ಹಳೆಯ ಪಿಂಚಣಿಯ ಬಗ್ಗೆ RBI ನಿಂದ ಎಚ್ಚರಿಕೆ ಸಂದೇಶ

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಪಿಂಚಣಿದಾರರಿಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ. ಹಳೆ ಪಿಂಚಣಿ ಯೋಜನೆ ವಿರುದ್ಧ RBIನಿಂದ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

ಎನ್‌ಪಿಎಸ್ ಉದ್ಯೋಗಿಯ ಕೆಲಸದ ಅವಧಿಯಲ್ಲಿ ಪಿಂಚಣಿ ಆರ್ಥಿಕತೆಯ ಸಂಗ್ರಹಣೆಯನ್ನು ಸುಗಮಗೊಳಿಸುವ ಜೊತೆಗೆ ವೃದ್ಧಾಪ್ಯದಲ್ಲಿ ಅಥವಾ ನಿವೃತ್ತಿಯ ನಂತರ ಸಾಕಷ್ಟು ನಿವೃತ್ತಿ ಆದಾಯವನ್ನು ಹೊಂದುವ ಸುಸ್ಥಿರ ಪರಿಹಾರವನ್ನು ನೀಡಲು NPS ಅನ್ನು ವಿನ್ಯಾಸಗೊಳಿಸಲಾಗಿದೆ. ಇದೀಗ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಬದಲಿಗೆ OPS ಅನ್ನು ಮರಳಿ ತರಲು ಹೆಚ್ಚಿನ ರಾಜ್ಯಗಳು ಒಲವು ತೋರುತ್ತಿರುವ ಕಾರಣ ಆರ್‌ಬಿಐ ಎಚ್ಚರಿಕೆ ನೀಡಿದೆ. ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಪಂಜಾಬ್ ನಂತರ, ಹಿಮಾಚಲ ಪ್ರದೇಶವು OPS (ಹಳೆಯ ಪಿಂಚಣಿ ಯೋಜನೆ) ಅನ್ನು ಆಯ್ಕೆ ಮಾಡುವ ಉದ್ದೇಶವನ್ನು ಪ್ರಕಟಿಸಿದೆ.

ಎನ್‌ಪಿಎಸ್, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಪಿಎಫ್‌ಆರ್‌ಡಿಎ) ನಿಯಂತ್ರಿಸಲಾಗುತ್ತದೆ. ಇದು ಕೊಡುಗೆಯ ಪಿಂಚಣಿ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ನೌಕರರು ತಮ್ಮ ಸಂಬಳದ ಶೇಕಡಾ 10 ರಷ್ಟು ಕೊಡುಗೆ ನೀಡುತ್ತಾರೆ. ಜನವರಿ 1, 2004 ರಂದು ಅಥವಾ ನಂತರ ಸೇವೆಗೆ ಸೇರುವ ಕೇಂದ್ರ ಸರ್ಕಾರಿ ನೌಕರರಿಗೆ NPS ಕಡ್ಡಾಯವಾಗಿದ್ದು ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಇದನ್ನು ಅಳವಡಿಸಲಾಗಿದೆ.

ಹಳೆಯ ಪಿಂಚಣಿ ಯೋಜನೆಗಳನ್ನು ಮುಂದುವರಿಸುವ ಕೆಲವು ರಾಜ್ಯಗಳ ನಿರ್ಧಾರದ ಮೇಲೆ ಆರ್‌ಬಿಐ (RBI) ಅಸಮಾಧಾನ ಹೊರಹಾಕಿದ್ದು ಮುಂಬರುವ ವರ್ಷಗಳಲ್ಲಿ ರಾಜ್ಯಗಳ ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ. ರಾಷ್ಟ್ರೀಯ ಪಿಂಚಣಿ (Pension) ಯೋಜನೆ (NPS) ಬದಲಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆಮಾಡಿಕೊಳ್ಳುವುದರಿಂದ ಮುಂದೆ ಅಪಾಯಕಾರಿಯಾಗಿ ಪರಿಣಾಮ ಬೀರಬಹುದು ಎಂದು ಕೇಂದ್ರ ಬ್ಯಾಂಕ್ (Bank) ಸೂಚಿಸಿದೆ.

2022-23 ರ ಬಜೆಟ್ ಅಂದಾಜಿನ ಅನುಸಾರ, ಹಿಂದಿನ ವರ್ಷದ 399,813 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ರಾಜ್ಯಗಳು 2022-23 ರಲ್ಲಿ 463,436 ಕೋಟಿ ರೂಪಾಯಿಗಳಿಗೆ ಪಿಂಚಣಿ ವೆಚ್ಚದಲ್ಲಿ 16% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು RBI ಹೇಳಿದೆ. ಎಸ್‌ಬಿಐ ರಿಸರ್ಚ್ ವರದಿಯ ಪ್ರಕಾರ, ಎಫ್‌ವೈ 22ಕ್ಕೆ ಕೊನೆಗೊಂಡ 12 ವರ್ಷಗಳ ಪಿಂಚಣಿ ಬಾಧ್ಯತೆಯು ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಎಲ್ಲಾ ರಾಜ್ಯ ಸರ್ಕಾರಗಳಿಗೆ 34% ಆಗಿದೆ ಎಂದು ಮಾಹಿತಿ ನೀಡಿದೆ.

