73 ವರ್ಷಗಳಿಂದ ಉಚಿತ ಪ್ರಯಾಣ ನೀಡಿದ ರೈಲು | ಯಾವುದೇ ಶುಲ್ಕವಿಲ್ಲದೇ ಈ ರೈಲಿನಲ್ಲಿ ಪ್ರಯಾಣಿಸಿ, ಯಾವ ರೈಲು ಅಂತೀರಾ ? ಇಲ್ಲಿದೆ ಉತ್ತರ!
ಸದ್ಯ ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ . ಇದೀಗ ರೈಲು ಪ್ರಯಾಣ ದರದ ಬಗೆಗಿನ ಹೊಸ ಮಾಹಿತಿ ತಿಳಿಸಲಾಗಿದೆ.
ಸದ್ಯ ದೇಶದಲ್ಲಿ ಒಂದು ನಿರ್ದಿಷ್ಟ ರೈಲು 73 ವರ್ಷಗಳಿಂದ ಉಚಿತವಾಗಿ ಪ್ರಯಾಣಿಕರನ್ನು ಕೊಂಡು ಒಯ್ಯುತ್ತಿದೆ ಎಂದರೆ ನೀವು ನಂಬಲೇಬೇಕು. ಇದು ವಿಶ್ವದಲ್ಲಿಯೇ ಉಚಿತ ಸೇವೆಯನ್ನೊದಗಿಸುವ ರೈಲು ಎಂಬ ಮನ್ನಣೆಗೂ ಪಾತ್ರವಾಗಿದೆ.
ಹೌದು ಕಳೆದ 73 ವರ್ಷಗಳಿಂದ ಭಾಕ್ರಾ ನಂಗಲ್ ರೈಲಿಗೆ ಒಂದು ನಯಾಪೈಸೆ ನೀಡದೇ ಪ್ರಯಾಣಿಕರು ಪ್ರಯಾಣ ನಡೆಸುತ್ತಿದ್ದಾರೆ. ಭಾಕ್ರಾ ಬಿಯಾಸ್ ಮ್ಯಾನೇಜ್ಮೆಂಟ್ ರೈಲ್ವೇ ಬೋರ್ಡ್ ಈ ರೈಲಿನ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಭಾಕ್ರಾ ಬಿಯಾಸ್ ಮ್ಯಾನೇಜ್ಮೆಂಟ್ ಬೋರ್ಡ್ (BBMB) ಈ ಹಿಂದೆ 2011 ರಲ್ಲಿ ಉಚಿತ ಸೇವೆಯನ್ನು ಕೊನೆಗೊಳಿಸಲು ಪರಿಗಣಿಸಿತ್ತು. ಆದರೆ ರೈಲಿನ ಪ್ರಯಾಣದಿಂದ ಆದಾಯ ಮಾತ್ರವಲ್ಲದೆ ಇನ್ನಷ್ಟು ಅಂಶಗಳಿಗೆ ಮಹತ್ವದ್ದಾಗಿದೆ ಎಂಬುದನ್ನು ಮಂಡಳಿ ಅರಿತುಕೊಂಡಿತು ತದನಂತರ ಪ್ರಯಾಣವನ್ನು ಶುಲ್ಕರಹಿತವಾಗಿ ಇರಿಸುವ ನಿರ್ಣಯಕ್ಕೆ ಬಂದಿತು.
ಕರಾಚಿಯಲ್ಲಿ ಬೋಗಿಗಳನ್ನು ನಿರ್ಮಿಸಲಾಗಿದೆ. ಬ್ರಿಟೀಷರ ಕಾಲದ ಓಕ್ ಮರದಿಂದ ರೈಲಿನೊಳಗಿನ ಸೀಟ್ಗಳನ್ನು ನಿರ್ಮಿಸಲಾಗಿದೆ. ಪ್ರತಿ ಗಂಟೆಗೆ 18 ರಿಂದ 20 ಲೀಟರ್ಗಳ ಇಂಧನ ಅಗತ್ಯವಿದ್ದರೂ ರೈಲನ್ನು ಉಚಿತವಾಗಿ ಚಲಾಯಿಸಲು ಭಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ (ಬಿಬಿಎಂಬಿ) ನಿರ್ಧರಿಸಿದೆ.
