ ಹೆಚ್ಚಾಗಿರುವುದರಿಂದ ಹೆಚ್ಚು ಮೊಟ್ಟೆಯ ಸೇವನೆ ಅಜೀರ್ಣ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ, ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣ ಅಥವಾ ವಾಕರಿಕೆ ಮುಂತಾದ ಸಮಸ್ಯೆಗಳಿದ್ದರೆ, ಮೊಟ್ಟೆಯನ್ನು ಸೇವಿಸಬಾರದು. ಇದು ಹೊಟ್ಟೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ :

ಮೊಟ್ಟೆಗಳು ಕೊಲೆಸ್ಟ್ರಾಲ್‌ನಲ್ಲಿ ಸಮೃದ್ಧವಾಗಿವೆ. ಇದು ಟೆಸ್ಟೋಸ್ಟೆರಾನ್ ಮತ್ತು ಈಸ್ಟ್ರೊಜೆನ್‌ಗಳಂತಹ ಲೈಂಗಿಕ ಹಾರ್ಮೋನುಗಳ ಸಂಶ್ಲೇಷಣೆಯಲ್ಲಿ ಭಾಗವಹಿಸುತ್ತದೆ‌. ಅಧ್ಯಯನದ ಪ್ರಕಾರ, ಅಂಡಾಶಯ ಅಥವಾ ಪ್ರಾಸ್ಟೇಟ್‌ನಂತಹ ಹಾರ್ಮೋನ್-ಸೂಕ್ಷ್ಮ ಅಂಗಾಂಶಗಳಲ್ಲಿ ಹೆಚ್ಚಿನ ಮಟ್ಟದ ಜೀವಕೋಶಗಳು ಕ್ಯಾನ್ಸರ್ ಬೆಳವಣಿಗೆಗೆ ಎಡೆ ಮಾಡುತ್ತದೆ ಎನ್ನಲಾಗಿದೆ. ಮೊಟ್ಟೆಗಳು ಕೋಲಿನ್ ಎಂಬ ವಸ್ತುವನ್ನು ಒಳಗೊಂಡಿದ್ದು, ಇದು ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್‌ಗಳ ಗಂಭೀರ ಅಪಾಯವನ್ನು ಉಂಟುಮಾಡುತ್ತದೆ. ಅಲ್ಲದೆ, ಹೆಚ್ಚು ಮೊಟ್ಟೆಗಳನ್ನು ತಿನ್ನುವ ಜನರು ಕೊಲೊರೆಕ್ಟಲ್ ಸೇರಿದಂತೆ ಇತರ ರೀತಿಯ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಾರೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.

ಇನ್ಸುಲಿನ್ ಪ್ರತಿರೋಧ :

ಮೊಟ್ಟೆಗಳು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ರಕ್ತದಲ್ಲಿನ ಸಕ್ಕರೆ ಮಟ್ಟವು ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇಂತಹ ಗಂಭೀರ ಅಡ್ಡ ಪರಿಣಾಮಗಳನ್ನು ತಡೆಗಟ್ಟಲು ಮೊಟ್ಟೆಯ ಸೇವನೆಯನ್ನು ನಿಯಂತ್ರಿಸುವ ಅಗತ್ಯವಿದೆ. ಪ್ರತಿದಿನ ಮಿತಿಗಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ, ದೇಹವು ಇನ್ಸುಲಿನ್ ನಿರೋಧಕವಾಗಬಹುದು. ಸಾಮಾನ್ಯವಾಗಿ ದಿನಕ್ಕೆ 2 ರಿಂದ 3 ಮೊಟ್ಟೆಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ.

Leave A Reply

Your email address will not be published.