ಈ ವಿಶ್ವವಿದ್ಯಾಲಯದ ಉಪನ್ಯಾಸಕ್ಕೆ ಪ್ರೊಫೆಸರ್ ಕರೆ ತಂದದ್ದು ನಗ್ನತಾರೆಯನ್ನು : ಯಥಾ ಗುರು, ತಥಾ ಶಿಷ್ಯ. ಜತೆಗೆ ಕರ್ದಾಶಿಯಾ !

ವಿಶ್ವವಿದ್ಯಾಲಯಗಳು ಜ್ಞಾನದ ಆಗರ. ಸಂಶೋಧನೆ, ಅಧ್ಯಯನ, ಅದ್ಯಾಪನಗಳಿಗೆ ಹೆಚ್ಚು ಒತ್ತು ನೀಡುವ ವಿದ್ಯಾಮಂದಿರಗಳವು. ಇಲ್ಲಿ ಸಮಾಜದಲ್ಲಿರುವ ಸಾಮಾಜಿಕ ವ್ಯಾಧಿಗಳನ್ನು ದೂರ ಮಾಡುವ ಕೆಲಸದೊಂದಿಗೆ, ಮುಂದಿನ ತಲೆಮಾರನ್ನು ಪ್ರಭಾವಿಸುವಂತಹ ಸಂಶೋಧನೆಗಳು ನಡೆಯುತ್ತವೆ. ಅಲ್ಲದೆ ಇವೆಲ್ಲಕ್ಕೂ ಪೂರಕವಾಗೆಂಬಂತೆ ಅನೇಕ ಸ್ಕಾಲರ್ ಗಳನ್ನು ಕರೆಸಿ ಹಲವಾರು ಉಪನ್ಯಾಸಗಳನ್ನು, ವಿವಿಧ ರೀತಿಯ ಕಾರ್ಯಗಾರಗಳನ್ನೂ ನಡೆಸಲಾಗುತ್ತದೆ. ಸಮಾಜದ ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳ ವ್ಯಕ್ತಿತ್ವ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿ, ಅವರ ಮಾತುಗಳು ವಿದ್ಯಾರ್ಥಿಗಳನ್ನು ಪ್ರಭಾವಿಸಿ, ಸ್ಪೂರ್ತಿದಾಯಕವಾಗಲಿ ಎಂಬುದು ಇದರ ಉದ್ದೇಶ. ಆದರೆ ಇಲ್ಲೊಂದು ವಿಶ್ವವಿದ್ಯಾಲಯವು, ಎಂತಹ ವ್ಯಕ್ತಿತ್ವವಿರುವ ವ್ಯಕ್ತಿಯನ್ನು ಆಹ್ವಾನಿಸಿ, ತಮ್ಮ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿಸಿದೆ ಗೊತ್ತಾ? ವಿಶ್ವವಿದ್ಯಾಲಯಗಳೂ ಈ ಮಟ್ಟಕ್ಕೆ ಇಳಿಯುತ್ತವೆ ಎಂದರೆ ಅದು ನಾಚಿಕೆ ಗೇಡಿನ ಸಂಗತಿಯೇ ಸರಿ!

ಪ್ರತಿಷ್ಟಿತ ಹಾರ್ವರ್ಡ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ಸ್ಕೂಲ್‌ ಒಂದರಲ್ಲಿ ಉಪನ್ಯಾಸ ಕಾರ್ಯಕ್ರಮವೊಂದು ನಡೆದಿದೆ. ಕಾರ್ಯಕ್ರಮದ ಬಳಿಕ ಇದು ಸಾಕಷ್ಟು ಟ್ರೋಲ್ ಆಗಿದೆ. ಯಾಕೆ ಗೊತ್ತಾ? ಉಪನ್ಯಾಸ ನೀಡಿದವರು, ಪೋರ್ನ್ ಸ್ಟಾರ್ ಆಗಿ ಮಿಂಚುತ್ತಿರುವ ಕರ್ದಾಶಿಯಾ!! ಹೌದು, ಫಾಕ್ಸ್ ನ್ಯೂಸ್ ಪ್ರಕಾರ, ಕಿಮ್ ಕರ್ದಾಶಿಯಾ ಅವರು, SKIMS ಸಹ-ಸಂಸ್ಥಾಪಕ ಜೆನ್ಸ್ ಗ್ರೆಡ್ ಅವರೊಂದಿಗೆ ಜೂನ್ 2019 ರಲ್ಲಿ ಮಾರುಕಟ್ಟೆಗೆ ಹೋದ ನಂತರ ಕಂಪನಿಯು ಕಂಡ ಅಗಾಧ ಯಶಸ್ಸಿನ ಬಗ್ಗೆ ಚರ್ಚಿಸಲು ಈ ಪ್ರತಿಷ್ಠಿತ ಕಾಲೇಜಿಗೆ ಹೋಗಿದ್ದರು.

