ಹಾಸ್ಟೆಲ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದಳು 14ರ ಬಾಲಕಿ ! ಆಟ ಆಡೋ ವಯಸ್ಸಲ್ಲೇ ತಾಯಿ ಆದಳು!

ಒಂಬತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಯೊಬ್ಬಳು ಹಾಸ್ಟೆಲ್ ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು ಈ ಸುದ್ದಿ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಬೇಸಿಗೆ ರಜೆಯಲ್ಲಿ ಬಾಲಕಿ ಮನೆಗೆ ಹೋದಾಗ ನಡೆದ ಪ್ರಮಾದವೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಸರ್ಕಾರಿ ಗುರುಕುಲ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಪೋಷಕರಿಂದ ದೂರವಾಗಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಕ್ಷೇತ್ರದ ವರದಯ್ಯಪಾಲೆಂನ 14 ವರ್ಷದ ಬಾಲಕಿ ವಾಲ್ಮೀಕಿಪುರಂನಲ್ಲಿರುವ ಜಿಎಂಸಿ ಬಾಲಯೋಗಿ ಗುರುಕುಲ ಶಾಲೆಯಲ್ಲಿ ಆರನೇ ತರಗತಿಯಿಂದ ಓದುತ್ತಿದ್ದಳು. ಹಾಸ್ಟೆಲ್‌ನಲ್ಲಿ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದರಿಂದ ವಾಲ್ಮೀಕಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ವೈದ್ಯರು ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಳ, ಅಲ್ಲದೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ದಾರೆ. ಇದೀಗ ಐಸಿಡಿಸಿ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು ವಿದ್ಯಾರ್ಥಿಯನ್ನು ತಿರುಪತಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಈ ಬಗ್ಗೆ ವಸತಿ ನಿಲಯ ಸಿಬ್ಬಂದಿ, ಅಧಿಕಾರಿಗಳು, ಪೋಷಕರಿಗೆ ಮಾಹಿತಿ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಈ ಸಂಬಂಧ ಜಿಲ್ಲಾಧಿಕಾರಿ ಅವರು ಹಾಸ್ಟೆಲ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಹಲವು ತಿಂಗಳಿಂದ ಬಾಲಕಿ ಮುಟ್ಟು ಆಗದೇ ಇರುವುದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಜೊತೆಗೆ ನ್ಯಾಪ್ಕಿನ್ ಪಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಹೆಸರಿರಲಿಲ್ಲ. ಇದರಿಂದ ಹಾಸ್ಟೆಲ್ ಸಿಬ್ಬಂದಿ ಪೋಷಕರಿಗೆ ಹಲವು ಬಾರಿ ಈ ವಿಷಯ ತಿಳಿಸಿ ವೈದ್ಯರ ಬಳಿ ತೋರಿಸಿ ಎಂದಿದ್ದಾರೆ. ಆದರೆ ಹೀಗಿದ್ದರೂ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗದೇ ಇರುವುದರಿಂದ ಈ ಹಂತಕ್ಕೆ ತಲುಪಲು ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.

ಪೋಷಕರು ಆಸ್ಪತ್ರೆಗೆ ಕರೆದೊಯ್ಯದೆ ಇದ್ದಾಗ ಹಾಸ್ಟೆಲ್ ಅಲ್ಲೀಯೇ ಬಾಲಕಿಗೆ ಪಿರಿಯಡ್ಸ್ ಆಗದ್ದಕ್ಕೆ ಚಿಕಿತ್ಸೆ ಕೂಡ ನೀಡಿದ್ದರು. ಆದರೆ ಬೇರೆ ಯಾವುದೇ ಪರೀಕ್ಷೆಗಳನ್ನು ಮಾಡದ ಕಾರಣ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ತಿಳಿದಿಲ್ಲ. ಆಕೆ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. ಇಷ್ಟೇ ಅಲ್ಲದೇ ಗರ್ಭಿಣಿಯಾದಾಗ ಆಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಸುದ್ದಿ ತಿಳಿದ ಬಳಿಕ ಪೊಲೀಸರಿಗೆ ದೂರು ನೀಡಿ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಬಾಲಕಿಯನ್ನು ಚಿಕಿತ್ಸೆಗಾಗಿ ತಿರುಪತಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣ ಯಾರು ಎಂದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಾಲಕಿಯ ಪೋಷಕರು ಜೀವನೋಪಾಯಕ್ಕಾಗಿ ತಿರುಪತಿಗೆ ಬಂದು ಶ್ರೀ ನಗರದಲ್ಲಿ ನೆಲೆಸಿದ್ದಾರೆ. ಆಕೆಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ವರದಯ್ಯಪಾಲೆಂನಲ್ಲಿ ನೆಲೆಸಿದ್ದಾರೆ. ಅಪ್ರಾಪ್ತ ಬಾಲಕಿ ಸೋಮದಲ್ಲಿ ತನ್ನ ಅಜ್ಜಿಯರ ಜೊತೆ ಇದ್ದು ಗುರುಕುಲ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಯನ್ನು ಆರನೇ ತರಗತಿಯಲ್ಲಿ ಹಾಸ್ಟೆಲ್‌ಗೆ ಸೇರಿಸಲಾಗಿತ್ತು. ಇದೀಗ 9ನೇ ತರಗತಿ ಓದುತ್ತಿದ್ದಳು. ಈ ನಡುವೆ ಆಕೆ ರಜೆಯಲ್ಲಿ ಮನೆಗೆ ಹೋಗಿ ಅಲ್ಲೇನಾದರೂ ಪ್ರಮಾದ ಆಗಿರಬಹುದೆಂದು ಡಿಸಿಒ ತಿಳಿಸಿದ್ದಾರೆ.

Leave A Reply

Your email address will not be published.