ಸವಣೂರು| ಕ್ವಾರಂಟೈನ್‌ನಲ್ಲಿದ್ದ ನಾಲ್ವರ ಗಂಟಲ ದ್ರವ ಸಂಗ್ರಹ

 

ಸವಣೂರು: ಸವಣೂರಿನಲ್ಲಿರುವ ಸರಕಾರಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿರುವ ನಾಲ್ವರ ಗಂಟಲದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಮಹಾರಾಷ್ಟ್ರದಿಂದ ಬಂದು ಮೇ.18ರಿಂದ ಕ್ವಾರಂಟೈನ್ ನಲ್ಲಿರುವ ನಾಲ್ವರ ಗಂಟಲದ್ರವವನ್ನು ಆರೋಗ್ಯ ಇಲಾಖೆಯವರು ಸಂಗ್ರಹಿಸಿದ್ದಾರೆ.

ಈ ನಾಲ್ವರಲ್ಲೂ ಈವರೆಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.ಎಲ್ಲರೂ ಆರೋಗ್ಯವಾಗಿದ್ದಾರೆ.

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯವರು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ.

ಮೇ 31ಕ್ಕೆ ಕ್ವಾರಂಟೈನ್ ಅವಧಿ ಮುಕ್ತಾಯಗೊಳ್ಳಲಿದೆ.

ಈ ಸಂದರ್ಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯ ಎಸೈ ಭಾಸ್ಕರ ಅಡ್ಕಾರು ಹಾಗೂ ಸಿಬಂದಿಗಳು, ಆರೋಗ್ಯ ಇಲಾಖೆಯ ವಾಗೀಶ್ವರಿ,ಶುಭಾ,ಪವಿತ್ರ ಹಾಗೂ ಆಶಾ ಕಾರ್ಯಕರ್ತೆಯರು,ಸವಣೂರು ಪಿಡಿಓ ನಾರಾಯಣ ಬಟ್ಟೋಡಿ,ಕೊರೊನಾ ಸೈನಿಕ ಪ್ರವೀಣ್ ಚೆನ್ನಾವರ ಹಾಜರಿದ್ದರು.

Leave A Reply

Your email address will not be published.