Zomatoದಲ್ಲಿ ಫುಡ್ ಆರ್ಡರ್ ಮಾಡುವವರೇ ಇತ್ತ ಗಮನಿಸಿ! ಎಚ್ಚರ! ಈ ನ್ಯೂಸ್ ಕೇಳಿದ್ರೆ ಶಾಕ್ ಆಗ್ತೀರಾ
ನಮಗೆ ಹಸಿವಾದಾಗ ಝೊಮ್ಯಾಟೊದಲ್ಲಿ ಬೇಕು ಬೇಕಾದ ಆಹಾರ ಆರ್ಡರ್ ಮಾಡಿ ಆರಾಮವಾಗಿ ತಿನ್ನುವ ಖುಷಿಯೇ ಬೇರೆ. ಹೌದು ಯಾವುದೇ ಮೂಲೆಯಲ್ಲಿ ಇದ್ದರೂ ಝೊಮ್ಯಾಟೊ ನಮಗೆ ಆಹಾರವನ್ನು ಸಿದ್ದಪಡಿಸಿ ತಂದು ಕೊಡುತ್ತದೆ. ಆದರೆ ಝೊಮ್ಯಾಟೊದಲ್ಲಿನ ಮಾಹಿತಿ ಕೆಲವನ್ನು ನೀವು ತಿಳಿದು ಕೊಳ್ಳಲೇ ಬೇಕು.
ದುಡ್ಡಿನಿಂದ ದುನಿಯಾ ನಡೆಯುತ್ತಿದೆ. ಹಾಗಿರುವಾಗ ನೀವು ಟೆಕ್ ಕಂಪನಿ ಝೊಮ್ಯಾಟೊದಿಂದ ಫುಡ್ ಆರ್ಡರ್ ಮಾಡುತ್ತಿದ್ದರೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಇಲ್ಲವೇ ಮೋಸ ಹೋಗಬಹುದು. ಪ್ರಸಿದ್ಧ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಝೊಮ್ಯಾಟೊದಲ್ಲಿ ಹೊಸ ಹಗರಣವೊಂದು ಬೆಳಕಿಗೆ ಬಂದಿದ್ದು ಭಾರೀ ಸಂಚಲನ ಸೃಷ್ಟಿಸಿದೆ.
ಹೌದು ಪ್ರಸಿದ್ಧ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಆದ ಝೊಮ್ಯಾಟೊದಲ್ಲಿ ನಡೆಯುತ್ತಿರುವ ವಂಚನೆ ಕುರಿತಂತೆ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. ಲಿಂಕ್ಡ್‌ಇನ್‌ನಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿಯ ಬಗ್ಗೆ ಸ್ವತಃ ಝೊಮ್ಯಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ದೀಪಿಂದರ್ ಗೋಯಲ್ ಅವರೇ ಪ್ರತಿಕ್ರಿಯಿಸಿದ್ದಾರೆ.
ವಾಸ್ತವವಾಗಿ, ಕೆಲವು ಡೆಲಿವರಿ ಏಜೆಂಟ್‌ಗಳು ಗ್ರಾಹಕರಿಗೆ ಫುಡ್ ವೆಚ್ಚದ 50 ಪ್ರತಿಶತದಷ್ಟು ಕಡಿಮೆ ಹಣವನ್ನು ಹೇಗೆ ಪಾವತಿಸಬೇಕೆಂದು ಹೇಳುತ್ತಿದ್ದಾರೆ. ಈ ಕುರಿತಂತೆ ಉದ್ಯಮಿ ವಿನಯ್ ಸತಿ ಎನ್ನುವವರು ತಮ್ಮ ಮತ್ತು ಝೊಮ್ಯಾಟೊ ಡೆಲಿವರಿ ಮಾಡುವವರ ನಡುವಿನ ಸಂಭಾಷಣೆಯನ್ನು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಉದ್ಯಮಿ ವಿನಯ್ ಸತಿ ಅವರು ರೆಸ್ಟೋರೆಂಟ್‌ನಿಂದ ಕೆಲವು ಬರ್ಗರ್‌ಗಳನ್ನು ಆರ್ಡರ್ ಮಾಡಿದ್ದಾರೆ. ಈ ಸಮಯದಲ್ಲಿ ಅವರು ಆನ್‌ಲೈನ್‌ನಲ್ಲಿ ಹಣವನ್ನೂ ಪಾವತಿಸಿದ್ದಾರೆ. ಗ್ರಾಹಕರ ಆರ್ಡರ್ ಹೊತ್ತು ಮನೆ ಬಾಗಿಲಿಗೆ ತಲುಪಿದ ಝೊಮ್ಯಾಟೊ ಫುಡ್ ಡೆಲಿವರಿ ಮ್ಯಾನ್ ಆನ್‌ಲೈನ್‌ನಲ್ಲಿ ಹಣ ಪಾವತಿಸದಂತೆ ಬದಲಿಗೆ ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆರಿಸುವಂತೆ ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿನಯ್ ಸತಿ ಅವರು ಕಾರಣ ಏನೆಂದು ಕೇಳಿದಾಗ, ಆನ್‌ಲೈನ್‌ನಲ್ಲಿ 700 ಅಥವಾ 800 ರೂ.ಗೆ ಆರ್ಡರ್ ಮಾಡುವ ಫುಡ್ ದರ ಕೇವಲ 200 ರೂ.ಗಳು ಮಾತ್ರ ಎಂದು ಫುಡ್ ಡೆಲಿವರಿ ಮ್ಯಾನ್ ವಿವರಿಸಿದ್ದಾರೆ. ಇದನ್ನು ಕೇಳಿದ ವಿನಯ್ ಸತಿ ಅವರು ಅಚ್ಚರಿಗೊಂಡಿದ್ದಾರೆ.
ಆದರೆ ನನಗೆ ಎರಡು ಆಯ್ಕೆಗಳಿದ್ದವು ಮೊದಲನೆಯದಾಗಿ, ನಾನು ಈ ಕೊಡುಗೆಯನ್ನು ಆನಂದಿಸುತ್ತಿದ್ದೆ. ಇಲ್ಲವೇ ಈ ಹಗರಣವನ್ನು ಬಯಲಿಗೆಳೆಯುತವುದು.
ಮತ್ತು ಉದ್ಯಮಿಯಾಗಿರುವುದರಿಂದ, ನಾನು ಎರಡನೇ ಆಯ್ಕೆಯನ್ನು ಆರಿಸಿದೆ ಎಂದು ವಿನಯ್ ಸತಿ ಬರೆದಿದ್ದಾರೆ.
ಸದ್ಯ ಲಿಂಕ್ಡ್‌ಇನ್‌ನಲ್ಲಿ ಝೊಮ್ಯಾಟೊ ಫುಡ್ ಡೆಲಿವರಿ ಕುರಿತ ಈ ವಿಷಯವನ್ನು ಶೇರ್ ಮಾಡುವಾಗ ವಿನಯ್ ಸತಿ ಅವರು ಝೊಮ್ಯಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ದೀಪಿಂದರ್ ಗೋಯಲ್ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ. ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ 600 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ನೀಡಿದೆ ಮತ್ತು ಈ ವರದಿಯನ್ನು ಪ್ರಕಟಿಸಿದ ಸಮಯದಲ್ಲಿ 18 ಬಾರಿ ಮರುಪೋಸ್ಟ್ ಮಾಡಲಾಗಿದ್ದು ಝೊಮ್ಯಾಟೊ ವ್ಯವಸೆ ಗೊಂದಲ ಉಂಟು ಮಾಡಿದೆ.
ವಿನಯ್ ಸತಿ ಅವರು ಮಾಡಿದ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಝೊಮ್ಯಾಟೊ ಸಿಇಒ ದೀಪೇಂದರ್ ಗೋಯಲ್, ಈ ಹಗರಣದ ಬಗ್ಗೆ ಅರಿವಿದ್ದು, ಲೋಪದೋಷಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಿರುವುದಾಗಿ ತಮ್ಮ ಗ್ರಾಹಕರಿಗೆ ಭರವಸೆ ನೀಡಿದ್ದಾರೆ.
ಇನ್ನಾದರೂ ನೀವು ಫುಡ್ ಆರ್ಡರ್ ಮಾಡುವಾಗ ಜಾಗೃತಿ ವಹಿಸುವುದು ಉತ್ತಮ.