ಕಾರ್ಯಕ್ರಮ ಮುಗಿದ ನಂತರ, ಕಿಮ್ ಹಾಗೂ ಹಾರ್ವರ್ಡ್ ಸಂಸ್ಥೆಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಒಳಪಟ್ಟು ಸಾಕಷ್ಟು ಸುದ್ದಿಯಾಗಿದೆ. ಇದರ ಬಗ್ಗೆ ಟೀಕೆ ಮಾಡಿದ ಸೋಷಿಯಲ್ಸ್, ನೀಲಿ ಚಿತ್ರ ತಾರೆಯನ್ನು ಏಕೆ ಪ್ರಶಂಸಿಸುತ್ತಾರೆ ಎಂದು ಪ್ರಶ್ನಿಸಿ, ಇದು ಹುಚ್ಚುತನದ ಪರಮಾವದಿ ಎಂದು ವ್ಯಂಗ್ಯವಾಡಿದ್ದಾರೆ. ಒಬ್ಬರು ‘ಹಾರ್ವರ್ಡ್ ಈ ಕುರಿತು ತಮ್ಮ ಬಗ್ಗೆ ನಾಚಿಕೆಪಡಬೇಕು’ ಎಂದು ಕುಟುಕಿದ್ದಾರೆ. ಜೊತೆಗೆ ಇಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಿಗೂ ಇದರಿಂದ ಸಾಕಷ್ಟು ಮುಜುಗರವಾಗಿದೆ. ಒಬ್ಬರು ‘ಹಾರ್ವರ್ಡ್‌ನ ಪ್ರತಿಷ್ಠೆಯು ನನ್ನ ಮನಸ್ಸಿನಲ್ಲಿ ತೆಳುವಾದ ಗಾಳಿಯಲ್ಲಿ ಆವಿಯಾಗಿದೆ. ಇದು ಕೇಸ್ ಸ್ಟಡಿಗೆ ಯೋಗ್ಯವಾಗಿಲ್ಲದ ಕಾರ್ಯಕ್ರಮ, ಆದರೂ ನಿಮಗಿದರ ವ್ಯತ್ಯಾಸ ತಿಳಿದಿಲ್ಲ, ಎಂದಿದ್ದಾರೆ. ಮತ್ತೊಬ್ಬರು ಜನರು ತಿಳುವಳಿಕೆ ಇಲ್ಲದವರು ಎಂದು ಭಾವಿಸುತ್ತಾರಾ? ಇಂತವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ಗೆ ಹೋಗುವುದು ತೀರಾ ಇರಿಸುಮುರುಸು ಉಂಟುಮಾಡುವ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದರ ಕುರಿತು ಅಭಿಪ್ರಾಯ ಹಂಚಿಕೊಂಡ ಕರ್ದಾಶಿಯಾ ‘ನಾನು ನಿನ್ನೆ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಚ್‌ಬಿಎಸ್ ಮೂವಿಂಗ್ ಬಿಯಾಂಡ್ ಡಿಟಿಸಿ ಎಂಬ ತರಗತಿಗಾಗಿ ಮಾತನಾಡಿದೆ. @ಸ್ಕಿಮ್‌ಗಳ ಬಗ್ಗೆ ಮಾಹಿತಿ ನೀಡುವುದು ಇದರ ಉದ್ದೇಶವಾಗಿತ್ತು, ಹಾಗಾಗಿ ನನ್ನ ಪಾಲುದಾರ ಜೆನ್ಸ್ ಮತ್ತು ನಾನು ನಮ್ಮ ಮಾರ್ಕೆಟಿಂಗ್, ನಮ್ಮ ಸವಾಲುಗಳು ಹಾಗೂ ನಮ್ಮ ಶ್ರೇಷ್ಠ ಗೆಲುವುಗಳ ಬಗ್ಗೆ ಮಾತನಾಡಿದೆವು. ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಪ್ರೊಫೆಸರ್ ಲೆನ್ ಶ್ಲೆಸಿಂಗರ್ ಮತ್ತು @harvardhbs ಅವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಇದರ ನಡುವೆ ಕರ್ದಾಶಿಯಾ ಸ್ನೇಹಿತರು ಮತ್ತು ಅಭಿಮಾನಿಗಳು ಆಕೆಯನ್ನು ಅಭಿನಂದಿಸಿದ್ದಾರೆ, ಪ್ಯಾರಿಸ್ ಹಿಲ್ಟನ್ ಫೈರ್ ಎಮೋಜಿಯೊಂದಿಗೆ “ದಟ್ಸ್ ಹಾಟ್” ಎಂದು ಬರೆದಿದ್ದಾರೆ. ಅಲಿಸಿಯಾ ಕೀ ಅವರು ಕಿಮ್‌ನ ಇನ್‌ಸ್ಟಾಗ್ರಾಮ್‌ನಲ್ಲಿ 12 ಫೈರ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಫಾಕ್ಸ್ ನ್ಯೂಸ್ ಪ್ರಕಾರ, ಲಿಜ್ ಎಂದು ಗುರುತಿಸಲಾದ ವಿದ್ಯಾರ್ಥಿಯು ಕರ್ದಾಶಿಯಾ, ತನ್ನ ತರಗತಿಗೆ ಬರುವುದು ಉತ್ತಮ ಅವಕಾಶ ಎಂದು ಹೇಳಿದ್ದಾರಂತೆ. ಯಥಾ ಗುರು, ತಥಾ ಶಿಷ್ಯ, ಜತೆಗೆ ನಗ್ನ ಕರ್ದಾಶಿಯಾ !!!

Leave A Reply

Your email address will not be published.