ವಾಯುವ್ಯ ರೈಲ್ವೆಯಲ್ಲಿ 2026 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭ! ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನ, ಲಿಂಕ್ ಎಲ್ಲವೂ ಇಲ್ಲಿದೆ ನೋಡಿ!

Share the Article

ರೈಲ್ವೆ ನೇಮಕಾತಿ ಮಂಡಳಿ, ವಾಯುವ್ಯ ರೈಲ್ವೆ ವಿಭಾಗವು 2026 ಆಕ್ಟ್‌ ಅಪ್ರೆಂಟಿಸ್ ಪೋಸ್ಟ್‌ಗಳ ಭರ್ತಿಗೆ ಕಳೆದ ಡಿಸೆಂಬರ್‌ನಲ್ಲಿ ಅಧಿಸೂಚಿಸಿತ್ತು. ಸದರಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇರುವ ನಿಯಮಾವಳಿಗಳನ್ನು ಹಾಗೂ ಅಪ್ಲಿಕೇಶನ್‌ ಲಿಂಕ್ ಬಿಡುಗಡೆ ಮಾಡಿದೆ.

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಮುಖ ಅರ್ಹತೆಗಳೆಂದರೆ ಕನಿಷ್ಠ ಶೇ.50 ಅಂಕಗಳೊಂದಿಗೆ 10 ನೇ ತರಗತಿ ಪಾಸ್‌ ಜತೆಗೆ, ಐಟಿಐ ವಿದ್ಯಾರ್ಹತೆಯನ್ನು ಹುದ್ದೆಗಳಿಗೆ ಸಂಬಂಧಿತ ಟ್ರೇಡ್‌ನಲ್ಲಿ ಪಾಸ್‌ ಮಾಡಿರಬೇಕು. ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜಾತಿವಾರು ಮೀಸಲಾತಿ ನಿಯಮ ಅರ್ಹರಿಗೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ ವಿವರ ಹೀಗಿದೆ
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ರೂ.100.
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಅರ್ಜಿ ಸಲ್ಲಿಸುವ ವಿಧಾನ ಹೇಗೆಂದರೆ

  • ವೆಬ್‌ಸೈಟ್‌ ವಿಳಾಸ https://rrcactapp.in/ ಕ್ಕೆ ಭೇಟಿ ನೀಡಿ.
  • ಓಪನ್ ಆದ ವೆಬ್‌ಪೇಜ್‌ನ ಎಡಭಾಗದಲ್ಲಿ ‘New Registration’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ತೆರೆಯುವ ಪೇಜ್‌ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಟೈಪ್ ಮಾಡಿ. ಮೊದಲು ರಿಜಿಸ್ಟರ್‌ ಪಡೆಯಿರಿ.
  • ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ ಜೆನೆರೇಟ್‌ ಆಗುತ್ತದೆ.
  • ನಂತರ ಅದೇ ಪೇಜ್‌ನಲ್ಲಿ ‘Applicant Login’ ಎಂದಿರುವ ಆಯ್ಕೆ ಕ್ಲಿಕ್ ಮಾಡಿ.
  • ಇಮೇಲ್‌ / ಪಾಸ್‌ವರ್ಡ್‌ ಅಥವಾ ಇಮೇಲ್‌ ಐಡಿ/ ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್‌ ಆಗಿ.
  • ಅರ್ಜಿಗೆ ಕೇಳಲಾದ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್‌ ಪೂರ್ಣಗೊಳಿಸಿ.
  • ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಆನ್‌ಲೈನ್‌ ಹೊರತುಪಡಿಸಿ ಇತರೆ ಯಾವುದೇ ಮಾರ್ಗದಲ್ಲಿ ಆಗಲಿ, ಅಂಚೆ ಮೂಲಕ / ನೇರವಾಗಿ ಆಗಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್ ಸಲ್ಲಿಕೆಗೆ ಆನ್‌ಲೈನ್‌ ಲಿಂಕ್ ಬಿಡುಗಡೆ ದಿನಾಂಕ : 10-01-2023
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 10-02-2023 ರ ರಾತ್ರಿ 11-59 ಗಂಟೆ ವರೆಗೆ.

Leave A Reply