Home latest ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮಾತಿಗೆ ರಿಷಬ್‌ ಶೆಟ್ಟಿಯಿಂದ ಮತ್ತೊಮ್ಮೆ ತಿರುಗೇಟು | ಭಾವುಕರಾಗಿ ರಶ್ಮಿಕಾ...

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮಾತಿಗೆ ರಿಷಬ್‌ ಶೆಟ್ಟಿಯಿಂದ ಮತ್ತೊಮ್ಮೆ ತಿರುಗೇಟು | ಭಾವುಕರಾಗಿ ರಶ್ಮಿಕಾ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಡೆದು ಕೊಳ್ಳುವ ರೀತಿ ನೋಡಿದರೆ ಕೆಲವೊಂದು ಘಟನೆಗಳಿಂದ ಚೆನ್ನಾಗಿ ಬುದ್ಧಿ ಕಲಿತಿದ್ದಾರೆ ಎಂದನಿಸುತ್ತಿದೆ. ಇದಕ್ಕೆ ನಿದರ್ಶನವೇ ರಶ್ಮಿಕಾ ಅವರ ಇತ್ತೀಚಿನ ವೀಡಿಯೋ. ಅದು ಬದಲಾವಣೆಯ ವೀಡಿಯೋ. ಕನ್ನಡ ಚಿತ್ರರಂಗದಿಂದ ತನ್ನ ಸಿನಿ ಕೆರಿಯರ್‌ ಪ್ರಾರಂಭ ಮಾಡಿದ್ದರೂ ಕೂಡಾ ನಂತರ ತಮಿಳು, ತೆಲುಗು, ಬಾಲಿವುಡ್‌ ನಲ್ಲಿ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ, ಅಲ್ಲೂ ಉತ್ತುಂಗದ ಶಿಖರ ಏರಿದಾಗ, ತಾನು ಏರಿ ಬಂದ ಏಣಿ ಕನ್ನಡವನ್ನು ಒಂದು ರೀತಿಯಲ್ಲಿ ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದರು. ಕನ್ನಡದಲ್ಲಿ ಮಾತನಾಡಿ ಎಂದರೆ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ದೊಡ್ಡ ದೊಡ್ಡ ವೇದಿಕೆಯಲ್ಲೆಲ್ಲಾ ಬೇರೆ ಭಾಷೆಯನ್ನೇ ಮಾತನಾಡುತ್ತಿದ್ದರೇ ವಿನಃ, ಕನ್ನಡ ಮಾತನಾಡುತ್ತಿರಲಿಲ್ಲ. ಹಲವಾರು ಸಂದರ್ಭದಲ್ಲಿ ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ಮಾತನ್ನು ಕೂಡಾ ಹೇಳಿದ್ದರು. ಅಂದ ಹಾಗೆ ತೆಲುಗು, ತಮಿಳು, ಹಿಂದಿ ಇದ್ಯಾವುದೂ ನಟಿ ರಶ್ಮಿಕಾ ಅವರ ಮಾತೃಭಾಷೆ ಅಲ್ಲ. ಹುಟ್ಟಿದ್ದು ಬೆಳೆದಿದ್ದು ಯಶಸ್ಸು ಕಂಡಿದ್ದೆಲ್ಲಾ ಕರ್ನಾಟಕದಲ್ಲೇ. ಆದರೆ ಮಾತೃಭಾಷೆ ಕಲಿಯಲು ಹಿಂದೇಟು ಹಾಕುತ್ತಿದ್ದ ರಶ್ಮಿಕಾ ಮಂದಣ್ಣ ಬೇರೆ ಭಾಷೆಗಳನ್ನೆಲ್ಲಾ ಬೇಗನೆ ಕಲಿತ್ಕೊಂಡು ಬಿಟ್ರು. ಆದರೆ ಕನ್ನಡ ಮಾತ್ರ ಕಲಿಯಲು ಅವರಿಗೆ ಇಷ್ಟ ಇರಲಿಲ್ಲವೇನೋ.