ಹಿರಿಯ ಅರ್ಥಶಾಸ್ತ್ರಜ್ಞ ಮತ್ತು ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಹಳೆಯ ಪಿಂಚಣಿ ಯೋಜನೆಗೆ ಹಿಂದಿರುಗುವುದರಿಂದ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬೀಳುವ ಎಚ್ಚರಿಕೆ ನೀಡಿದ್ದಾರೆ. ಆರ್‌ಬಿಐ ಪ್ರಕಾರ, ಹಳೆಯ ಪಿಂಚಣಿ ಯೋಜನೆಗಳಿಗೆ ರಾಜ್ಯಗಳು ಮರಳಿದರೆ ಹಣಕಾಸಿನ ತೊಡಕು ಉಂಟಾಗುವ ಸಾಧ್ಯತೆಗಳಿವೆಯೆಂದು ತಿಳಿಸಿದೆ. ಈ ಯೋಜನೆಯಿಂದ ಹಣಕಾಸಿನ ವಾರ್ಷಿಕ ಉಳಿತಾಯ ಅಲ್ಪಾವಧಿಯದ್ದಾಗಿರುತ್ತದೆ ಎಂದು ಆರ್‌ಬಿಐ ಹೇಳಿದ್ದು ಈ ಗಿನ ವೆಚ್ಚಗಳನ್ನು ಮುಂದೂಡುವ ಮೂಲಕ ಮುಂಬರುವ ವರ್ಷಗಳಲ್ಲಿ ರಾಜ್ಯಗಳು ನಿಧಿಯಿಲ್ಲದ ಪಿಂಚಣಿ ಹೊಣೆಗಾರಿಕೆಗಳ ಶೇಖರಣೆಗೆ ಅಪಾಯವನ್ನುಂಟುಮಾಡುತ್ತವೆ ಎಂಬುದಾಗಿ ಆರ್‌ಬಿಐ ತನ್ನ ರಾಜ್ಯ ಹಣಕಾಸು ವರದಿಯಲ್ಲಿ ಉಲ್ಲೇಖಿಸಿದೆ.

OPS ಅಡಿಯಲ್ಲಿ, ನಿವೃತ್ತ ನೌಕರರು ತಮ್ಮ ಕೊನೆಯ ಸಂಬಳದ 50% ವನ್ನು ಮಾಸಿಕ ಪಿಂಚಣಿಯಾಗಿ ಪಡೆದುಕೊಂಡಿದ್ದಾರೆ. OPS ಅನ್ನು ಆರ್ಥಿಕವಾಗಿ ಸಮರ್ಥನೀಯವಲ್ಲ ಎಂದು ಪರಿಗಣಿಸಲಾಗಿದೆ ಮತ್ತು ರಾಜ್ಯ ಸರ್ಕಾರಗಳಿಗೆ ಹಣ ನೀಡಲು ಸಮಸ್ಯೆಯಾಗಿದೆ. OPS ಪಿಂಚಣಿ ಬಾಧ್ಯತೆಗಳಿಗಾಗಿ ಯಾವುದೇ ಸಂಚಿತ ನಿಧಿಗಳು ಅಥವಾ ಉಳಿತಾಯದ ಸ್ಟಾಕ್ ಅನ್ನು ಹೊಂದಿರಲಿಲ್ಲ ಹೀಗಾಗಿ ಇದು ಸ್ಪಷ್ಟ ಹಣಕಾಸಿನ ಬಾಧ್ಯತೆ ಎಂದೆನಿಸಿದೆ. ಕೆಲವು ಅರ್ಥಶಾಸ್ತ್ರಜ್ಞರು ಹಳೆಯ ಪಿಂಚಣಿ ಯೋಜನೆಯನ್ನು ರಾಜ್ಯಗಳು ಆಯ್ದುಕೊಂಡಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯಗಳು ಇದಕ್ಕಾಗಿ ಯಾವುದೇ ಸಂಗ್ರಹಣೆಯನ್ನು ಮಾಡಿರುವುದಿಲ್ಲ ಜೊತೆಗೆ ಸಮಯದೊಂದಿಗೆ ಹಣವಿಲ್ಲದ ಹೊಣೆಗಾರಿಕೆಯು ಬೆಳೆಯುತ್ತಲೇ ಹೋಗುತ್ತದೆ. ಇದು ಭವಿಷ್ಯದಲ್ಲಿ ಅಪಾಯಕ್ಕೆ ಎಡೆ ಮಾಡಿಕೊಡುವ ಎಚ್ಚರಿಕೆಯನ್ನು ನೀಡಿದ್ದಾರೆ.

Leave A Reply

Your email address will not be published.