Traffic Rules: ವಾಹನ ಸವಾರರೇ ಎಚ್ಚರ ಎಚ್ಚರ! ಇನ್ಮುಂದೆ ಇಲ್ಲೇನಾದರೂ ಬೈಕ್ ರೈಡ್ ಮಾಡಿದ್ರೆ ಫೈನ್​ ಜೊತೆಗೆ ಬೀಳುತ್ತೆ ಕೇಸ್

ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತವ್ಯಸ್ತತೆಯಿಂದ ವಾಹನ ಸವಾರರಿಗೆ ಈ ಹೊಸ ನಿಯಮ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಟ್ರಾಫಿಕ್ ಕಿರಿ ಕಿರಿ ಇದ್ದದ್ದೇ. ಈ ಕಾರಣವಾಗಿ ಬೆಂಗಳೂರು ನಗರದ ಫುಟ್​​ಪಾತ್ ಮೇಲೆ ವಾಹನ ಚಲಾಯಿಸುವುದು ಸಹಜವಾಗಿದೆ. ಸದ್ಯ ಫುಟ್​​ಪಾತ್ ಮೇಲೆ ವಾಹನ ಚಲಾಯಿಸುವುದರಿಂದ ನೀವು ಕೋರ್ಟ್ ಕೇಸ್ ಎಂದು ಅಲೆದಾಡುವ ಪರಿಸ್ಥಿತಿ ಬರಬಹುದು.

ಹೌದು ಜನರು ಸಿಗ್ನಲ್​ ಸಮಸ್ಯೆಯಿಂದ ಪಾರಾಗಲು ಫುಟ್​ಪಾತ್​ ಮೇಲೂ ಬೈಕ್​ ಹತ್ತಿಸಿಕೊಂಡು ಹೋಗುತ್ತಾರೆ. ಆದರೆ ಇನ್ಮುಂದೆ ಆ ರೀತಿ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸಿದರೆ ಪೊಲೀಸರು ದಂಡದ ಜೊತೆ ಪ್ರಕರಣವನ್ನು ದಾಖಲು ಮಾಡಿ ಕೋರ್ಟ್​ಗೆ ತಲುಪಿಸುತ್ತಾರೆ. ಅಲ್ಲದೇ ಪ್ರಕರಣ ದಾಖಲಿಸಿ ನಿಮ್ಮವಾಹನವನ್ನು ಸ್ಥಳದಲ್ಲೇ ಸೀಜ್ ಮಾಡಲಾಗುತ್ತಿದೆ. ಬೆಂಗಳೂರಿನ ಫುಟ್ ಪಾತ್​ ಮೇಲೆ ವಾಹನ ಚಲಾಯಿಸುವುದು, ಪಾರ್ಕಿಂಗ್ ಮಾಡುವುದು ತಡೆಯಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಈ ಕುರಿತಾಗಿ ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ಪ್ರಕಾರ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸುವುದು ಬಹಳ ಅನಾಗರಿಕ ವರ್ತನೆ ಆಗಿದೆ. ಇದರಿಂದ ಪಾದಚಾರಿಗಳಿಗೆ ಬಹಳ ಸಮಸ್ಯೆ ಆಗುತ್ತದೆ. ಅಲ್ಲದೇ ಪ್ರಾಣಹಾನಿ ಆಗುವ ಸಂಭವ ಹೆಚ್ಚು. ಆದ್ದರಿಂದ ಕಠಿಣ ಕ್ರಮದ ಭಾಗವಾಗಿ ಎಫ್​ಐಆರ್​ ಮಾಡಿ ಕೋರ್ಟಿಗೆ ಕಳುಹಿಸುತ್ತಿದ್ದೇವೆ. ಅಲ್ಲದೇ ವಾಹನ ಸೀಜ್ ವಶಕ್ಕೆ ಪಡೆದಕೊಂಡು ಕೋರ್ಟ್​ ವಶಕ್ಕೆ ನೀಡುತ್ತಿದ್ದೇವೆ. ಕೋರ್ಟಿನಿಂದಲೇ ಮಾಲೀಕರು ವಾಹನ ಬಿಡುಗಡೆ ಮಾಡಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.

ಅದಲ್ಲದೆ ಫುಟ್​ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ‌ ಸೀಝ್ ಮಾಡಿ ಸೆಕ್ಷನ್ 283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ. ಮೋಟಾರ್ ಸೈಕಲ್ ಆಕ್ಟ್ ಆಡಿ ಫೈನ್ ಹಾಕದೇ ಗಾಡಿಯನ್ನು ಸೀಝ್ ಮಾಡಲಾಗುತ್ತದೆ. ಬೇರೆ ಕೇಸ್​ಗಳ ರೀತಿಯಲ್ಲೇ ಕೋರ್ಟ್​ಗೆ ಹೋಗಿ ಫೈನ್​ ಕಟ್ಟಬೇಕಾಗುತ್ತದೆ. ಕಳೆದ 2 ತಿಂಗಳಲ್ಲಿ 3,500 ಕೇಸ್ ದಾಖಲು ಆಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಎರಡು ತಿಂಗಳಿನಿಂದ ಈ ಮೇಲಿನ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಅನಾವಶ್ಯಕ ಚಾಲನೆ ಮತ್ತು ಫುಟ್​ಪಾತ್ ಪಾದಚಾರಿಗಳ ಸುರಕ್ಷಿತ ದೃಷ್ಟಿಯಿಂದ, ಪಾದಾಚಾರಿಗಳ ಸುರಕ್ಷತೆಗೆ ಈ ಮೇಲಿನ ನಿಯಮ ಜಾರಿಗೆ ತರಲಾಗಿದೆ ಎಂದು ಸಂಬಂಧ ಪಟ್ಟ ಅಧಿಕಾರಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.