PUC Practical Exam: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ | ಪ್ರಾಯೋಗಿಕ ಪರೀಕ್ಷೆ ದಿನಾಂಕ ಪ್ರಕಟ

Share the Article

ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಬರುವ ತಿಂಗಳು ಅಂದರೆ ಫೆಬ್ರವರಿ 6ರಿಂದ ನಡೆಯಲಿದೆ. 2022-23ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ದಿನಾಂಕವನ್ನು ಪ್ರಕಟಮಾಡಲಾಗಿದೆ.
ಫೆಬ್ರವರಿ 6ರಿಂದ ಆರಂಭವಾದ ಈ ಪ್ರಾಯೋಗಿಕ ಪರೀಕ್ಷೆ 28-02-2023 ರ ವರೆಗೂ ಮುಂದುವರೆಯಲಿದೆ. ಯಾರಿಗೆಲ್ಲಾ ಪ್ರಾಯೋಗಿಕ ಪರೀಕ್ಷೆ ಇರುತ್ತದೆಯೋ ಅವರಿಗೊಂದು ಮಹತ್ವದ ಮಾಹಿತಿ ಎಂದೇ ಹೇಳಬಹುದು. ದಿನಾಂಕ 06-02-2023 ರಿಂದ 28-02-2023 ರವರೆಗೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ದಿನಾಂಕವನ್ನು ನಿಗದಿಪಡಿಸಿದೆ.

ಸೈನ್ಸ್​ ವಿದ್ಯಾರ್ಥಿಗಳಿಗೆ ಲ್ಯಾಬ್​ ಎಕ್ಸಾಂ ಹಾಗೂ ಪ್ರಾಕ್ಟಿಕಲ್​ ನೋಟ್ಸ್​ ಟೆಸ್ಟ್​ ಇರುತ್ತದೆ. ಇನ್ನು ಕಾಮರ್ಸ್​ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗುತ್ತದೆ. ಆರ್ಟ್ಸ್‌ ಅಭ್ಯಾಸ ಮಾಡುತ್ತಿರುವವರು ಮ್ಯೂಸಿಕ್​ ಆಯ್ಕೆ ಮಾಡಿಕೊಂಡಿದ್ದರೆ, ಅವರಿಗೂ ಸಹ ಪ್ರಾಕ್ಟಿಕಲ್​ ಪರೀಕ್ಷೆ ಇರುತ್ತದೆ. ತಬಲಾ, ಸಿತಾರ್​, ಸಂಗೀತ ಹೀಗೆ ಈ ಎಲ್ಲಾ ವಿಷಯಗಳ ಪ್ರಾಯೋಗಿಕ ಪರೀಕ್ಷೆ ಇರುತ್ತದೆ. ಹಾಗಾಗಿ ಈಗಿನಿಂದಲೇ ಪರೀಕ್ಷೆ ತಯಾರಿ ನಡೆಸುವುದು ಉತ್ತಮ. ಪ್ರಾಯೋಗಿಕ ಪರೀಕ್ಷೆಗಳ ಕೇಂದ್ರವಾರು ಮಾರ್ಕ್ಸ್ ಲಿಸ್ಟ್ ಹಾಗೂ ನಾಮಿನಲ್‌ ರೋಲ್‌ಗಳನ್ನು ಹಾಗೂ ಎನ್‌ ಎಸ್‌ ಕ್ಯೂ ಎಫ್ ವಿಷಯಗಳ ಪ್ರಾಯೋಗಿಕ ಪರೀಕ್ಷೆಗಳ ಮಾರ್ಕ್ಸ್‌ ಲಿಸ್ಟ್‌ ಗಳನ್ನು ಎಲ್ಲಾ ಪ್ರಯೋಗಿಕ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು / ಪ್ರಾಂಶುಪಾಲರು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿದೆ.

Leave A Reply

Your email address will not be published.