ಒಂದು ಕಡೆ ರಶ್ಮಿಕಾ ಮಂದಣ್ಣ ಕನ್ನಡ ಕಲಿಯಲು ಅಸಡ್ಡೆ ತೋರಿದರೆ, ಇನ್ನೊಂದು ಕಡೆ ಕನ್ನಡಿಗರು ಇದಕ್ಕೆಲ್ಲಾ ತಿರುಗೇಟು ನೀಡ್ತಾ ಇದ್ರು. ಆದರೆ ಇದರಿಂದ ರಶ್ಮಿಕಾ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗ ಒಂದು ವಾಹಿನಿಗೆ ತನಗೆ ಬ್ರೇಕ್‌ ನೀಡಿದ ಸಂಸ್ಥೆಯ ಹೆಸರನ್ನು ಸನ್ನೆಯ ಮೂಲಕ ಹೇಳಿದರೋ ಆವಾಗ ಮಾತ್ರ ಕನ್ನಡಿಗರು ಸುಮ್ಮನೆ ಕೂರಲಿಲ್ಲ. ರಶ್ಮಿಕಾ ಬ್ಯಾನ್‌ ಮಾಡಬೇಕು ಎನ್ನುವ ಕೂಗು ಕೂಡಾ ಕೇಳಿ ಬಂತು. ಅಷ್ಟು ಮಾತ್ರವಲ್ಲ ಬೇರೆ ಬೇರೆ ಭಾಷೆಯ ನಿರ್ದೇಶಕರು, ನಿರ್ಮಾಪಕರು ಅವಕಾಶ ನೀಡೋಕೆ ಹಿಂದೇಟು ಹಾಕಲು ಶುರು ಮಾಡಿದ್ರು.

ಅಂತಿಮವಾಗಿ ರಶ್ಮಿಕಾ ಅವರು ಇದರಿಂದ ಬುದ್ಧಿ ಕಲಿಯೋಕೆ ಪ್ರಾರಂಭ ಮಾಡಿದ್ರು. ಇತ್ತೀಚಿನ ಕೆಲವೊಂದು ಸಂದರ್ಶನದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಮಾತಿನಲ್ಲಿ ಕನ್ನಡ ಕನ್ನಡ ಎಂದೇ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ತನಗೆ ಬ್ರೇಕ್‌ ಕೊಟ್ಟ ಸಂಸ್ಥೆ, ರಿಷಬ್‌, ರಕ್ಷಿತ್‌ ಹೆಸರು ನಟಿಯ ಬಾಯಿಂದ ಕೊನೆಗೂ ಬಂತು. ಈ ವಿಚಾರ ಬರೋಕೆ ಕಾರಣ ಏನು ಎಂಬುದು ಇತ್ತೀಚೆಗೆ ರಿವೀಲ್‌ ಆಯಿತು. ಒಂದು ಕಡೆ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ʼಕಾಂತಾರʼ ಸಿನಿಮಾ ಇಂಟರ್‌ನ್ಯಾಷನಲ್‌ ಲೆವಲ್‌ನಲ್ಲಿ ಹೆಸರು ಮಾಡಿದ್ದರಿಂದ ರಶ್ಮಿಕಾ ರಿಷಬ್‌ ಹೆಸರು ತೆಗೆದುಕೊಂಡಿದ್ದಾರೆ. ಇನ್ನೊಂದು ರಶ್ಮಿಕಾ ಮಂದಣ್ಣ ನಟನೆಯ ವಾರಿಸು ಸಿನಿಮಾ ಅಷ್ಟೇನೂ ಗಳಿಕೆ ಮಾಡದ ಕಾರಣ ಇನ್ನು ಮುಂದೆ ಅಹಂಕಾರ ಬಿಡುವುದು ಒಳ್ಳೆಯದು ಅನಿಸಿತೇನೋ ಎಂಬ ಒಂದು ಗುಮಾನಿ.

ಆದರೆ ರಶ್ಮಿಕಾ ಮಾತಿಗೆ ಗುಣಗಾನಕ್ಕೆ ರಿಷಬ್‌ ಶೆಟ್ಟಿ ಮನಸ್ಸು ಕರಗಲಿಲ್ಲ. ಯಾವಾಗ ರಶ್ಮಿಕಾ ಮಂದಣ್ಣ ನಿರ್ಮಾಣ ಸಂಸ್ಥೆಯ ಹೆಸರನ್ನು ಸನ್ನೆ ಮೂಲಕ ಹೇಳಿದರೋ ಆವಾಗಲೇ ಇದಕ್ಕೆ ಪ್ರತ್ಯುತ್ತರವಾಗಿ ರಿಷಬ್‌ ಶೆಟ್ಟಿ ಕೂಡಾ ಸನ್ನೆ ಮೂಲಕ ಉತ್ತರ ಕೊಟ್ಟಿದ್ದು ಭಾರೀ ವೈರಲ್‌ ಆಗಿತ್ತು. ಮತ್ತೊಂದು ರೀತಿಯಲ್ಲಿ ಇತ್ತೀಚೆಗೆ ರಿಷಬ್‌ ಶೆಟ್ಟಿ ಅವರಿಗೆ ಒಂದು ಪ್ರಶ್ನೆ ಮುಂದೆ ಬರುತ್ತೆ. ಅದುವೇ ನೀವು ಸಾಕಷ್ಟು ಜನರಿಗೆ ಅವಕಾಶ ಕೊಟ್ಟಿದ್ದೀರಿ, ಅವರು ಒಳ್ಳೆ ಹೆಸರು ಪಡೆದಿದ್ದಾರೆ ಎಂಬ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುತ್ತಾ, ನಾವು ಅನೇಕ ಜನರಿಗೆ ಅವಕಾಶ ಕೊಟ್ಟಿದ್ದೇವೆ, ಅವರು ಬೇರೆ ಬೇರೆ ಕಡೆ ಹೋಗಿ ಬೆಳೆದಿದ್ದಾರೆ. ಹಾಗೆನೇ ನಮಗೂ ಬೇರೆಯವರು ಅವಕಾಶ ಕೊಟ್ಟಿದ್ದಾರೆ ನಾವು ಇಲ್ಲಿತನಕ ಬಂದಿದ್ದೇವೆ. ಯಾರು ಯಾರನ್ನೂ ನೆನಪಿಟ್ಟು ಕೊಳ್ಳಬೇಕು ಎನ್ನುವ ಅವಶ್ಯಕತೆ ಇಲ್ಲ. ಇದಕ್ಕೆಲ್ಲ ನಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬ ಮಾತನ್ನು ರಿಷಬ್‌ ಶೆಟ್ಟಿ ಅವರು ಹೇಳುತ್ತಾರೆ.

