Tulsi plant: ಲಕ್ಷ್ಮೀ ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯ ಲಕ್ಷ್ಮೀ-ವಿಷ್ಣು ವಾಸಸ್ಥಾನ !
ಹಿಂದೂ ಧರ್ಮದಲ್ಲಿ ತುಳಸಿ ಆಧ್ಯಾತ್ಮಿಕ ದೃಷ್ಟಿಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ತುಳಸಿ ಗಿಡ ಹಿಂದೂಗಳ ಮನೆಯಲ್ಲಿ ಸದಾ ಪೂಜನೀಯವಾದದ್ದು. ಹಾಗಾಗಿಯೇ ಪ್ರತಿಯೊಬ್ಬ ಹಿಂದೂ ಮನೆಗಳ ಮುಂದೆ ತುಳಸಿ ಕಟ್ಟೆ ಕಾಣಬಹುದು. ಧಾರ್ಮಿಕ ಕೆಲಸಗಳಿಂದ ಹಿಡಿದು ಆಯುರ್ವೇದ ಮತ್ತು ದೇಶೀಯ ಉಪಾಯಗಳಿಗಾಗಿ ತುಳಸಿಯನ್ನು ಬಳಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತುಳಸಿ ಗಿಡ ಸ್ವತಃ ಶ್ರೀಮಹಾಲಕ್ಷ್ಮಿಯ ಸ್ವರೂಪ. ಹಾಗಾಗಿಯೇ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರೀತಿಪಾತ್ರವಾಗಿದೆ. ಲಕ್ಷ್ಮೀದೇವಿ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು, ತುಳಸಿಯನ್ನು ನಿಯಮಿತವಾಗಿ ಪೂಜಿಸಲು ಮತ್ತು ಸಂಜೆ ಶುದ್ಧ ದೇಸಿ ತುಪ್ಪದ ದೀಪವನ್ನು ಬೆಳಗಿಸಲು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಗೆ ಸಂಬಂಧಿಸಿದ ಪೂಜಾ ಕಾರ್ಯಗಳನ್ನು ಮಾಡಿದರೆ, ಮಾತೆ ಸಂತೋಷಪಡುತ್ತಾಳೆ. ಜೊತೆಗೆ ಆ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಇರುತ್ತದೆ ಎನ್ನಲಾಗುತ್ತದೆ. ಇನ್ನು ಲಕ್ಷ್ಮಿಯ ಶಾಶ್ವತ ವಾಸಸ್ಥಾನವನ್ನು ಪಡೆಯಲು ಜ್ಯೋತಿಷ್ಯದಲ್ಲಿ ಕೆಲವು ದೋಷರಹಿತ ತಂತ್ರಗಳನ್ನು ಸಹ ಉಲ್ಲೇಖಿಸಿದ್ದಾರೆ. ಈ ತಂತ್ರಗಳನ್ನು ಕ್ರಮಬದ್ಧವಾಗಿ ಮಾಡುವುದರಿಂದ, ಆ ಮನೆಯು ಲಕ್ಷ್ಮೀ-ನಾರಾಯಣರ ಆಶೀರ್ವಾದವನ್ನು ಪಡೆಯುತ್ತಾನೆ. ಹಾಗಾದರೆ ಈ ಪರಿಹಾರದ ಬಗ್ಗೆ ತಿಳಿಯೋಣ.
ತುಳಸಿ ಗಿಡ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ಇರುತ್ತದೆ. ತುಳಸಿಯ ನೆರಳಿನಲ್ಲಿ ಬೇರೆ ಯಾವುದೇ ಗಿಡಗಳು ಬೆಳೆದಿದ್ದರೆ ತಕ್ಷಣ ಅದನ್ನು ತೆಗೆದು ಮನೆಯಲ್ಲಿ ಸುರಕ್ಷಿತವಾಗಿಟ್ಟರೆ ಲಕ್ಷ್ಮಿ ದೇವಿಯ ಕೃಪೆ ಹಾಗೇ ಉಳಿಯುತ್ತದೆ. ನಿಧಾನವಾಗಿ ವ್ಯಕ್ತಿಯು ಸಾಲದಿಂದ ಮುಕ್ತನಾಗಲು ಪ್ರಾರಂಭಿಸುತ್ತಾನೆ. ಇದರೊಂದಿಗೆ ಆರ್ಥಿಕ ಸ್ಥಿತಿಯೂ ಬಲಗೊಳ್ಳುತ್ತದೆ. ಆದರೆ ಈ ಸಸ್ಯವನ್ನು ಸುರಕ್ಷಿತವಾಗಿಡುವ ಮೊದಲು, ಅದರ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿ.
ತುಳಸಿ ಕುಂಡದಲ್ಲಿ ಬೇರೆ ತುಳಸಿ ಗಿಡ ಅಥವಾ ಇನ್ನಾವುದೇ ಗಿಡಗಳು ಬೆಳೆದಿದ್ದರೆ ಗುರುವಾರದಂದು ಬೇರು ಸಮೇತ ಹೊರತೆಗೆಯಬೇಕು. ನಂತರ ಈ ಗಿಡವನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ ಮನೆಯ ಪೂಜಾ ಸ್ಥಳದಲ್ಲಿ ಇಡಬೇಕು. ಅದನ್ನು ಸೂರ್ಯನ ಬೆಳಕಿನಲ್ಲಿ ತೋರಿಸಿ ಮತ್ತು ಹಳದಿ ಬಣ್ಣದ ಬಟ್ಟೆಯಲ್ಲಿ ಸುತ್ತಿರಿ. ಬಳಿಕ ಹಣವನ್ನು ಇಡುವ ಸ್ಥಳದಲ್ಲಿ ಅಥವಾ ಕಮಾನಿನಲ್ಲಿ ಗೌರವಯುತವಾಗಿ ಇರಿಸಿ. ಈ ಕಾರ್ಯವನ್ನು ಮಾಡುವಾಗ ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳು ಮಾತ್ರ ಇರಬೇಕು. ಆಗ ಮಾತ್ರ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಬೀಳುತ್ತದೆ. ಈ ಪರಿಹಾರಗಳನ್ನು ಮಾಡುವುದರಿಂದ, ತಕ್ಷಣದ ಪ್ರಯೋಜನ ಕಾಣುವುದಲ್ಲದೇ, ವ್ಯಕ್ತಿಯ ದಿನಗಳು ಬದಲಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.