ಮಕ್ಕಳಿಗೆ ಉಚಿತ ಟ್ಯಾಬ್ | ಅರ್ಜಿ ಹಾಕುವ ವಿಧಾನ ಇಲ್ಲಿದೆ
ಕಾರ್ಮಿಕರ ಏಳಿಗೆಗಾಗಿ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹಲವಾರು ಯೋಜನೆಗಳ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರದ ವತಿಯಿಂದ ಶ್ರಮಿಕ್ ಟ್ಯಾಬ್ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಕಾರ್ಮಿಕ ಕಾರ್ಡ್ ಹೊಂದಿರುವ ಫಲಾನುಭವಿಗಳ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ನೀಡಲಾಗುತ್ತಿದೆ. ಈ ಟ್ಯಾಬ್ 24,000 ಮೊತ್ತದ ಮೂರು ಜಿಬಿ ಸಾಮರ್ಥ್ಯದ ಟ್ಯಾಬ್ ಆಗಿರುತ್ತದೆ. ಹಾಗೂ ಈ ಟ್ಯಾಬ್ ಫ್ರೀ ಲೋಡೆಡ್ ಕ್ಲಾಸ್ ಗಳನ್ನು ಒಳಗೊಂಡಿರುತ್ತದೆ.
ಟ್ಯಾಬ್ ಪಡೆಯಲು ಬೇಕಾಗಿರುವ ಅರ್ಹತೆಗಳು:-
● ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯ ತಂದೆ ತಾಯಿಯರಲ್ಲಿ ಒಬ್ಬರು ಕಡ್ಡಾಯವಾಗಿ ಲೇಬರ್ ಕಾರ್ಡ್ ಹೊಂದಿರಬೇಕು.
● ಈ ಹಿಂದೆ ಯಾವುದೇ ಯೋಜನೆಯಡಿಯಲ್ಲಿ ಟ್ಯಾಬ್ ಪಡೆದಿರಬಾರದು.
ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ, ಯಾವುದೇ ರೀತಿ ಆನ್ಲೈನ್ ಅಪ್ಲಿಕೇಶನ್ ಹಾಕಲು ಅವಕಾಶಗಳು ಇಲ್ಲ. ಹಾಗಾಗಿ ನೇರವಾಗಿ ಜಿಲ್ಲಾ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅಧಿಕೃತ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಸದ್ಯಕ್ಕೆ ಈ ಯೋಜನೆ ಅಡಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಯೋಜನೆಯನ್ನು ಪ್ರಾರಂಭಗೊಳಿಸಲಾಗುತ್ತಿದೆ. ಪ್ರಸ್ತುತ 400 ಟ್ಯಾಬ್ಗಳು ಬಂದಿದ್ದು ಮುಂದೆ ಸಾವಿರಾರು ಟ್ಯಾಬ್ಗಳು ಬರುವುದು ಎಂದು ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಈ 400 ಟ್ಯಾಬ್ಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಕೂಡಲೇ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕೆಂದು ಕೋರಿದೆ.
ಸದ್ಯಕ್ಕೆ ಕಾರ್ಮಿಕರ ಮಕ್ಕಳಿಗಾಗಿ ಜಾರಿಗೆಗೋಳಿಸಿ
ಹಾಗಾದರೆ ನು? *
ಅರ್ಜಿ ಸಲ್ಲಿಸುವುದು ಹೇಗೆ? ಹಾಗಾದರೆ ಅರ್ಜಿ ಸಲ್ಲಿಸಲು
ಬೇಕಾಗಿರುವ ದಾಖಲೆಗಳು:-
● ಲೇಬರ್ ಕಾರ್ಡ್ ದಾಖಲಾತಿ
● ವಿದ್ಯಾರ್ಥಿಯು 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ಬಗ್ಗೆ ವ್ಯಾಸಂಗ ಪ್ರಮಾಣ ಪತ್ರ
● ರೇಷನ್ ಕಾರ್ಡ್
● ಈ ಹಿಂದೆ ಯಾವುದೇ ಯೋಜನೆಯಲ್ಲಿ ಟ್ಯಾಬ್ ಪಡೆಯದಿರುವ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು.
ಈ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಹ ಫಲಾನುಭವಿಗಳನ್ನು ಜೇಷ್ಠತೆಯ ಹಾಗೂ ದಾಖಲೆಯ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ತಾಲೂಕಾವಾರು ಟ್ಯಾಬ್ ವಿತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲವೊಂದು ಜಿಲ್ಲೆಗಳಲ್ಲಿ ಇನ್ನೂ ಈ ಯೋಜನೆಯು ಪ್ರಾರಂಭವಾಗಿಲ್ಲದೆ ಇದ್ದರೆ, ಯೋಜನೆಯ ಬಗ್ಗೆ ಹಾಗೂ ಅದನ್ನು ಯಾವಾಗ ಪ್ರಾರಂಭಿಸುತ್ತಾರೆ ಎನ್ನುವುದರ ಬಗ್ಗೆ ನಿಮ್ಮ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಿರಿ.