BSNL Broadband Plans: ಬಿಎಸ್​ಎನ್​​ಎಲ್ ಬಳಕೆದಾರರಿಗೆ ಸಿಹಿಸುದ್ದಿ | ಕೇವಲ ಒಂದೇ ರೀಚಾರ್ಜ್​ನಲ್ಲಿ 9 ಒಟಿಟಿ ಪ್ಲಾಟ್​ಫಾರ್ಮ್ ಲಭ್ಯ!!

BSNL ತನ್ನ ಬಳಕೆದಾರರಿಗಾಗಿ ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಬಂದಿದ್ದು, ಇದೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕಂಪೆನಿ ಓಟಿಟಿ (OTT Platforms) ಪ್ರಯೋಜನಗಳನ್ನು ಒಳಗೊಂಡ ಬಜೆಟ್​ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.

ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಬಿಎಸ್​ಎನ್​ಎಲ್​ ಕಂಪೆನಿ ತನ್ನ ಗ್ರಾಹಕರಿಗಾಗಿ ಬ್ರಾಡ್​ಬ್ಯಾಂಡ್ ಯೋಜನೆಯ ಅಡಿಯಲ್ಲಿ 9 ಓಟಿಟಿ ಪ್ಲಾಟ್​ಫಾರ್ಮ್​ಗಳ ಉಚಿತ ಚಂದಾದಾರಿಕೆ ಸೌಲಭ್ಯವನ್ನು ನೀಡುತ್ತಿದೆ. ಅದು ಕೂಡ ಅತಿಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನೂ, ಆ ಯೋಜನೆಗಳು ಯಾವುದು? ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

  • 249 ರೂಪಾಯಿ ರೀಚಾರ್ಜ್ ಪ್ಲ್ಯಾನ್​ :

ಬಿಎಸ್‌ಎನ್‌ಎಲ್‌ ತನ್ನ ಗ್ರಾಹಕರಿಗೆ 249 ರೂಪಾಯಿ ಯೋಜನೆಯಲ್ಲಿ ಜೀ5, ಸೋನಿಲೈವ್, ವೂಟ್‌ ಸೆಲೆಕ್ಟ್‌, ಯುಪ್‌ ಟಿವಿ, ಆಹಾ, ಲಯನ್ಸ್​ಗೇಟ್​ ಪ್ಲೇ, ಹಂಗಾಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಸೇರಿದಂತೆ ಒಟ್ಟು 9 ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತಿದೆ. ಈ ರೀಚಾರ್ಜ್ ಪ್ಲ್ಯಾನ್ ನಲ್ಲಿ ಎಂಟ್ರಿ ಲೆವೆಲ್‌ ಬೆಲೆಯ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಓಟಿಟಿ ಪ್ರಯೋಜನವನ್ನು ಬಯಸುವಂತಹ ಬಳಕೆದಾರರು ರೀಚಾರ್ಜ್ ಮಾಡಿಕೊಳ್ಳಬಹುದು.

  • 499 ರೂಪಾಯಿ ಬ್ರಾಡ್‌ಬ್ಯಾಂಡ್‌ :

ಈ ಯೋಜನೆಯಲ್ಲಿ 40 ಎಮ್​ಬಿಪಿಎಸ್ ಇಂಟರ್ನೆಟ್ ವೇಗವನ್ನು 3.3 ಟಿಬಿ ಡೇಟಾದಲ್ಲಿ ಹಾಗೂ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯ ಲಭ್ಯವಾಗಲಿದೆ. ಹಾಗೇ ಇದರಲ್ಲಿ ನೀಡಿದ ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 ಎಮ್​ಬಿಪಿಎಸ್ ಗೆ ಇಳಿಕೆಯಾಗುತ್ತದೆ. ಅಲ್ಲದೆ, ಈ ಯೋಜನೆಯಲ್ಲಿ ಬಳಕೆದಾರರು ಫೈಬರ್​ನ ಮೊದಲ ತಿಂಗಳ ಬಾಡಿಗೆಯಲ್ಲಿ 500 ರೂಪಾಯಿವರೆಗಿನ 90% ರಿಯಾಯಿತಿಯನ್ನು ಕೂಡ ಪಡೆಯಲಿದ್ದಾರೆ.

