ಕಾರಿನ ಮೇಲೆ ಬಿದ್ದ ನಮ್ಮ ಮೆಟ್ರೋ ಬ್ಯಾರಿಕೇಡ್ | ಸ್ವಲ್ಪದರಲ್ಲೇ ಪಾರಾದ ಜನ!

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಇಂದು ಮತ್ತೆ ಬೆಂಗಳೂರಿನಲ್ಲಿ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿರುವ ಘಟನೆ ವರದಿಯಾಗಿದೆ.

ಮೆಟ್ರೋ ಕಾಮಗಾರಿ ಭದ್ರತೆಯ ನಿಟ್ಟಿನಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ ಎನ್ನಲಾಗಿದ್ದು, ಆದರೆ ಇದು ಇದ್ದಕ್ಕಿಂದ್ದಂತೆ ಹುಂಡೈ i10 ಕಾರಿನ ಮೇಲೆ ಬಿದ್ದ ಘಟನೆ ನಡೆದಿದೆ. ಹೀಗಾಗಿ, i10 ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಬೆಂಗಳೂರಿನ ದೊಡ್ಡನೆಕ್ಕುಂದಿ-ಮಹದೇವಪುರ ಮಾರ್ಗದಲ್ಲಿ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿರುವ ಘಟನೆ ನಿನ್ನೆ ಮಧ್ಯಾಹ್ನ 3.30ರ ವೇಳೆ ನಡೆದ ಘಟನೆ ನಡೆದಿದೆ ಎನ್ನಲಾಗಿದೆ.

ಕಾರು ಚಾಲಕ ಸಂತೋಷ್ ಕುಟುಂಬಸ್ಥರ ಜೊತೆಗೆ ಪ್ರಯಾಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಕಾರ್ತಿಕ್ ನಗರದಿಂದ ಕೆ.ಆರ್.ಪುರಂ ಕಡೆ ಹೋಗುವ ವೇಳೆ ದುರಂತ ನಡೆದಿದ್ದು ಆದರೆ, ಯಾವುದೇ ಅಪಾಯವಿಲ್ಲದೆ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಪ್ರಕರಣದ ಕುರಿತಾಗಿ ಕಾರು ಮಾಲೀಕರು ದೂರು ನೀಡಿದ್ದು ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.