ಮದ್ಯ ಖರೀದಿ ವಯಸ್ಸು ಇಳಿಕೆ ವಿಚಾರ | ಸಾರ್ವಜನಿಕರ ವಿರೋಧ, ನಿರ್ಧಾರ ಕೈ ಬಿಟ್ಟ ಸರಕಾರ
ಮದ್ಯ ಖರೀದಿಯ ವಯಸ್ಸಿನ ಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡುವ ಪ್ರಸ್ತಾಪವನ್ನು ಅಬಕಾರಿ ಇಲಾಖೆಯು ಕೈ ಬಿಟ್ಟಿದೆ. ತೀವ್ರ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಮಧ್ಯ ಖರೀದಿಯ ನಿಯಮವನ್ನು ಮತ್ತೆ ತಿದ್ದುಪಡಿಯನ್ನು ಮಾಡಿದೆ.
ಅಬಕಾರಿ ಆಯುಕ್ತರು ಈ ಸಂಬಂಧ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಕೈ ಬಿಡಲಾಗಿದೆ. ಮದ್ಯ ಖರೀದಿಯ ವಯೋಮಿತಿ ಮೊದಲಿನಂತೆ 21 ವರ್ಷವೇ ಆಗಿರುತ್ತದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಕರ್ನಾಟಕ ಅಬಕಾರಿ ಕಾಯಿದೆ ಪ್ರಕಾರ 18 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿದೆ ಹಾಗೂ 21 ವರ್ಷದವರೆಗೆ ಮಧ್ಯ ಖರೀದಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ನಿಯಮದ ತಿದ್ದುಪಡಿ ಬಯಸಿತ್ತು. ಆದರೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ಹಾಗೂ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀಸೆ ಹುಟ್ಟೋ ಮೊದ್ಲೇ ಸೀಸೆಗೆ ಪರ್ಮಿಟ್…!! ಮದ್ಯ ಖರೀದಿ ವಯಸ್ಸಿನ ಮಿತಿ 21 ರಿಂದ 18 ಕ್ಕೆ ಇಳಿಕೆ