ಈ ರೈಲು ಹಿಮಾಚಲ ಪ್ರದೇಶ/ಪಂಜಾಬ್ ಗಡಿಯಲ್ಲಿ ಭಾಕ್ರಾ ಮತ್ತು ನಂಗಲ್ ನಡುವೆ ಸಂಚರಿಸುತ್ತದೆ. ಶಿವಾಲಿಕ್ ಬೆಟ್ಟಗಳ ಮೂಲಕ 13 ಕಿಲೋಮೀಟರ್ ಸಾಗುವಾಗ ರೈಲು ಸಟ್ಲೆಜ್ ನದಿಯನ್ನು ದಾಟುತ್ತದೆ. ಪ್ರಯಾಣಿಕರಿಗೆ ಈ ಆನಂದದಾಯಕ ರೈಲು ಪ್ರಯಾಣಕ್ಕೆ ಯಾವುದೇ ಶುಲ್ಕವಿಲ್ಲ. ಈ ರೈಲಿನಲ್ಲಿ ಟಿಟಿ ಕೂಡ ಇಲ್ಲ ಎಂಬುದು ಇನ್ನೊಂದು ವಿಶೇಷವಾಗಿದೆ.
ಪ್ರಸ್ತುತ 25 ಹಳ್ಳಿಗಳ ಜೀವನಾಡಿಯಾಗಿ ಈ ರೈಲು ಕಾರ್ಯನಿರ್ವಹಿಸುತ್ತದೆ. 13 ಕಿಲೋಮೀಟರ್ ರೈಲು ಪ್ರಯಾಣದಲ್ಲಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮತ್ತು ವಿವಿಧ ಕೆಲಸದ ಕ್ಷೇತ್ರಗಳ ಕಾರ್ಮಿಕರು ಪ್ರಯೋಜನ ಪಡೆಯುತ್ತಿದ್ದಾರೆ.
ಭಾಕ್ರಾ ಮತ್ತು ನಂಗಲ್ ನಡುವಿನ ರೈಲು ಮಾರ್ಗವು 1948 ರಲ್ಲಿ ಪೂರ್ಣಗೊಂಡಿತು. ಭಾಕ್ರಾ-ನಂಗಲ್ ಅಣೆಕಟ್ಟನ್ನು ನಿರ್ಮಿಸುವ ಸ್ಥಳೀಯರು ಮತ್ತು ಕಾರ್ಮಿಕರ ಪ್ರಯಾಣಕ್ಕಾಗಿ ಈ ರೈಲು ಸೇವೆಯನ್ನು ಆರಂಭಿಸಲಾಯಿತು. ಇದು ವಿಶ್ವದ ಅತಿ ಹೆಚ್ಚು ನೇರ ಗುರುತ್ವಾಕರ್ಷಣೆಯ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಅಣೆಕಟ್ಟಿನ ನಿರ್ಮಾಣವನ್ನು 1963 ರಲ್ಲಿ ಪೂರ್ಣಗೊಳಿಸಲಾಯಿತು.
ರೈಲ್ ಅನ್ನು ಸ್ಟೀಮ್ ಎಂಜಿನ್ನೊಂದಿಗೆ ಚಲಾಯಿಸಲಾಗುತ್ತಿತ್ತು ಆದರೆ 1953 ರಲ್ಲಿ ಅಮೆರಿಕಾದಿಂದ ಮೂರು ಎಂಜಿನ್ಗಳನ್ನು ರೈಲಿಗೆ ಅಳವಡಿಸಲಾಯಿತು. ಅಂದಿನಿಂದ, ಭಾರತೀಯ ರೈಲ್ವೆಯು ಎಂಜಿನ್ನ 5 ರೂಪಾಂತರಗಳನ್ನು ಬಿಡುಗಡೆ ಮಾಡಿದೆ, ಆದರೆ ಈ ವಿಶಿಷ್ಟ ರೈಲಿನ 60 ವರ್ಷಗಳ ಹಳೆಯ ಎಂಜಿನ್ ಇನ್ನೂ ಬಳಕೆಯಲ್ಲಿದೆ ಮತ್ತು ಪ್ರಸಿದ್ಧಿ ಪಡೆದಿದೆ.