1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧ ಪಟ್ಟಂತೆ , ಇದೀಗ ವಿಷಯವಾರು ತಾತ್ಕಾಲಿಕ ಪರಿಶೀಲನಾ ಪಟ್ಟಿ ಮತ್ತು ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಈ ತಾತ್ಕಾಲಿಕ ಪರಿಶೀಲನಾ ಪಟ್ಟಿ ತಯಾರಿಸಲಾಗಿದೆ.
ವಿಷಯವಾರು ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ರಿಜಿಸ್ಟ್ರೇಷನ್‌ ನಂಬರ್, ಅಭ್ಯರ್ಥಿಗಳು ಕೇಳಿದ ಮೀಸಲಾತಿ, ಒಟ್ಟು ಅಂಕಗಳು, ಇತರೆ ಮಾಹಿತಿಗಳನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಈ ಸದರಿ ಪಟ್ಟಿ ಚೆಕ್‌ ಮಾಡಲು ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

 

ಮೂಲ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳು ಹಾಜರುಪಡಿಸಬೇಕಾದ ದಾಖಲೆಗಳ ವಿವರ ಹೀಗಿದೆ:
ವಯೋಮಿತಿ ಅರ್ಹತೆ ಪ್ರಮಾಣ ಪತ್ರ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಸಹ ಆಗುತ್ತದೆ), ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ, ಜಾತಿ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಬೇಕಾಗುತ್ತವೆ. ಕನ್ನಡ ಮಾಧ್ಯಮ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು , ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ, ಅಂಗವಿಕಲ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ ಬೇಕಾಗುತ್ತವೆ.

ಸೇವಾ ನಿರತ ಅಭ್ಯರ್ಥಿಗಳ ಪ್ರಮಾಣ ಪತ್ರ, ಸಂಬಂಧಪಟ್ಟ ತಾಲ್ಲೂಕು ತಾಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರದ ಜೊತೆಗೆ 2 ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರ ಬೇಕಾಗುತ್ತದೆ. ಪ್ರಮಾಣ ಪತ್ರಗಳ ಪೈಕಿ ಮೀಸಲಾತಿಗೆ ಸಂಬಂಧಿಸಿದಂತೆ ಅನ್ವಯವಾಗುವ ಎಲ್ಲ ದಾಖಲೆಗಳನ್ನು ಹಾಜರು ಪಡಿಸಬೇಕಾಗಿದ್ದು ಮೇಲ್ಕಂಡ ಎಲ್ಲಾ ಮೂಲ ದಾಖಲೆಗಳ 2 ಸೆಟ್ ಜೆರಾಕ್ಸ್‌ ಪ್ರತಿಗಳನ್ನು ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ.

ಸದ್ಯ ಪ್ರಕಟಿಸಿದ ಲಿಸ್ಟ್‌ನಲ್ಲಿ ಹೆಸರು ಪಡೆದ ಅಭ್ಯರ್ಥಿಗಳು ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ಈ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಿರುತ್ತದೆ. ಅಲ್ಲದೇ ನೇಮಕಾತಿ ಪ್ರಾಧಿಕಾರ ಹಾಗೂ ನೇರ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ನಡೆಯಲಿದೆ.

ಇತ್ತೀಚೆಗಷ್ಟೇ ಕೆಇಎ ಕೆಲವು ಅಭ್ಯರ್ಥಿಗಳು ಫ್ಯಾಷನ್ ಟೆಕ್ನಾಲಜಿ ಮತ್ತು ಇಲೆಕ್ಟ್ರಾನಿಕ್ಸ್‌, ಸೂಕ್ಷ್ಮ ಜೀವ ಶಾಸ್ತ್ರ ವಿಷಯಗಳಿಗೆ ಸಮಾನ ವಿದ್ಯಾರ್ಹತೆಯ ಬಗ್ಗೆ ಸ್ಪಷ್ಟನೆ ಕೇಳಿದ್ದ ಕುರಿತಂತೆ ಮೂಲ ದಾಖಲೆ ಪರಿಶೀಲನೆಗಾಗಿ ಸೂಚನೆಯ ಪ್ರಕಟಣೆ ನೀಡಿದೆ. ಇದರ ಜೊತೆಗೆ ಇತ್ತೀಚೆಗೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತೆ ಪಡೆದ ಎರಡು ಹೆಚ್ಚುವರಿ ಪಟ್ಟಿಗಳನ್ನು ಕೂಡ ಬಿಡುಗಡೆ ಮಾಡಲಾಗಿತ್ತು.

Leave A Reply

Your email address will not be published.