ದಾರಿ ಬಿಡಿ, ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರ್ತಾ ಇದೆ ಹೊಂಡಾ ಆಕ್ಟಿವಾದ ಹೊಸ ಸ್ಕೂಟರ್ ! ಇದರ ವಿಶೇಷತೆ ತಿಳಿದರೆ ಬೆರಗಾಗ್ತೀರ
ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಕಂಪನಿಗಳು ಹೊಸ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲಿವೆ. ಹಾಗೇ ಇತ್ತೀಚೆಗೆ ಹೋಂಡಾ, ಆಕ್ಟಿವಾ ಹೆಚ್-ಸ್ಮಾರ್ಟ್ ರೂಪಾಂತರಿಯನ್ನು ಕೀ ಲೆಸ್ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ವೇಳೆ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ನ ಎಂಡಿ ಮತ್ತು ಸಿಇಒ ಅತ್ಸುಶಿ ಒಗಾಟಾ ಕಂಪನಿಯ ಇವಿ ಮಾರ್ಗಸೂಚಿಯನ್ನೂ ಬಹಿರಂಗಪಡಿಸಿದ್ದಾರೆ. ಜನವರಿ 2024 ರಲ್ಲಿ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ, ಆಕ್ಟಿವಾ ಎಲೆಕ್ಟ್ರಿಕ್ಗಾಗಿ, ಕಂಪನಿಯು ವಿಭಿನ್ನವಾದ ವಿಧಾನದೊಂದಿಗೆ ಸಾಗಬಹುದು ಎನ್ನಲಾಗುತ್ತಿದೆ. ಆಕ್ಟಿವಾ ಎಲೆಕ್ಟ್ರಿಕ್ನಲ್ಲಿ ವಿಶ್ವಾಸಾರ್ಹತೆಯನ್ನು ಹೆಚ್ಚು ಕೇಂದ್ರೀಕರಿಸಬಹುದು. ಹಾಗೇ ಇದು 50 kmph ಗರಿಷ್ಟ ವೇಗ ಹೊಂದುವ ನಿರೀಕ್ಷೆಯಿದ್ದು, ಇದು ಚಾಲ್ತಿಯಲ್ಲಿರುವ ಉದ್ಯಮದ ಸರಾಸರಿ 80-100 kmph ಗಿಂತ ತುಂಬಾ ಕಡಿಮೆಯಾಗಿದೆ.
ಕೆಲವು ಮುಖ್ಯ EV-ನಿರ್ದಿಷ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿನ ಮಾದರಿಯ ಹಾಗೆಯೇ ಇರುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೂ ಈ ಆಕ್ಟಿವಾ ಎಲೆಕ್ಟ್ರಿಕ್ ಸ್ಥಿರ ಬ್ಯಾಟರಿ ಸೆಟಪ್ ಅನ್ನು ಹೊಂದಿದ್ದು, 165 ಕಿಮೀ ರೇಂಜ್ ಹೊಂದಿರುವ ಹೀರೋ ವಿಡಾ ವಿ1 ಪ್ರೊಗೆ ಹೋಲಿಸಿದರೆ ಆಕ್ಟಿವಾ ಎಲೆಕ್ಟ್ರಿಕ್ನ ಶ್ರೇಣಿಯು ಸಾಕಷ್ಟು ಸಾಧಾರಣವಾಗಿ ಇರಬಹುದು ಎನ್ನಲಾಗಿದೆ. ಸದ್ಯ ಇದರ ಬೆಲೆ ಪೆಟ್ರೋಲ್ ಆಕ್ಟಿವಾಕ್ಕಿಂತ ಸ್ವಲ್ಪ ಹೆಚ್ಚಿರುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.