ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಕೊಡುವಂತಿಲ್ಲ| ಕೊಟ್ಟರೆ ಪರವಾನಗಿ ರದ್ದು| ಮೆಡಿಕಲ್ ಶಾಪ್ ಗಳಿಗೆ ಖಡಕ್ ಎಚ್ಚರಿಕೆ!!

ಇತ್ತೀಚೆಗೆ ಸರ್ಕಾರವು ಮಧ್ಯ ಖರೀದಿ ವಯಸ್ಸನ್ನು ಇಳಿಳಿಸುವ ಕುರಿತು ತನ್ನ ಅಭಿಪ್ರಾಯ ತಿಳಿಸಿ ಸಾಕಷ್ಟು ವಿರೋಧವನ್ನು ಎದುರಿಸಿತ್ತು. ಬಳಿಕ ಆ ನಿರ್ಧಾರವನ್ನು ಕೈ ಬಿಟ್ಟಿತ್ತು. ಇದೀಗ ಇಂತಹದೇ ಮತ್ತೊಂದು ಮಹತ್ವದ ಆದೇಶವನ್ನು ಸರ್ಕಾರದ ಆಧೀನದಲ್ಲಿರುವ ಔಷಧ ನಿಯಂತ್ರಣ ‌ಮಂಡಳಿಯು ಹೊರಡಿಸಿದೆ.

ಇತ್ತೀಚಿಗೆ ಬೆಂಗಳೂರಿನಲ್ಲಿ ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕದಂತಹ ಮಾತ್ರೆಗಳಿರುವುದು ಪತ್ತೆಯಾಗಿದ್ದವು. ಈ ಘಟನೆಯ ಬಳಿಕ ಸಮಾಜ, ಮಕ್ಕಳನ್ನು ನಿಯಂತ್ರಿಸುವುದು ಹೇಗೆಂಬ ಪ್ರಶ್ನೆಯಾಗಿದ್ದು, ಇದು ಸಮಾಜವೇ ತಲೆತಗ್ಗಿಸುವ ವಿಚಾರವಾಗಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ ಒಳ್ಳೆಯದಕ್ಕಿಂತ ಕೆಟ್ಟ ಬದಲಾವಣೆಗಳು ಸದಾ ಸುದ್ದಿಯಲ್ಲಿದೆ. ಇತ್ತೀಚಿಗಷ್ಟೇ ಮಕ್ಕಳ ಶಾಲಾ ಬ್ಯಾಗ್ ನಲ್ಲಿ ಸಿಗಬಾರದು ಸಿಕ್ಕಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಔಷಧ ನಿಯಂತ್ರಣ ‌ಮಂಡಳಿ ಮಹತ್ವದ ಆದೇಶ ಹೊರಡಿಸಿದೆ.

ಮಕ್ಕಳು ಕೆಟ್ಟ ಚಟಕ್ಕೆ ಬೀಳುತ್ತಿರುವ ಆತಂಕದ ಮಧ್ಯೆ ಹೊಸ ಕಾನೂನು ರೂಪಿಸಿದೆ. ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾದ ಕಾರಣ ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಕೊಡಬಾರದೆಂದು ಮೆಡಿಕಲ್ ಶಾಪ್ ಗಳಿಗೆ ಖಡಕ್ ಸೂಚನೆ ರವಾನಿಸಿದೆ. ಅಪ್ರಾಪ್ತ ಮಕ್ಕಳಿಗೆ ಇಂಥ ಅನಗತ್ಯ ವಸ್ತುಗಳನ್ನು ನೀಡಬಾರದು ಎಂಬುದು ಕಾನೂನಿನಲ್ಲೇ ಇದೆ. ಅದರೊಂದಿಗೆ ಔಷಧ ನಿಯಂತ್ರಣ ಮಂಡಳಿಯ ಈ ನಿರ್ಧಾರವು ಮಹತ್ವದೆನಿಸಿದೆ.

ಇನ್ನು ಈ ಬಗ್ಗೆ ರಾಜ್ಯ ಔಷಧ ನಿಯಂತ್ರಕರಾದ ಬಿ ಟಿ ಖಾನಾಪುರೆ ಪ್ರತಿಕ್ರಿಯಿಸಿದ್ದು, ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆಗಳನ್ನು ಆನ್ ದಿ ಕೌಂಟರ್ ಕೊಡಬಾರದೆಂದು ರಿಸ್ಟ್ರಿಕ್ಟ್ ಮಾಡಲಾಗಿದೆ. ೧೮ ವರ್ಷದೊಳಗಿನ ಮಕ್ಕಳು ಇವುಗಳನ್ನು‌ ಕೇಳಿದ್ದಲ್ಲಿ ನಿರಾಕರಿಸುವಂತೆ ತಿಳಿಸಲಾಗಿದೆ. ಈಗಾಗಲೇ ಎಲ್ಲಾ ಮೆಡಿಕಲ್ ಶಾಪ್ ಗಳಿಗೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ.. ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೋಮ್ ಪ್ರಕಟಣ ಬೆನ್ನಲೆ ಇತಹ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಹಾಗೂ ನಗರ ಸಭೆಗಳ ವಾರ್ಡ್ ಮಟ್ಟದಲ್ಲಿ ಜಾಗೃತಿ ಸಮಿತಿಯ ರಚಿಸಲಿದ್ದೇವೆ. ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಶಿಕ್ಷಕರು, ಸ್ವಸಹಾಯ ಸಂಘದವರ ಸಹಯೋಗದಲ್ಲಿ ಈ ಸಮಿತಿ ರಚಿಸಲಾಗುತ್ತಿದೆ. ಇದನ್ನು ಮೇಲುಸ್ತಾವರಿ ಮಾಡಲು ಗ್ರಾಮ ಪಂಚಾಯತಿ ಪಿಡಿಒ, ಕಾರ್ಯದರ್ಶಿ, ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಸಮಿತಿ ಇರಲಿದೆ ಎಂದು ತಿಳಿಸಿದರು.

ಮಕ್ಕಳ ಸಹಾಯವಾಣಿ 1098 ಈವರೆಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ರಾಷ್ಟ್ರ ಮಟ್ಟದಲ್ಲಿ ನಿಯಮಾವಳಿ ರಚನೆಯಾಗುತ್ತಿದ್ದು, 112 ಜೊತೆಗೆ ಈ ಸಹಾಯವಾಣಿಯನ್ನು ಸಂಯೋಜಿಸಲು ಚರ್ಚೆ ನಡೆದಿದೆ. ಅದಕ್ಕೆ ಹಿರಿಯ ನಾಗರಿಕರು, ಸಮಾಜ ಸೇವಕರನ್ನು ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ ನಂತರ ಇದು ಚಾಲ್ತಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದರು.

Leave A Reply

Your email address will not be published.