  • 499 ರೂಪಾಯಿ ಫೈಬರ್​ ರೀಚಾರ್ಜ್ ಪ್ಲ್ಯಾನ್​ :

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ತನ್ನ ಫೈಬರ್ ಬೇಸಿಕ್ ನಿಯೋ ಯೋಜನೆಯ ಅಡಿಯಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ ಅಂದ್ರೆ, 3,300 ಜಿಬಿ ವರೆಗೆ ಡೇಟಾ ನೀಡಲಿದೆ. ಅಲ್ಲದೆ, ಡೇಟಾ 30 ಎಮ್​ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅವಕಾಶ ಕಲ್ಪಿಸುತ್ತದೆ. 499 ರೂಪಾಯಿ ಫೈಬರ್​ ರೀಚಾರ್ಜ್ ಪ್ಲ್ಯಾನ್ ನ ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 ಎಮ್​ಬಿಪಿಎಸ್​​ಗೆ ಇಳಿಕೆ ಮಾಡಲಾಗುತ್ತದೆ.

  • 799 ರೂ. ಫೈಬರ್ ವ್ಯಾಲ್ಯೂ​ ರೀಚಾರ್ಜ್ ಪ್ಲ್ಯಾನ್​ :

BSNL ‘ಫೈಬರ್ ವ್ಯಾಲ್ಯೂ’ ರೀಚಾರ್ಜ್ ಪ್ಲ್ಯಾನ್ಯ್ ಶಲ್ಕ ತಿಂಗಳಿಗೆ 799 ರೂಪಾಯಿ ಆಗಿದ್ದು, ಯೋಜನೆಯಲ್ಲಿ 3.3 ಟಿಬಿ ಅಂದರೆ 3,300 ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಈ ರೀಚಾರ್ಜ್ ಪ್ಲ್ಯಾನ್ ನ ಮಾಸಿಕ ಡೇಟಾ ಮುಗಿಯುವ ತನಕ 100 ಎಮ್​ಬಿಪಿಎಸ್​​ ವೇಗದಲ್ಲಿ ಬ್ರೌಸ್ ಮಾಡಲು ಅವಕಾಶವಿದ್ದು, ಇದರ 3.3 ಟಿಬಿ ಡೇಟಾ ಮುಗಿದ ಬಳಿಕ ಇಂಟರ್ನೆಟ್ ವೇಗ 2 ಎಮ್​ಬಿಪಿಎಸ್​​ಗೆ ಇಳಿಯುತ್ತದೆ.

  • 799 ರೂ. ಫೈಬರ್ ಪ್ರೀಮಿಯಂ​ ರೀಚಾರ್ಜ್ ಪ್ಲ್ಯಾನ್​ :

‘ಫೈಬರ್ ಪ್ರೀಮಿಯಂ’ ರೀಚಾರ್ಜ್ ಪ್ಲ್ಯಾನ್ ನ ಬೆಲೆ 999 ರೂಪಾಯಿ ಆಗಿದ್ದು, ಈ ಯೋಜನೆ ತನ್ನ ಗ್ರಾಹಕರಿಗೆ ಒಟ್ಟು 2 ಟಿಬಿ ಅಂದ್ರೆ, 2000 ಜಿಬಿ ಡೇಟಾ ಸೇವೆಯನ್ನು ಒದಗಿಸಲಿದೆ. 799 ರೂಪಾಯಿ ಫೈಬರ್ ಪ್ರೀಮಿಯಂ​ ಯೋಜನೆಯಲ್ಲಿ ಡೇಟಾವು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ.

Leave A Reply

Your email address will not be published.