ಈ ಮೂಲಕ ರಿಷಬ್‌ ಶೆಟ್ಟಿ ರಶ್ಮಿಕಾ ಮಂದಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ ಎಂದನಿಸುತ್ತದೆ. ಹಾಗಾಗಿ ರಶ್ಮಿಕಾ ಅವರ ಮಾತು ಕನ್ನಡಿಗರಿಗೆ ಇನ್ನೂ ಇಷ್ಟ ಆಗಿಲ್ಲ. ಅಥವಾ ಅವರು ಕನ್ನಡದ ಬಗ್ಗೆ ಮಾತನಾಡಿದ್ದೆಲ್ಲ ಕನ್ನಡಿಗರು ಇನ್ನೂ ಮರೆತಿಲ್ಲ. ಹಾಗಾಗಿ ನಟಿಯನ್ನು ಕ್ಷಮಿಸುವ ರೀತಿ ಇಲ್ಲ ಅನ್ಸುತ್ತೆ.

ಇನ್ನೊಂದು ಕಡೆ ಕನ್ನಡ ಫಿಲ್ಮ್‌ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ತನ್ನ ಲಕ್‌ ಪರೀಕ್ಷೆ ಮಾಡಲು ರಶ್ಮಿಕಾ ಮನಸ್ಸು ಮಾಡುತ್ತಿದ್ದಾರೆ ಎಂಬ ಮಾತೊಂದು ಕೇಳಿ ಬರುತ್ತಿದೆ. ಇದೆಲ್ಲ ನಿಜವೋ ಗೊತ್ತಿಲ್ಲ. ಆದರೆ ಒಂದು ವೇಳೆ ಇದು ನಿಜವಾದರೆ ರಶ್ಮಿಕಾ ಮಂದಣ್ಣ ಅವರ ಸಿನಿಮಾವನ್ನು ಕನ್ನಡಿಗರು ಒಪ್ಕೋತ್ತಾರೋ ಗೊತ್ತಿಲ್ಲ. ಇನ್ನೂ ಮುಂದಕ್ಕೆ ಒಂದು ಸಂದರ್ಶನದಲ್ಲಿ ಈಗ ನನಗೆ ಮಾಡೋ ಟ್ರೋಲ್‌ನಿಂದಾಗಿ ನನ್ನ ಫ್ಯಾಮಿಲಿಗೆ ಹಿಂಸೆ ಆಗುತ್ತಿದೆ. ನನ್ನ ತಂಗಿ ನನಗೆ ಪ್ರಶ್ನೆ ಮಾಡುತ್ತಿದ್ದಾಳೆ. ಯಾಕೆ ಈ ರೀತಿ ಆಗುತ್ತಿದೆ ಎಂದು. ಹಾಗಾಗಿ ವಿನಮ್ರವಾಗಿ ನಟಿ ಇತ್ತೀಚಿನ ಸಂದರ್ಶನದಲ್ಲಿ ನನಗೆ ಆಗುವ ಟ್ರೋಲ್‌ ಈಗ ನನ್ನ ಫ್ಯಾಮಿಲಿಗೆ ಕೂಡಾ ತಟ್ಟಿದೆ, ಹೀಗೆ ಮಾಡಬೇಡಿ ಎಂದು ಭಾವುಕರಾಗಿ ಕೇಳಿಕೊಂಡಿದ್ದಾರೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂದು ಇದನ್ನೇ ಹೇಳೋದಾ?