ಮಕ್ಕಳ ಸ್ಟಡಿಗೂ, ಬ್ಯಾಗ್‌ಗೂ ಇದೆ ನಂಟು | ವಾಸ್ತು ಪ್ರಕಾರ ಈ ರೀತಿ ಇದ್ದರೆ ಮಕ್ಕಳು ಚೆನ್ನಾಗಿ ಓದ್ತಾರೆ !

ಮಕ್ಕಳು ಯಾವಾಗಲು ಕಲಿಕೆಯಲ್ಲಿ ಮುಂದಿರಬೇಕು ಎಂದು ಹೆತ್ತವರು ಭಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ದೊಡ್ಡ ದೊಡ್ಡ ಖಾಸಗಿ ಶಾಲೆಗೆ ಸೇರಿಸುತ್ತಾರೆ.ಅದಲ್ಲದೆ ಟ್ಯೂಷನ್ ಕೊಡಿಸಿ ಮಕ್ಕಳಿಗೆ ಒತ್ತಡ ಹೇರುತ್ತಾರೆ. ಆದರೆ ಕೆಲವು ಮಕ್ಕಳು ರಾತ್ರಿ, ಹಗಲು ಓದಿದರೂ ಅಂಕ ಮಾತ್ರ ಹೆಚ್ಚು ಸಿಗೋದಿಲ್ಲ. ಇದರಿಂದ ಮಕ್ಕಳು ಮತ್ತು ನೀವು ಶಾಲೆಯಲ್ಲಿ ಅವಮಾನ ಎಂದು ಭಾವಿಸುವುದು ಸಹ ಇದೆ. ಆದರೆ ಎಷ್ಟೇ ಓದಿದ್ರೂ ತಲೆಯಲ್ಲಿ ನಿಲ್ಲುತ್ತಿಲ್ಲ ಎನ್ನುವ ಮಕ್ಕಳ ಹಿಂದೆ ಅನೇಕ ಕಾರಣವಿದೆ. ಅವುಗಳಲ್ಲಿ ಸ್ಕೂಲ್ ಬ್ಯಾಗ್ ಕೂಡ ಒಂದು.

ಹೌದು ವಾಸ್ತು ಶಾಸ್ತ್ರದ ಪ್ರಕಾರ, ಮಕ್ಕಳ ಶಾಲೆ ಬ್ಯಾಗ್ ಸರಿಯಾಗಿರಬೇಕು. ಸ್ಕೂಲ್ ಬ್ಯಾಗ್ ಅವರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಲ್ಲಿ ಮಕ್ಕಳು ವಿದ್ಯಾಭ್ಯಾಸ ದಲ್ಲಿ ಮುಂದೆ ಬರಬೇಕು ಅಂದರೆ ಅವರ ಬ್ಯಾಗ್ ಹೇಗಿರಬೇಕು, ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಳಿದ್ದೇವೆ.

