Home latest ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಾರೆಂದು ಹೋಟೆಲ್ ಮಾಲಿಕನಿಗೆ ಥಳಿತ! ಕೋಣನಕುಂಟೆಯ ಹೋಟೆಲ್ ಒಂದರಲ್ಲಿ ನಡೆಯಿತು ರಾದ್ಧಾಂತ!

ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದಾರೆಂದು ಹೋಟೆಲ್ ಮಾಲಿಕನಿಗೆ ಥಳಿತ! ಕೋಣನಕುಂಟೆಯ ಹೋಟೆಲ್ ಒಂದರಲ್ಲಿ ನಡೆಯಿತು ರಾದ್ಧಾಂತ!

Hindu neighbor gifts plot of land

Hindu neighbour gifts land to Muslim journalist

ನಾವೆಲ್ಲರೂ ಹೋಟೆಲ್ ಹೋದಾಗ, ಅಲ್ಲೇನಾದರೂ ಕ್ಲೀನ್ ಇಲ್ಲದಿದ್ದರೆ, ಆರ್ಡರ್ ತಗೋಳೋದು ಲೇಟಾದರೆ ಅಥವಾ ಕೊಡುವುದು ತಡವಾದರೆ ಸ್ವಲ್ಪ ಸಿಡಿ ಮಿಡಿಗೊಳ್ಳುತ್ತೇವೆ. ಸಿಟ್ಟು ಬಂದು ಬೇಗ ಕೊಡಯ್ಯ, ಸ್ವಲ್ಪ ಕ್ಲೀನ್ ಮಾಡಿ ಎಂದು ಜೋರಾಗೇ ಹೇಳುತ್ತೇವೆ. ಇನ್ನು ಕೆಲವೊಬ್ರು ಸ್ವಲ್ಪ ಗದರೆಸಿಯೇ ಬಿಡುತ್ತಾರೆ. ಆದ್ರೆ ಯಾರೂ ಕೈ ಮಾಡುವ ಹಂತಕ್ಕೆ ಇಳಿಯುವುದಿಲ್ಲ. ಆದರೆ ಇಲ್ಲೊಂದು ಹೋಟೆಲ್ ನಲ್ಲಿ ನಡೆದ ಘಟನೆ ಬಗ್ಗೆ ಕೇಳಿದ್ರೆ ಈ ಪುಡಿ ರೌಡಿಗಳ ಬಗ್ಗೆ ನಿಮಗೂ ಕೋಪ ಬರುತ್ತದೆ. ಅಷ್ಟಕ್ಕೂ ಅವರು ಮಾಡದ್ದೇನು ಗೊತ್ತಾ?

ಇತ್ತೀಚೆಗೆ ಬೆಂಗಳೂರಿನಲ್ಲಂತೂ ನಗದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು, ಬಡಪಾಯಿಗಳ ಮೇಲೆ ದುರ್ವರ್ತನೆ ತೋರುತ್ತಿದ್ದಾರೆ. ದೊಡ್ಡವರು ಚಿಕ್ಕವರು ಎಂದು ನೋಡದೆ ಏನು ಬೇಕಾದರೂ ಮಾಡುತ್ತಾರೆ. ಕಳೆದ ತಿಂಗಳಷ್ಟೇ ಬೇಕರಿಯಲ್ಲಿ ಯುವಕರ ಮೇಲಿನ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ನುಗ್ಗಿದ ಪುಂಡರು ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬುಧವಾರ ರಾತ್ರಿ 11 ಗಂಟೆ ವೇಳೆಗೆ 4 ಜನ ಪುಂಡರು ಕಬಾಬ್ ಬೇಕು ಎಂದು ಕೋಣನಕುಂಟೆಯ ಮಾಲ್ಗುಡಿ ನಾಟಿ ಸ್ಟೈಲ್ ಹೋಟೆಲಿಗೆ ಬಂದಿದ್ದಾರೆ. ಹೋಟೆಲ್ ಹುಡುಗರು ಕಬಾಬ್ ಪಾರ್ಸೆಲ್ ಕಟ್ಟಿ ಕೊಟ್ಟಿದ್ದರು. ಬಿಲ್ 120 ರೂ. ಆಗಿದ್ದು, ಆದರೆ ಅವರು 90 ರೂ. ಮಾತ್ರ ಕೊಟ್ಟು ಹಣ ಕಡಿಮೆಯಿದೆ ಮೊತ್ತೊಮ್ಮೆ ಬಂದು ಕೊಡುತ್ತೇವೆ ಎಂದು ಹೇಳಿ ಹೋಗಿದ್ದರು. ಆದರೆ ವಾಪಸ್ ಬಂದ ಪುಂಡರು ಕಬಾಬ್ ಪೀಸ್ ಕಡಿಮೆ ಕೊಟ್ಟಿದ್ದೀರಾ ಎಂದು ನಮ್ಮ ಹುಡುಗರ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ತುಟಿ ಹಾಗೂ ತಲೆಯಲ್ಲಿ ರಕ್ತ ಬರುವ ರೀತಿಯಲ್ಲಿ ಹೊಡೆದಿದ್ದಾರೆ.

ಆರೋಪಿಗಳು ಯಾವಾಗಲೂ ಗಾಂಜಾ ಹೊಡೆದುಕೊಂಡು ಓಡಾಡುತ್ತಾರೆ. ಅಂದು ಅವರು ಗಾಂಜಾ ಮತ್ತಿನಲ್ಲೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಅಲ್ಲದೆ ಅವರು ನಮ್ಮ ಹೋಟೆಲ್ ಮುಂದಿನ ರಸ್ತೆಯಲ್ಲೇ ವಾಸವಿದ್ದಾರೆ ಎಂದು ಹೋಟೆಲ್ ಮಾಲಿಕ ಬಾಬಣ್ಣ ತಿಳಿಸಿದರು. ಪುಂಡರು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.