Home Technology RX100 ಕಡಿಮೆ ಬೆಲೆಯ 150ಸಿಸಿ ಬೈಕ್ ಬಿಡುಗಡೆ ಮಾಡಿದ ಯಮಾಹಾ

RX100 ಕಡಿಮೆ ಬೆಲೆಯ 150ಸಿಸಿ ಬೈಕ್ ಬಿಡುಗಡೆ ಮಾಡಿದ ಯಮಾಹಾ

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಯಮಹಾದ RX100 ಬೈಕ್ ಎಲ್ಲರ ಮನಸ್ಸನ್ನು ಗೆದ್ದಿದೆ. ಸದ್ಯ ಇದೀಗ ದ್ವಿಚಕ್ರ ವಾಹನ ತಯಾರಕ ಕಂಪನಿ ಯಮಾಹಾ ಸದ್ದಿಲ್ಲದೇ ತನ್ನ ಅತ್ಯಂತ ಅಗ್ಗದ ಹಾಗೂ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಹುತೇಕ RX100ನ ನವೀಕೃತ ರೂಪಾಂತರದಂತೆ ಕಾಣಿಸುತ್ತದೆ. ಈ ಬೈಕ್ ಗೆ ಯಮಹಾ ಜಿಟಿ150 ಫೇಜರ್ ಎಂದು ಹೆಸರಿಸಲಾಗಿದೆ ಮತ್ತು ಇದು ಕ್ಲಾಸಿಕ್ ಸ್ಟ್ರೋಲ್ ನೋಟವನ್ನು ಹೊಂದಿದೆ.

ಹೌದು ಇದೀಗ ಯಮಹಾ ಹೊಸ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ, ಇದು ಹೆಚ್ಚಿನ ಪ್ರಮಾಣದಲ್ಲಿ RX100 ನ ನವೀಕರಿಸಿದ ಆವೃತ್ತಿಯಂತೆ ಕಂಗೊಳಿಸುತ್ತಿದೆ. ಈ ಬೈಕ್ ಅನ್ನು 150 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ.

ಯಮಹಾ ಜಿಟಿ150 ಫೇಜರ್ ವಿಶೇಷತೆ :

  • ಬೈಕ್‌ಗೆ ಕ್ಲಾಸಿಕ್ ಲುಕ್ ನೀಡಲು, ಹೆಡ್‌ಲ್ಯಾಂಪ್‌ಗಳು, ರಿಯರ್ ವ್ಯೂ ಮಿರರ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು ದುಂಡಾಕಾರದಲ್ಲಿಯೇ ಇರಿಸಲಾಗಿದೆ.
  • ಎಲ್‌ಇಡಿ ದೀಪಗಳು, 12ವಿ ಡಿಸಿ ಚಾರ್ಜಿಂಗ್ ಸಾಕೆಟ್, ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಲೆದರ್ ಸೀಟ್‌ಗಳು, ಟ್ರ್ಯಾಕರ್ ಶೈಲಿಯ ಸೈಡ್ ಪ್ಯಾನೆಲ್‌ಗಳಂತಹ ಇತರ ವೈಶಿಷ್ಟ್ಯಗಳನ್ನು ಇದು ಒಳಗೊಂಡಿವೆ. ಇದಕ್ಕೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ, ಇದು ಸಾಕಷ್ಟು ಮಾಹಿತಿಯನ್ನು ಬಿತ್ತರಿಸುತ್ತದೆ.
  • ಬೈಕಿನ ಸೀಟ್ ಎತ್ತರ 800 ಎಂಎಂ. ಇಬ್ಬರು ಸುಲಭವಾಗಿ ಕುಳಿತುಕೊಳ್ಳಬಹುದಾದ ಉದ್ದನೆಯ ಸೀಟನ್ನು ಈ ಬೈಕ್ ಹೊಂದಿದೆ. ಬೈಕು ಮುಖ್ಯವಾಗಿ ನಗರ ಪ್ರಯಾಣಕ್ಕಾಗಿ ಉದ್ದೇಶಿಸಲಾಗಿದೆ, ಇದರ ಮೂಲಕ ಹಗುರವಾದ ಆಫ್-ರೋಡಿಂಗ್ ಅನ್ನು ಸಹ ಮಾಡಬಹುದು.
  • ಯಮಹಾ ಜಿಟಿ150 ಫೇಜರ್ ಬೈಕ್ 149ಸಿಸಿ ಎಂಜಿನ್ ಹೊಂದಿದೆ. ಇದು 7,500 rpm ನಲ್ಲಿ ಗರಿಷ್ಠ 12.3 hp ಮತ್ತು 12.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
  • ಬೈಕಿನ ಎರಡೂ ತುದಿಗಳಲ್ಲಿ 18-ಇಂಚಿನ ಗಾಲಿಗಳನ್ನು ನೀಡಲಾಗಿದ್ದು. ಎರಡೂ ಗಾಲಿಗಳಿಗೆ ಡಿಸ್ಕ್ ಬ್ರೇಕಿಂಗ್ ವ್ಯವಸ್ಥೆ ನೀಡಲಾಗಿದೆ. ಇದು 126 ಕೆಜಿ ತೂಕ ಮತ್ತು 12.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಪ್ರಸ್ತುತ ಚೀನಾ ಮಾರುಕಟ್ಟೆಯಲ್ಲಿ ಬೈಕ್ ಅನ್ನು ಬಿಡುಗಡೆ ಮಾಡಲಾಗಿದ್ದು ಚೀನಾದಲ್ಲಿ ಇದರ ಬೆಲೆ 13,390 ಯುವಾನ್ ನಿಗದಿಪದಿಸಲಾಗಿದೆ. ಅಂದರೆ ಭಾರತದ ಪ್ರಕಾರ 1.60 ಲಕ್ಷ ರೂಪಾಯಿಗಳು ಎಂದರ್ಥ. ಇದು ಬಿಳಿ, ಗಾಢ ಬೂದು, ತಿಳಿ ಬೂದು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಬೈಕ್‌ಗೆ ಸ್ಪೋರ್ಟಿ ಲುಕ್ ನೀಡಲು, ಫೆಂಡರ್‌ಗಳು, ಅಲಾಯ್ ಚಕ್ರಗಳು, ಎಕ್ಸಾಸ್ಟ್ ಮತ್ತು ಸಸ್ಪೆನ್ಷನ್ ಅನ್ನು ಕಪ್ಪು ಬಣ್ಣದಲ್ಲಿ ನೀಡಲಾಗಿದೆ.