  • ಶಾಲೆ ಬ್ಯಾಗ್ ನಲ್ಲಿ ಪುಸ್ತಕವನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಮಗುವಿಗೆ ಹೇಳಿ. ಒಂದು ಪುಸ್ತಕ ಮೇಲ್ಮುಖವಾಗಿ ಇನ್ನೊಂದು ಕಳೆಮುಖವಾಗಿ ಇಡಬಾರದು. ಪುಸ್ತಕವನ್ನು ತಲೆಕೆಳಗಾಗಿ ಇಡಬಾರದು. ದೊಡ್ಡ ಪುಸ್ತಕದ ಮುಂದೆ ಸಣ್ಣ ಪುಸ್ತಕ ಇರುವಂತೆ ನೋಡಿಕೊಳ್ಳಬೇಕು.
  • ಶಾಲೆಯಿಂದ ಮನೆಗೆ ಬರ್ತಿದ್ದಂತೆ ಸ್ಕೂಲ್ ಬ್ಯಾಗ್ ಮೂಲೆ ಸೇರಿರುತ್ತದೆ. ಅದನ್ನು ಮಕ್ಕಳು ವಕ್ರವಾಗಿ ಇಲ್ಲವೆ ಮಲಗಿಸಿ ಇಡ್ತಾರೆ. ಹೀಗೆ ಮಾಡುವುದು ತಪ್ಪು. ಶಾಸ್ತ್ರದ ಪ್ರಕಾರ, ಮಕ್ಕಳ ಶಾಲೆ ಬ್ಯಾಗ್ ಪ್ರತಿ ದಿನ ನೇರವಾಗಿರಬೇಕು. ಮನೆಯಲ್ಲಿರಲಿ, ಶಾಲೆಯಲ್ಲಿರಲಿ ಇಲ್ಲ ಸ್ಕೂಲ್ ವ್ಯಾನ್ ನಲ್ಲಿರಲಿ, ನೀವು ಎಲ್ಲಿ ಸ್ಕೂಲ್ ಬ್ಯಾಗ್ ಇಟ್ಟರೂ ಅದನ್ನು ನೇರವಾಗಿ ಇಡಲು ಸೂಚಿಸಿ .
  • ಸ್ವಚ್ಛಗೊಳಿಸೋದು ಸುಲಭ ಎನ್ನುವ ಕಾರಣಕ್ಕೆ ಕೆಲ ಪಾಲಕರು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ಖರೀದಿ ಮಾಡ್ತಾರೆ. ಆದ್ರೆ ವಾಸ್ತು ಪ್ರಕಾರ, ಕಪ್ಪು ಬಣ್ಣ ಒಳ್ಳೆಯದಲ್ಲ. ಮಕ್ಕಳ ಶಾಲೆ ಬ್ಯಾಗ್ ಕಪ್ಪು ಬಣ್ಣದ್ದಾಗಿದ್ದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಯಾಗುತ್ತದೆ. ಹಾಗಾಗಿ ಎಂದೂ ಈ ಬಣ್ಣದ ಬ್ಯಾಗ್ ಬಳಸಬೇಡಿ. ಈಗಾಗಲೇ ಕಪ್ಪು ಬಣ್ಣದ ಬ್ಯಾಗ್ ಬಳಕೆ ಮಾಡ್ತಿದ್ದಾರೆ ಎಂದಾದ್ರೆ ಅದ್ರ ಮೇಲೆ ಬೇರೆ ಬಣ್ಣದ ಸ್ಟಿಕ್ಕರ್ ಅಂಟಿಸಿ.
  • ಮಕ್ಕಳು ಶಾಲೆಯಿಂದ ಹಿಂತಿರುಗಿದಾಗ ಅವರ ಬ್ಯಾಗನ್ನು ಸರಿಯಾದ ದಿಕ್ಕಿನಲ್ಲಿ ಇಡಲು ಪ್ರಯತ್ನಿಸಿ. ಮಗುವಿನ ಸ್ಕೂಲ್ ಬ್ಯಾಗ್ ಇಡಲು ಪೂರ್ವ, ವಾಯುವ್ಯ, ಈಶಾನ್ಯ ದಿಕ್ಕುಗಳು ಒಳ್ಳೆಯದು. ಆದಷ್ಟು ಈಶಾನ್ಯ ದಿಕ್ಕಿನಲ್ಲಿ ಬ್ಯಾಗ್ ಇಡಲು ಸೂಚಿಸಿ.
  • ಮಕ್ಕಳ ಶಾಲೆ ಬ್ಯಾಗ್ ಕಸದ ತೊಟ್ಟಿಯಾಗಿರುತ್ತದೆ. ಮಕ್ಕಳು ಇಷ್ಟವಾದ ವಸ್ತುವನ್ನೆಲ್ಲ ಬ್ಯಾಗಿಗೆ ಹಾಕಿರುತ್ತಾರೆ . ಕೆಲ ವಸ್ತು ಮಕ್ಕಳ ಅಧ್ಯಯನದ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಬ್ಯಾಗ್ ನಲ್ಲಿ ಪೆನ್ಸಿಲ್ ಸಿಪ್ಪೆ, ಕಸ, ಹರಿದ ಕಾಗದ, ಮುರಿದ ಪೆನ್ ಇತ್ಯಾದಿ ಇರದಂತೆ ನೋಡಿಕೊಳ್ಳಿ. ಮಕ್ಕಳ ಬ್ಯಾಗ್ ನಲ್ಲಿ ಕಾಗದದಿಂದ ಸಿದ್ಧವಾದ ಕೆಲ ಆಟಿಕೆಗಳಿರುತ್ತವೆ. ಅವುಗಳು ಕೂಡ ಒಳ್ಳೆಯದಲ್ಲ.

ವಾಸ್ತು ಪ್ರಕಾರ ಈ ಮೇಲಿನ ಕ್ರಮಗಳನ್ನು ಅನುಸರಿಸಿದಲ್ಲಿ ನಿಮ್ಮ ಮಗುವಿನ ವಿದ್ಯಾಭ್ಯಾಸದಲ್ಲಿ ತುಂಬಾ ಬೆಳವಣಿಗೆ ನೀವು ಕಾಣಬಹುದಾಗಿದೆ.

Leave A Reply

Your email address will not be published.