Home latest ಕೇವಲ 11 ವರ್ಷ ಆಡಳಿತ ಮಾಡಿದ ರಾಮ, ಮಧ್ಯಾಹ್ನ ಆದ್ರೆ ಸೀತೆಯೊಂದಿಗೆ ಹೆಂಡ ಕುಡಿಯುತ್ತಿದ್ದ| ಮತ್ತೆ...

ಕೇವಲ 11 ವರ್ಷ ಆಡಳಿತ ಮಾಡಿದ ರಾಮ, ಮಧ್ಯಾಹ್ನ ಆದ್ರೆ ಸೀತೆಯೊಂದಿಗೆ ಹೆಂಡ ಕುಡಿಯುತ್ತಿದ್ದ| ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್!!

Hindu neighbor gifts plot of land

Hindu neighbour gifts land to Muslim journalist

ಸದಾ ವಿವಾದಾತ್ಮಕ ಹೇಳಿಕೆಗಳಿಂದ, ವಿವಾದಾತ್ಮಕ ಬರವಣಿಗೆಗಳಿಂದ ಸುದ್ಧಿಯಾಗುತ್ತಿದ್ದ ಪ್ರೊ ಕೆ ಎಸ್ ಭಗವಾನ್ ಅವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ತಣ್ಣಗಾಗಿದ್ದರು. ಆದರೀಗ ಮತ್ತೆ ನಾಲಗೆ ಹರಿಬಿಟ್ಟಿರುವ ಭಗವಾನ್ ಅವರು ಆದರ್ಶ ಪುರುಷ ಶ್ರೀರಾಮನ ಕುರಿತು ಹೇಳಿಕೆಯನ್ನು ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಾಮ ರಾಜ್ಯ ಎಂದು ದೇಶದಲ್ಲಿ ಕಥೆ ಕಟ್ಟಿದ್ದಾರೆ. ರಾಮ ರಾಜ್ಯ ಮಾತು ಹರಡಲು ಮಹಾತ್ಮ ಗಾಂಧೀಜಿ ಅವರೇ ಕಾರಣ. ವಾಲ್ಮೀಕಿ ರಾಮಾಯಣ ಓದಿ ಉತ್ತರ ಕಾಂಡದಲ್ಲಿ ಓದಿದ್ರೆ ರಾಮ ರಾಜ್ಯಕ್ಕೆ ಅರ್ಥ ಇಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಜ್ಯ ರಾಜ್ಯಭಾರ ಮಾಡಿಲ್ಲ ಎಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಮಾತನಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮ ರಾಜ್ಯಭಾರ ಮಾಡಿದ್ದು 11 ವರ್ಷ ಮಾತ್ರ. ಆ ಸಮಯದಲ್ಲೂ ಆತ ಏನು ಮಾಡಲಿಲ್ಲ. ಪುರೋಹಿತರ ಜೊತೆ ಕೂತು ಆ ಕಥೆ ಈ ಕಥೆ ಎಂದು ರಾಮ ಹರಟೆ ಹೊಡೆಯುತ್ತಿದ್ದ. ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ. ಸೀತೆಗೂ ರಾಮ ಹೆಂಡ ಕುಡಿಸುತ್ತಿದ್ದ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇವೆ. ಇದರಲ್ಲಿ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ. ಸೀತೆಗೆ ಮಾತನಾಡಲು ರಾಮ ಬಿಡಲಿಲ್ಲ. ಎಂದಿದ್ದಾರೆ.

ಲಕ್ಷ್ಮಣನನ್ನು ರಾಮ ಗಡಿಪಾರು ಮಾಡಿದ, ಸರಯೂ ನದಿಯ ದಡಲ್ಲಿ ಅತ್ತುಕೊಂಡು ಲಕ್ಷ್ಮಣ ಸತ್ತು ಹೋದ. ಶೂದ್ರನ ತಲೆಯನ್ನು ರಾಮ ಕಡಿದಿದ್ದಾನೆ. ರಾಮನನ್ನು ಆದರ್ಶ ದೊರೆ ಎಂದು ಕರೆಯಲು ಹೇಗೆ ಸಾಧ್ಯ. ನಮ್ಮ ಜನರಿಗೆ ಸತ್ಯ ಗೊತ್ತಿಲ್ಲದೆ ಮಕ್ಕಳಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳು ರಾಮ ರಾಮ ಅಂತಾರೆ, ರಾಮ ತನ್ನ ಹೆಂಡತಿಯನ್ನೇ ಕಾಡಿಗೆ ಕಳಿಸಿದವ. ಇದರಿಂದ ಅವನು ಮಾದರಿ ಪುರುಷ ಹೀಗೆ ಸಾಧ್ಯವಾದರೆ ಎಂದು ಭಗವಾನ್ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇವರ ಈ ಮಾತುಗಳ ಕುರಿತು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.