Home Karnataka State Politics Updates ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋಲ್ಲ, ಅದು ಕೇವಲ ದೊಂಬರಾಟ – ಬಿ. ಎಸ್. ಯಡಿಯೂರಪ್ಪ !

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸೋಲ್ಲ, ಅದು ಕೇವಲ ದೊಂಬರಾಟ – ಬಿ. ಎಸ್. ಯಡಿಯೂರಪ್ಪ !

Hindu neighbor gifts plot of land

Hindu neighbour gifts land to Muslim journalist

ಸಿದ್ದರಾಮಯ್ಯ ಅವರು ಕೋಲಾರದಿಂದ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ. ಅವರು ನಾಟಕ ಮಾಡುತ್ತಿದ್ದಾರೆ. ಮೈಸೂರಿಗೆ ಬರಲು ಯತ್ನ ನಡೆಸಿದ್ದಾರೆ ಎಂದು ಬಿಜೆಪಿಯ ರಾಜಾಹುಲಿ ಬಿ.ಎಸ್‌.ಯಡಿಯೂರಪ್ಪನವರು ಖಚಿತವಾಗಿ ಹೇಳಿದರು.

ನಿನ್ನೆ ಬೆಳಗಾವಿ ನಗರದಲ್ಲಿ ಮಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ನಾನೇನು ಭವಿಷ್ಯ ಹೇಳುತ್ತಿಲ್ಲ, ಖಚಿತವಾಗಿ ಹೇಳುತ್ತಿದ್ದೇನೆ. ಈಗ ಸಿದ್ದರಾಮಯ್ಯ ಮಾಡುತ್ತಿರುವುದೆಲ್ಲ ಬರೀ ಡೊಂಬರಾಟ. ಅವರೇನಾದರೂ ಕೋಲಾರದಲ್ಲಿ ಚುನಾವಣೆಗೆ ನಿಂತರೆ ಅವರು ಮನೆ ಹಾದಿ ಹಿಡಿಯುವುದು ನಿಶ್ಚಿತ. ಅವರು ಎಲ್ಲೇ ಸ್ಪರ್ಧಿಸಲಿ ; ಈ ಬಾರಿ ಅವರನ್ನು ಸೋಲಿಸಿ ಮನೆಗೆ ಕಳಿಸುವುದು ನಮ್ಮ ಗುರಿ ಎಂದಿದ್ದಾರೆ ಕರ್ನಾಟಕದ ಭೀಷ್ಮ.

ಬಿಜೆಪಿಯಲ್ಲಿ ಮಾಸ್‌ ಲೀಡರ್‌ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಯು ತೀರಾ ಹಾಸ್ಯಾಸ್ಪದವಾಗಿದೆ. ನಮಗೆ ವಿಶ್ವನಾಯಕ ನರೇಂದ್ರ ಮೋದಿ ಇದ್ದಾರೆ. ಅವರಿಗೆ ಯಾರಿದ್ದಾರೆ? ಇದೇ ಸಿದ್ದರಾಮಯ್ಯ ರಾಹುಲ್‌ ಗಾಂಧಿ ಅವರ ಹಿಂದೆಹಿಂದೆ ಓಡುತ್ತಿಲ್ಲವೇ? ಬಲಿಷ್ಠ ನಾಯಕ ಇಲ್ಲದ ಕಾರಣವೇ ಕಾಂಗ್ರೆಸ್‌ ಎಲ್ಲ ಕಡೆ ಸೋಲು ಕಾಣುತ್ತಿದೆ ಎಂದವರು ಈ ಸಂದರ್ಭದಲ್ಲಿ ಹೇಳಿದರು.

‘ರಾಜ್ಯದ ಕಾಂಗ್ರೆಸ್ಸಿಗರು ತಬ್ಬಲಿಗಳಂತೆ ಅಲೆಯುತ್ತಿದ್ದಾರೆ. ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಸ್ವಲ್ಪ ಉಸಿರಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆ ಮುಗಿದ ಬಳಿಕ ಅವರಿಬ್ಬರ ಉಸಿರೂ ನಿಲ್ಲುತ್ತದೆ. ನಾವು 140 ಸೀಟ್‌ ಗೆಲ್ಲುವುದು ನಿಶ್ಚಿತ’ ಎಂದೂ ಅವರು ಹೇಳಿದರು.

ರಾಜ್ಯ ಬಿಜೆಪಿ ನಾಯಕರು ನಿಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮೂರು ದಿನಗಳಲ್ಲಿ ನಾನು ಮತ್ತೆ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಬಿಜೆಪಿ ಅಧಿಕಾರಕ್ಕೆ ತರುವವರೆಗೂ ವಿಶ್ರಮಿಸುವುದಿಲ್ಲ. ಪ್ರಧಾನಿ ಮೋದಿ ಅವರು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ನಿಭಾಯಿಸುತ್ತೇನೆ. ನನ್ನನ್ನು ಯಾರು ಕರೆಯುತ್ತಾರೋ, ಬಿಡುತ್ತಾರೋ ಎಂಬುದು ನನಗೆ ಬೇಕಿಲ್ಲ. ನನ್ನ ಕರ್ತವ್ಯ ನಾನು ಮಾಡುತ್ತೇನೆ’ ಎಂದು ಉತ್ತರಿಸಿದರು.

ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರ ಇಬ್ಬರು ಪುತ್ರರ ಮದುವೆಗೆ, ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಪ್ರತ್ಯೇಕವಾಗಿ ಬಂದಿದ್ದಾಗಿ ಮಾತಿಗೆ ಸಿಕ್ಕಿದ್ದರು.